ಹದಿಹರೆಯ ಯುವಕ - ಯುವತಿಯರ ನಡುವೆ ಮೂಡುವ ಆಕರ್ಷಣೆ, ಪ್ರೀತಿ ಪ್ರೇಮ, ಅನಂತರ ಮದುವೆಯಾದ ಬಳಿಕ ಉಂಟಾಗುವ ಸಾಂಸಾರಿಕ ಏರುಪೇರುಗಳು, ಮನಸ್ತಾಪ ಇತ್ಯಾದಿಗಳೇ ಈ ಕಾದಂಬರಿಯ ಮೂಲದ್ರವ್ಯ. ಕೃತಿಗೆ ಮುನ್ನುಡಿ ಬರೆದಿರುವ ಪತ್ರಕರ್ತ ದು.ಗು.ಲಕ್ಷ್ಮಣ ಅವರು “ಕಾದಂಬರಿಯ ಮೊದಲ ಸಾಲುಗಳು "ಕೋಲ್ಮಿಂಚಿನ ಬೆಳಕು ಮುಖದ ಮೇಲೆ ಬಿದ್ದು ಮುಖದ ಬಣ್ಣವನ್ನು ಬದಲಾಯಿಸುತ್ತಲೇ ಇತ್ತು. ಬದಲಾದ ಬಣ್ಣ, ಕತ್ತಲು-ಬೆಳಕೆಂಬ ಜೀವನದ ಏರು-ಪೇರುಗಳನ್ನು ಪರಿಚಯಿಸಿದಂತೆ ಭಾಸವಾಗುತ್ತಿತ್ತು' ಕಾದಂಬರಿಯ ತಿರುಳಿಗೆ ಕಲಶವಿಟ್ಟಂತೆ ಮೂಡಿಬಂದಿದೆ” ಎಂದು ಕೃತಿ ಕುರಿತು ಶ್ಲಾಘಿಸಿದ್ದಾರೆ.
ಯಕ್ಷಗಾನ ಪ್ರಸಂಗಕರ್ತೆ, ಲೇಖಕಿ ದಿವ್ಯಾ ಶ್ರೀಧರ ರಾವ್ ಅವರು ಮೂಲತಃ ಕುಂದಾಪುರದವರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ.ಬಿ.ಎಂ ಪದವಿ ಪೂರೈಸಿ ಪ್ರಸ್ತುತ ಸೆಲ್ಕೋ ಫೌಂಡೇಷನ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊಸದಿಗಂತ, ಉದಯವಾಣಿ, ಸುಧಾ, ಕಲಾದರ್ಶನ, ನಗಾರಿಧ್ವನಿ ಮುಂತಾದ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ. ಸನ್ ರೈಸ್ ಬೆಂಗಳೂರು ಪತ್ರಿಕೆಯಲ್ಲಿ 2018ರಲ್ಲಿ ಹೆಣ್ಣಿನ ಅಂತರಾಳದ ಮಾತುಗಳ ಕುರಿತು ಸರಣಿ ಬರಹವನ್ನು ಬರೆದಿದ್ದಾರೆ. ‘ಆ ನೀಲಿ ಕಂಗಳ ಹುಡುಗಿ’ (ಕಾದಂಬರಿ) ಅವರ ಚೊಚ್ಚಲ ಕೃತಿ. ...
READ MORE