ಎರಡನೆಯ ಸಂಬಂಧ

Author : ಎನ್ಕೆ (ಎನ್‌.ಕೆ. ಕುಲಕರ್ಣಿ)

Pages 310

₹ 3.00




Year of Publication: 1951
Published by: ಮನೋಹರ ಗ್ರಂಥ ಮಾಲಾ
Address: ಧಾರವಾಡ

Synopsys

ಇದು ಖ್ಯಾತ ಲೇಖಕ ಎನ್ಕೆ ಅವರು ಬರೆದಿಡುವ ಹೃದಯಸ್ಪರ್ಶಿ ಕಾದಂಬರಿ. ಈ ಕಾದಂಬರಿಯ ಬಗ್ಗೆ ಸಂಪಾದಕರಾದ ಜಿ ಬಿ ಜೋಶಿಯವರು ಬರೆಯುತ್ತ, ಎನ್ಕೆಯವರು ಈವರೆಗೆ ಬಳಸದ ಒಂದು ಹೊಸ ತಂತ್ರವನ್ನು ಈ ಕಾದಂಬರಿಯಲ್ಲಿ ಬಳಸಿದ್ದಾರೆ ಎಂದು ಹೇಳಿದ್ದಾರೆ. ೧೯೫೧ರಲ್ಲಿ ಪ್ರಕಟವಾದ ಈ ಕಾದಂಬರಿ ಆಗಿನ ಕಾಲಕ್ಕೆ ಹೇಗೆ ಭಿನ್ನವಾಗಿತ್ತು ಎಂಬುದನ್ನು ಸೂಚಿಸುವ ಮಾತುಗಳು ಅವಾಗಿವೆ. ಮಿಂಚುಹುಳದಂತೆ, ಪಾತರಗಿತ್ತಿಯಂತೆ, ಇಲ್ಲಿ ಎನ್ನುವುದರಲ್ಲಿ ಅಲ್ಲಿ, ಅಲ್ಲಿ ಎನ್ನುವುದರಲ್ಲಿ ಅದರ ಮುಂದೆ, ಹೀಗೆ ಚಕ್ ಚಕ್ ಎಂದು ಎನೆ ತೆರೆದಿಕ್ಕುವ ಹೊತ್ತಿನ ಒಳಗೇ ನಡೆದ ಮುಂಬಯಿ ಜೀವನದ ಸಹಜ ಚಿತ್ರ ಈ ಕಾದಂಬರಿಯಲ್ಲಿ ರಮ್ಯವಾಗಿ ಚಿತ್ರಿತವಾಗಿದೆ. ಮದುವೆಯಂಥ ಮಹತ್ವದ ಘಟನೆಗಳೂ ಇಲ್ಲಿ ದಾರಿ ದಾರಿಯಲ್ಲಿಯೇ ಹೇಗೆ ನಡೆದುಹೋಗುತ್ತವೆ ಎಂಬುದನ್ನು ಶಬ್ದಸೀಮಾರೇಖೆಗಳಲ್ಲಿ ಮಾರ್ಮಿಕವಾಗಿ ತೋರಿಸಿದ್ದಾರೆ ಎಂದು ಜೊಶಿಯವರ ಮೆಚ್ಚುಗೆ ಇದೆ.

About the Author

ಎನ್ಕೆ (ಎನ್‌.ಕೆ. ಕುಲಕರ್ಣಿ)
(29 August 1913 - 23 April 2005)

ಎನ್ಕೆ (ಎನ್‌.ಕೆ. ಕುಲಕರ್ಣಿ) ಅವರು ಎನ್.ಕೆ , ಎಂದೇ ಸುಪ್ರಸಿದ್ಧರಾದ ಎ.ಕೆ.ಕುಲಕರ್ಣಿಯವರು, 1913 ರ ಆಗಸ್ಟ್ 29 ರಂದು ಗದುಗಿನಲ್ಲಿ ಜನಿಸಿದರು.  ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ .(ಕನ್ನಡ ಆನರ್ಸ್) ಪದವಿಯನ್ನು ಹಾಗು ವಿದ್ಯಾರಣ್ಯ ಪಾರಿತೋಷಕವನ್ನು ಪಡೆದರು.1938 ರಲ್ಲಿ ಕನ್ನಡ  ಹಾಗೂ ಸಂಸ್ಕೃತದಲ್ಲಿ ಎಂ.ಎ. ಪದವಿಯನ್ನು ಪಡೆದರು. 1940 ರಲ್ಲಿ ಬಿ.ಟಿ. ಪದವಿ ಪಡೆದರು.  1943 ರಿಂದ 1946 ರವರೆಗೆ ಕನ್ನಡ ಸಂಶೋಧನ ಸಂಸ್ಥೆಯಲ್ಲಿ ಕುಮಾರವ್ಯಾಸನ ಕುರಿತು ಸಂಶೋಧನೆ ಮಾಡಿ ಪ್ರಬಂಧರಚನೆ ಮಾಡಿದರು. 1971 ರಲ್ಲಿ  ಧಾರವಾಡ ಆಕಾಶವಾಣಿಯಿಂದ ಕಾರ್ಯಕ್ರಮ ನಿರ್ವಾಹಕರಾಗಿ ನಿವೃತ್ತರಾದರು. ಸಾವಿನ ಉಡಿಯಲ್ಲಿ, ಎರಡನೆಯ ...

READ MORE

Related Books