ವಿಸ್ಮೃತಿ

Author : ಅಶ್ವಿನಿ (ಎಂ. ವಿ. ಕನಕಮ್ಮ)

Pages 149

₹ 20.00




Year of Publication: 1991
Published by: ರಾಜಲಕ್ಷ್ಮೀ ಪ್ರಕಾಶನ
Address: ಬಳೆಪೇಟೆ ಚೌಕ್ ಬೆಂಗಳೂರು-53

Synopsys

'ವಿಸ್ಮೃತಿ' ಲೇಖಕಿ ಅಶ್ವಿನಿ (ಎಂ.ವಿ ಕನಕಮ್ಮ) ಅವರ ಸಾಮಾಜಿಕ ಕಾದಂಬರಿ. ಸುಧಾ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ. ಬಸ್‌ ಅಪಘಾತದಿಂದ ಪ್ರಾರಂಭವಾಗುವ ಈ ಕತೆಯು, ಕುಟುಂಬವೊಂದು ಅನುಭವಿಸುವ ಕಷ್ಟ ನಷ್ಟಗಳು ಕಾದಂಬರಿಯ ವಸ್ತು. ಹೆಣ್ಣಿನ ಸೌಂದರ್ಯಕ್ಕೆ ಮಾರುಹೋದ ಗಂಡಸೊಬ್ಬ ಆಕೆ ಅಪಘಾತಕ್ಕೆ ಸಿಲುಕಿ ಆಕೆಯ ಅಂದ ಹೊರಟು ಹೋದಾಗ ಆತನ ಮನಸ್ಸಿನಲ್ಲಿ ಬರುವ ಯೋಚನೆಗಳ ಸುತ್ತ ಕಾದಂಬರಿಯು ಹರಡಿಕೊಂಡಿದೆ..ತಾಯಿ -ಮಗನ ಸಂಬಂಧ, ಸೊಸೆ ಮತ್ತು ಅತ್ತೆಯ ನಡುವಿನ ಬಾಂಧವ್ಯದ ಮಹತ್ವವನ್ನು ಸಾರುವುದೂ ಕಾದಂಬರಿಯ ವಸ್ತುವಿನ ಪ್ರಮುಖ ಭಾಗವಾಗಿದೆ. 

About the Author

ಅಶ್ವಿನಿ (ಎಂ. ವಿ. ಕನಕಮ್ಮ)
(01 November 1933)

ಕಾದಂಬರಿಗಾರ್ತಿ ಅಶ್ವಿನಿ ಹುಟ್ಟಿದ್ದು ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮಂಗಲಂ ಎಂಬ ಗ್ರಾಮದಲ್ಲಿ. ತಂದೆ ವೆಂಕಟ ರಾಘವಾಚಾರ್ಯರು, ತಾಯಿ ಲಕ್ಷ್ಮಮ್ಮ. ರಾಮಾಯಣ, ಮಹಾಭಾರತ ಕಥೆಗಳನ್ನು ಮಿಡ್ಲೆ ಸ್ಕೂಲಿನಲ್ಲಿದ್ದಾಗಲೇ ಓದಿ ಮುಗಿಸಿದ್ದರು. ಇವರ ಓದಿನ ಆಸಕ್ತಿಯನ್ನು ಗಮನಿಸಿದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಮಯ್ಯನವರು ಹೆಚ್ಚಿನ ಪ್ರೋತ್ಸಾಹ ನೀಡಿದರು.  ಅಕೌಂಟೆಂಟ್‌ರವರ ಕಚೇರಿಯಲ್ಲಿದ್ದಾಗಲೇ ಕಿರು ಪ್ರಹಸನಗಳನ್ನು ಆಕಾಶವಾಣಿಗಾಗಿ ಬರೆದು ಕೊಡತೊಡಗಿದ್ದರು. ಹೀಗೆ ಪ್ರಾರಂಭವಾದ ಇವರ ಸಾಹಿತ್ಯದ ಬರವಣಿಗೆ ಸಾಗುತ್ತಾ ಬಂದು ‘ನಿಲುಕದ ನಕ್ಷತ್ರ’ ಎಂಬ ಕಾದಂಬರಿ ರಚಿಸಿದರು. ನಂತರ ವೆಂಕಟೂವಿನ ಬುಗುರಿ, ತುಪ್ಪದ ದೀಪ,ನಾನೇಕೆ ಬೇಡವಾದೆ ಮುಂತಾದ ಇಪ್ಪತ್ತು ಕಥೆಗಳು ಸುಧಾ, ಮಯೂರ, ಪ್ರಜಾಮತ, ಕರ್ಮವೀರ ...

READ MORE

Related Books