ವಿಪ್ಲವ

Author : ಮ. ರಾಮಮೂರ್ತಿ

Pages 166

₹ 2.00




Year of Publication: 1947
Published by: ವೀರಕೇಸರಿ ಪ್ರಕಟಣಾಲಯ
Address: ಬೆಂಗಳೂರು

Synopsys

ಕನ್ನಡ ಹೋರಾಟಗಾರರೂ ಲೇಖಕರೂ ಆಗಿದ್ದ ಮ. ರಾಮಮೂರ್ತಿಯವರು ಬರೆದ ಕಾದಂಬರಿ. ಸ್ವಾತಂತ್ರ ಹೋರಾಟದ ಮುಖ್ಯ ಘಟ್ಟಗಳನ್ನು ಇಟ್ಟುಕೊಂಡು ಬರೆದಿರುವ ಕಾದಂಬರಿ ಇದು, ಚರಿತ್ರೆಯ ಸತ್ಯವನ್ನು ಇಟ್ಟುಕೊಂಡೇ ಕಾದಂಬರಿಯ ರಸವತ್ತತೆಯನ್ನೂ ಪೋಷಿಸಿರುವುದಾಗಿ ಲೇಖಕರು ಹೇಳಿದ್ದಾರೆ. ಭಾರತದ ವೀರ ಕಥೆಗಳು, ಬ್ರಿಟಿಷರ ಆಡಳಿತದ ವಿಧ್ವಂಸಕ ಗಾಥೆಗಳ ಚಿತ್ರಣ ಈ ಕಾದಂಬರಿಯಲ್ಲಿದೆ. ಇಲ್ಲಿ ಒಬ್ಬ ಕಥಾ ನಾಯಕನ ಮೇಲೆ ಕಥೆಯನ್ನು ಕೇಂದ್ರೀಕರಿಸದೆ, ಹಲವರ ಸಾಹಸದ ಕಥೆಗಳ ಗುಚ್ಛವಾಗಿ ನಿರೂಪಿಸಿರುವುದು ಒಂದು ವಿಶೇಷತೆ.

About the Author

ಮ. ರಾಮಮೂರ್ತಿ
(11 March 1918 - 25 December 1967)

ಅದ್ವಿತೀಯ ಕನ್ನಡ ಹೋರಾಟಗಾರ,  ಕಾದಂಬರಿಕಾರ, ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ಚಳವಳಿಯ ಅಧ್ವರ್ಯು, ಕನ್ನಡ ಸೇನಾನಿ ಮ. ರಾಮಮೂರ್ತಿ. 1960ರ ದಶಕದಲ್ಲಿ ಅನ್ಯಭಾಷಿಗರ ಪ್ರಾಬಲ್ಯದಿಂದ ಬೆಂಗಳೂರು ನಗರದಲ್ಲಿ ಕನ್ನಡಕ್ಕೆ ಹೀನಾಯ ಸ್ಥಿತಿ ಒದಗಿದಾಗ ಕನ್ನಡದ ವಾತಾವರಣವನ್ನು ಮೂಡಿಸಲು, ಕನ್ನಡಿಗರನ್ನು ಎಚ್ಚರಿಸಲು ಹುಟ್ಟಿಕೊಂಡದ್ದೇ ಕನ್ನಡ ಚಳವಳಿ. ಹೀಗೆ ಹೋರಾಟ ಮಾಡಲು ಪ್ರಾರಂಭಿಸಿದವರಲ್ಲಿ ಕೊಣಂದೂರು ಲಿಂಗಪ್ಪ, ಅ.ನ.ಕೃ. ಮೈ.ಸು.ನಟರಾಜ್, ಮೈ.ಸು. ಶೇಷಗಿರಿರಾವ್, ನಾಡಿಗೇರ ಕೃಷ್ಣರಾವ್, ಕರ್ಲಮಂಗಲಂ ಶ್ರೀಕಂಠಯ್ಯ ಮೊದಲಾದವರುಗಳ ಜೊತೆಗೆ ಕೈಜೋಡಿಸಿದವರು ಮ.ರಾಮಮೂರ್ತಿ.  ರಾಮಮೂರ್ತಿಯವರು 1918ರ ಮಾರ್ಚ್ 11ರಂದು ನಂಜನಗೂಡಿನಲ್ಲಿ ಜನಿಸಿದರು.  ಸಾಹಿತ್ಯ ವಾತಾವರಣದಿಂದ ಪ್ರೇರಿತರಾದ ಮ ರಾಮಮೂರ್ತಿಯವರು  ಬರೆದ ಮೊದಲ ...

READ MORE

Related Books