ತಲ್ಲಣಿಸದಿರು ಮನವೇ

Author : ಆರತಿ ವೆಂಕಟೇಶ್

Pages 280

₹ 150.00




Year of Publication: 2008
Published by: ಓಂ ಶಕ್ತಿ ಪ್ರಕಾಶನ

Synopsys

ಆರತಿ ವೆಂಕಟೇಶ್ ರವರು ವೃತ್ತಿಯಲ್ಲಿ ವೈದ್ಯೆಯಾಗಿರುವುದರಿಂದ ಆರೋಗ್ಯ ಸಮಸ್ಯೆಗಳ ಬಗ್ಗೆ ನಿಖರವಾಗಿ ಹಾಗೂ ಅತ್ಯಂತ ಸ್ಫುಟವಾಗಿ... ಆಕರ್ಷಕವಾಗಿ ಬರೆಯಬಲ್ಲರು.ಪುಸ್ತಕವನ್ನು ಕೈಗೆತ್ತಿಕೊಂಡರೆ ಕೆಳಗೆ ಇಡದಂತೆ ಒಂದೇ ಓಘದಲ್ಲಿ ಓದಿಸಿಕೊಂಡು ಹೋಗುವುದು ಇವರ ಕಾದಂಬರಿಗಳ ವಿಶೇಷ. ಮನಸ್ಸು ಇದಕ್ಕೆ ಸಮಾನವಾದ...ಅದನ್ನು ಮಿಂಚಿದ ಅದ್ಭುತವುಂಟೇ? ಮನಸ್ಸು ಎಲ್ಲಿದೆ ಎಂದು ಯಾರಿಗೂ ತಿಳಿಯದಾದರೂ ಸಹ ಅದರ ಅಸ್ತಿತ್ವ ಮಾತ್ರ ಅದೆಷ್ಟು ಗಹನ ....ಸೋಜಿಗ! ಮನುಷ್ಯ ಹೊರನೋಟಕ್ಕೆ ಆರೋಗ್ಯಕರವಾಗಿ ಕಂಡರೂ ಸಹ ಮಾನಸಿಕ ಆರೋಗ್ಯ ಕೂಡ ಅಷ್ಟೇ ಮುಖ್ಯ.ಜೀವನದಲ್ಲಿ ಸಂಕಷ್ಟಗಳು ...ಸಂಘರ್ಷಗಳು ಸಹಜವಾಗಿ ಎದುರಾದಾಗ ಅವನ್ನು ಸಶಕ್ತವಾಗಿ... ಧೈರ್ಯವಾಗಿ ಎದುರಿಸಿ ಜೀವನವನ್ನು ಸಕಾರಾತ್ಮಕವಾಗಿ ಮುನ್ನಡೆಸಿಕೊಂಡು ಹೋಗುವ ಶಕ್ತಿಇದ್ದರೆ ಬಾಳು ಸುಲಲಿತ....ದೃಢಕಾಯ ಶರೀರದಲ್ಲಿ ಮಾನಸಿಕ ಸ್ಥಿರತ್ವ ಕೂಡ ಇದ್ದಲ್ಲಿ ಆ ಮನುಷ್ಯ ನಿಜಕ್ಕೂ ಆರೋಗ್ಯವಂತ. ಶರೀರಕ್ಕೆ ಕಾಯಿಲೆ ಬಂದರೆ ಅದನ್ನು ಸುಲಭವಾಗಿ ಔಷಧಿಗಳನ್ನು ಕೊಟ್ಟು ಪರಿಹರಿಸಬಹುದು. ಆದರೆ ಸುಪ್ತಮನಸ್ಸಿನ ಒಳತೋಟಿಗಳು ...ತುಮುಲಗಳು ಚಂಚಲತೆಗಳು... ವಿಕಲತೆಗಳು...ವಿಕಾರತೆಗಳು ಯಾರಿಗೆ ತಾನೇ ತಿಳಿಯಲು ಸಾಧ್ಯ? ಹಲವಾರು ಬಾರಿ ತುಂಬಾ ಆರೋಗ್ಯಕರವಾಗಿ ಕಾಣುವ ಮನುಷ್ಯರು ಅತ್ಯಂತ ಗಂಭೀರ ಮಾನಸಿಕ ವಿಕಲತೆ ಯಿಂದ ನರಳುತ್ತಲೂ ಇರಬಹುದು...ಇದಕ್ಕೆ ಹಲವಾರು ಕಾರಣಗಳು ಉಂಟಾದರೂ ಸಹ ಬಾಲ್ಯದಲ್ಲಿಮುಗ್ಧ ಸೂಕ್ಷ್ಮ ಮನಸ್ಸಿನ ಮೇಲೆ ಬೀಳುವಂತಹ ಒತ್ತಡಗಳು ಮನುಷ್ಯನ ಇಡೀ ಜೀವನವನ್ನೇ ನಿರ್ದೇಶಿಸುವ ಮಟ್ಟಕ್ಕೆ ನಿಯಂತ್ರಿಸಬಹುದು...ಈ ಕಾದಂಬರಿ ಸಹ ಇಂತಹದೇ ಒಂದು ಕಥಾವಸ್ತುವನ್ನು ಆಧರಿಸಿದೆ. ಮನೋರೋಗಕ್ಕೆ ಮದ್ದಿಲ್ಲ ಎಂದು ಒಂದಾನೊಂದು ಕಾಲದಲ್ಲಿ ಹೇಳುತ್ತಿದ್ದುದುಂಟು.ಆದರೆ ಈಗವೈದ್ಯಕೀಯ ಜಗತ್ತು ಬಹಳವೇ ಮುಂದುವರೆದಿದೆ.ಯಾವುದೇ ರೀತಿಯ ಮನೋವ್ಯಾಧಿಗೆ ಚಿಕಿತ್ಸೆ ನೀಡುವ ಮಟ್ಟಕ್ಕೆ ವೈದ್ಯಲೋಕ ಪ್ರಗತಿಯನ್ನು ಕಂಡಿದೆ.ಆದರೆ ಸಮಾಜ ಅದಕ್ಕೆ ಸಹಕರಿಸಬೇಕಾಗಿದೆ. ಈ ಕಾದಂಬರಿಯು ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು

About the Author

ಆರತಿ ವೆಂಕಟೇಶ್
(15 February 1964)

ಕಾದಂಬರಿಗಾರ್ತಿ ಆರತಿ ವೆಂಕಟೇಶ್ ಅವರು 1964 ಫೆಬ್ರವರಿ 15ರಂದು ಜನಿಸಿದರು. ತಂದೆ ನವರತ್ನರಾಮ್, ತಾಯಿ ಉಷಾ ನವರತ್ನರಾಮ್. ’ಆಶಾಕಿರಣ, ಅಮೃತಬಿಂದು, ನಿನಗಾಗಿ ನಾನೋಡಿ ಬಂದೆ, ಜೀವನ ಸಂಧ್ಯಾ, ಅಗೋಚರ, ಮುಕುಕಿದೀ ಮಬ್ಬಿನಲಿ, ಮಾಫಲೇಶುಕದಾಚನ, ಯಾವ ಮುರಳಿ ಕರೆಯಿತು, ತಲ್ಲಣಿಸದಿರು ಮನವೆ, ಧರಿತ್ರಿ’ ಮುಂತಾದ 30ಕ್ಕೂ ಹೆಚ್ಚು ಕಾದಂಬರಿ ರಚಿಸಿದ್ದಾರೆ. ...

READ MORE

Related Books