ಪರಮೇಶಿ ಪೆನ್ ಡ್ರೈವ್

Author : ರಾ. ಚಿಂತನ್

Pages 128

₹ 140.00




Year of Publication: 2021
Published by: ರಾ-1 ಪಬ್ಲಿಕೇಷನ್ಸ್
Address: ℅ ಚಿಂತನ್, # 15/1, 6ನೇ ಮುಖ್ಯರಸ್ತೆ, ಅದಿಥಿ ನಗರ್, ಕಾವಲ್ ಬೈರಸಂದ್ರ ನ್ಯೂ ಲೇಔಟ್, ಬೆಂಗಳೂರು- 560032
Phone: 6362241117

Synopsys

‘ಪರಮೇಶಿ ಪೆನ್ ಡ್ರೈವ್’ ಪತ್ರಕರ್ತ, ಲೇಖಕ ರಾ. ಚಿಂತನ್ ಅವರ ಕಾದಂಬರಿ. ಈ ಕೃತಿಯ ಕುರಿತು ಬರೆಯುತ್ತಾ..‘ಈ ಪುಸ್ತಕದಲ್ಲಿ ಬರುವ ಘಟನೆಗಳು, ಪಾತ್ರಗಳು ನಿಮ್ಮ ಬದುಕಿನ ಆಸುಪಾಸಿನಲ್ಲಿ ನಡೆದಿರುವಂತೆ ಅನಿಸಬಹುದು. ಇಲ್ಲಿನ ಅನೇಕ ಘಟನೆಗಳು ನಿರ್ದಿಷ್ಟವಾಗಿ ಇಂತಹದ್ದೇ ವಿಚಾರಕ್ಕೆ ಸಂಬಂಧಿಸಿದ್ದು ಎಂದೂ ಅನಿಸಬಹುದು. ನಿಮಗೆ ಏನು ಅನಿಸುತ್ತದೋ ಅದೇ ನಿಜ, ನಿಮಗೆ ಏನೂ ಅನಿಸುವುದಿಲ್ಲವೋ ಅದೂ ಕೂಡ ನಿಜ. ಒಬ್ಬ ಲೇಖಕನಾಗಿ ನನ್ನ ಸಮರ್ಥನೆ ಏನೆಂದರೇ, ಈ ಪುಸ್ತಕದಲ್ಲಿ ಬರುವ ಘಟನೆಗಳು ಮತ್ತು ಪಾತ್ರಗಳು ಯಾವುದೇ ವ್ಯಕ್ತಿಗೆ ಅಥವಾ ಯಾವುದೇ ಘಟನೆಗೆ ಸಂಬಂಧಿಸಿದಂತೆ ಕಂಡುಬಂದರೇ ಅದು ಕೇವಲ ಕಾಕಾತಾಳೀಯ ಮಾತ್ರ’ ಎನ್ನುತ್ತಾರೆ ಚಿಂತನ್. ಇದು ಸಾಮಾಜಿಕ ಕತಾಹಂದರವನ್ನು ಒಳಗೊಂಡಿರುವ ಕಾದಂಬರಿ ಎನ್ನಬಹುದು.

About the Author

ರಾ. ಚಿಂತನ್
(03 October 2021)

ಪತ್ರಕರ್ತ, ಲೇಖಕ ರಾ. ಚಿಂತನ್ ಅವರು 2005ರಲ್ಲಿ ಬೆಂಗಳೂರಿನಲ್ಲಿ ಪತ್ರಕರ್ತರಾಗಿ ವೃತ್ತಿಜೀವನವನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ಸಂಪಾದಕರಾದ ರವಿ ಬೆಳಗೆರೆಯವರ ಜೊತೆ ಕೆಲಸ ಕಲಿತು, ಮುಂದೆ ಲಂಕೇಶ್, ತೇಜಸ್ವಿಯವರ ಪ್ರಭಾವಕ್ಕೆ ಒಳಗಾದರು. ಸುವರ್ಣ ನ್ಯೂಸ್, ರಾಜ್ ನ್ಯೂಸ್ ಚಾನೆಲಿನಲ್ಲಿ ಕೆಲವರ್ಷಗಳ ಕಾಲ ಕೆಲಸ ಮಾಡಿ ‘ನಮ್ಮ ಧ್ವನಿ' ಎಂಬ ಸಂಘಟನೆಯಲ್ಲಿ ಗುರುತಿಸಿಕೊಂಡರು. ಇಲ್ಲಿಯವರೆಗೆ ಮೂರು ಪುಸ್ತಕಗಳನ್ನು ರಚಿಸಿದ್ದಾರೆ. ‘ಅಪಶಕುನ', ‘ಮಂಗಳೂರು ಗೋಲಿಬಾರ್,  ‘ಪರಮೇಶಿ ಪೆನ್‍ಡ್ರೈವ್' ಲೇಖಕರು ರಚಿಸಿದ ಕೃತಿಗಳಾಗಿವೆ. ಮಂಗಳೂರು ಗೋಲಿಬಾರ್ ಕೇವಲ ಹದಿನೈದು ದಿನದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದ ಪುಸ್ತಕ. ...

READ MORE

Related Books