ಮಾದನ ಮಗಳು

Author : ಎಂ.ವಿ. ಸೀತಾರಾಮಯ್ಯ

Pages 421

₹ 3.00
Year of Publication: 1950
Published by: ಮನೋಹರ ಗ್ರಂಥ ಮಾಲಾ
Address: ಧಾರವಾಡ

Synopsys

ಹಿರಿಯ ಸಾಹಿತಿ ಎಂ.ವೀ. ಸೀತಾರಾಮಯ್ಯ ಅವರ ಸಾಮಾಜಿಕ ಕಾದಂಬರಿ-ಮಾದನ ಮಗಳು. ಹರಿಜನರ ಸಮಗ್ರ ಸಮಸ್ಯೆಗಳನ್ನು ಕೇಂದ್ರೀಕರಿಸಿ ಬರೆದ ಕಾದಂಬರಿ. ಹರಿಜನರೇ ಎಚ್ಚೆತ್ತುಕೊಂಡು ತಮ್ಮ ಸಮಸ್ಯೆಗೆ ತಾವೇ ಪರಿಹಾರ ಕಂಡು ಕೊಂಡರೆ ಹೇಗೆ? ಇಲ್ಲವೇ, ಮಹಾತ್ಮ ಗಾಂಧೀಜಿ ಅವರ ಚಿಂತನೆಗೆ ಅನುಗುಣವಾಗಿ ಪರಿಹಾರವಾದರೆ ಹೇಗೆ? ಇಂತಹ ಮೂಲಭೂತ ಚಿಂತನೆಗಳ ಹಿನ್ನೆಲೆಯಲ್ಲಿ ಕಾದಂಬರಿ ವಸ್ತು ಇದೆ. ‘ಹರಿಜನರ ಸಮಸ್ಯೆಗೆ ಕಾದಂಬರಿಯ ಮೂಲಕ ಸೂಕ್ತ ಪರಿಹಾರ ಸೂಚಿಸಿದ್ದೇನೆ ಎಂದು ಹೇಳುವುದಿಲ್ಲ. ಆದರೆ, ಈ ಸಮಸ್ಯೆಯ ಪರಿಹಾರಕ್ಕೆ ಇರುವ ಅಡ್ಡಿ-ಆತಂಕಗಳ ಅರಿವಿನ ಹಿನ್ನೆಲೆಯಲ್ಲಿ ಹೇಗೆ ಪರಿಹಾರವನ್ನು ಸೂಚಿಸಬಹುದು ಎಂಬ ಚಿಂತನೆಗೆ ಇಲ್ಲಿ ಪ್ರೇರಣೆ ಇದೆ ಎಂದು ಲೇಖಕರು ಹೇಳಿದ್ದಾರೆ.

About the Author

ಎಂ.ವಿ. ಸೀತಾರಾಮಯ್ಯ
(09 September 1910 - 12 March 1990)

ರಾಘವ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ಎಂ.ವಿ. ಸೀತಾರಾಮಯ್ಯ ಜನಿಸಿದ್ದು ಮೈಸೂರಿನಲ್ಲಿ.  ಮಕ್ಕಳಿಗಾಗಿ ಬರೆದ 'ಹೂವನು ಮಾರುತ ಹೂವಾಡಗಿತ್ತಿ' ಹಾಡು ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿತ್ತು. ಕನ್ನಡ ಅಧ್ಯಾಪಕರಾಗಿದ್ದ ಇವರು ಸಾಹಿತ್ಯ ಕ್ಷೇತ್ರದಲ್ಲಿಯೂ ಮನೆಮಾತಾಗಿದ್ದರು.  ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆಗಳೆಂದರೆ  ಹಕ್ಕಿಹಾಡು, ರಾಗ, ಅಶೋಕ ಚಕ್ರ (ಕವನ ಸಂಗ್ರಹಗಳು), ರಾಘವ, ಕವನ ಕೋಶ, ಆ ಚಿತ್ರಗಳು, ಹಕ್ಕಿ ಹಾಡು, ರತಿದೇವಿ ಮತ್ತು ಇತರ ಕಥೆಗಳು, ಬಿಸಿಲು ಬೆಳದಿಂಗಳು, ನಿಲ್ದಾಣಗಳ ನಡುವೆ (ಕಥಾ ಸಂಕಲನಗಳು), ಭಾಗ್ಯಲಕ್ಷ್ಮಿ, ನಂಜಿನ ಸವಿ, ಜೀವನದ ಜೊತೆಗಾರ (ಕಾದಂಬರಿಗಳು), ತೆರೆಮರೆಯ ಚಿತ್ರಗಳು, ತೊಟ್ಟಿಲು ತೂಗದ ಕೈ (ನಾಟಕಗಳು), ...

READ MORE

Related Books