ಆಕಾಶದಲ್ಲರಳಿದ ಹೂ

Author : ಹೆಚ್.ಜಿ. ರಾಧಾದೇವಿ

Pages 144

₹ 32.00




Year of Publication: 1997
Published by: ಕೀರ್ತಿ ಪ್ರಕಾಶನ
Address: ನಂಬರ್ 2, ಎಸ್.ಡಿ.ಎಂ.ಲೇನ್, ಮನವಾರ್ತಿಪೇಟಿ, ಬೆಂಗಳೂರು- 53

Synopsys

‘ಆಕಾಶದಲ್ಲರಳಿದ ಹೂ’ ಲೇಖಕಿ ಹೆಚ್. ಜಿ. ರಾಧಾದೇವಿ ಅವರು ರಚಿಸಿರುವ ಸಾಮಾಜಿಕ ಕಾದಂಬರಿ. ನಾಯಕಿ ಗೋದಾ ಅತ್ಯಂತ ಸದ್ಗುಣವಂತೆ. ಆದರೆ ಅವಳ ಸದ್ಗುಣ, ಆದರ್ಶಗಳು, ದ್ವೇಷ, ಅಸೂಯೆ ಹಾಗೂ ಅಧಿಕಾರ ಚಲಾವಣೆಯ ಅನೇಕರಿಗೆ ಅಪ್ರಿಯವಾಗುತ್ತದೆ.. ಬದುಕನ್ನು ತಾಳ್ಮೆ, ಸಂಯಮದಿಂದಲೆ ಗೆದ್ದು, ತನ್ನ ಸುತ್ತಲಿದ್ದ ಹಲವರ ಬದುಕಿಗೆ ಬೆಳಕಾಗುತ್ತಾಳೆ. ಈಗಿನ ಕಾಲದ ಸ್ತ್ರೀ ಸಮಾನತೆ ವಾದ, ಸ್ತ್ರೀಯರ ಶೋಷಣೆ ನಿಲ್ಲಬೇಕು, ನೊಂದ ಸ್ತ್ರೀಗೆ ನೆರವು ಕೊಡಬೇಕು. ಈ ಯಾವ ವೇದಿಕೆ, ಉದ್ಗಾರಗಳ ಸೊಂಕಿಲ್ಲದ ತಾನು ನೊಂದವರ ಬದುಕಿನಲ್ಲಿ ನಲಿವು ತರುತ್ತಾಳೆ, ಗೋದಾ ಪುರುಷ ದ್ವೇಷಿ ಅಲ್ಲ, ಸಮರ್ಥ ಹೆಂಗಸು ತನ್ನ ಪ್ರತಿಭೆಯಿಂದಲೇ ಎಲ್ಲಾ ಪಡೆಯುತ್ತಾಳೆ. ಸಮಾನತೆ ಬೇಕು ಎಂದು ಮೇಜು ಕುಟ್ಟಿ ವಾದಿಸುತ್ತಾ, ಪುರುಷ ದ್ವೇಷ ಮಾಡುತ್ತಾ ಪುರುಷರ ಬಗ್ಗೆ ನೂರು ಆಪಾದನೆಯಲ್ಲಿ ಸಮಯ ಕಳೆಯುವುದಲ್ಲ ಎಂದು ಗೋದಾಳ ಪಾತ್ರದ ಮೂಲಕ ವಿವರಿಸಲಾಗಿದೆ.

About the Author

ಹೆಚ್.ಜಿ. ರಾಧಾದೇವಿ - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books