ಮುಕ್ಕು ಚಿಕ್ಕಿಯ ಕಾಳು

Author : ಜಯಲಕ್ಷ್ಮಿ ಪಾಟೀಲ್

Pages 136

₹ 130.00
Year of Publication: 2018
Published by: ಅಂಕಿತ ಪುಸ್ತಕ
Address: ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು.

Synopsys

ಕಲಾವಿದನು ಯಾವ ಅಧಾರದ ಮೇಲೆ ತನ್ನ ಕಲೆಯನ್ನು ಆಯ್ಕೆ ಮಾಡಬೇಕು.ಕಲೆಯ ಉಗಮ ಸ್ಥಾನ ಯಾವುದು,ಅವನಿಗಿರುವ ಒತ್ತಡ ಮತ್ತು ಸವಾಲುಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ಈ ಕಾದಂಬರಿಯ ಮುಖ್ಯ ಪಾತ್ರ ಮೌನೇಶ್. ಈತ ಬಡ ಕೃಷಿಕ ಕುಟುಂಬದಲ್ಲಿ ಹುಟ್ಟಿದವನು. ಹುಟ್ಟಿನಿಂದಲೇ ಸೀಳ್ದಟ್ಟಿಯನ್ನು ಪಡೆದು ಓರಗೆಯವರ ಅಪಹಾಸ್ಯಕ್ಕೆ ಗುರಿಯಾಗಿರುತ್ತಾನೆ.ಅವನಿಗೆ ಉಂಟಾಗುವ ಕೀಳರಿಮೆಯು.ಅವನನ್ನು ಇತರರೊಡನೆ ಬೆರೆತು ಮಾತಾಡಲು ಹಿಂಜರಿಯುವಂತೆ ಮಾಡುತ್ತದೆ.ತನ್ನ ಮನಸ್ಸಿನ ಆಸೆ ನೋವು ಆಕಾಂಕ್ಷೆಗಳನ್ನು ಲೇಖನಿಯ ಮೂಲಕ ಹೊರ ಜಗತ್ತಿಗೆ ತೋರ್ಪಡಿಸುತ್ತಾನೆ.ಗ್ರಾಮೀಣ ಬದುಕು,ಅಲ್ಲಿನ ಸಂಸ್ಕೃತಿ, ಆಹಾರ ಪದ್ದತಿಯ ನೈಜ ಚಿತ್ರಣ ಈ ಪುಸ್ತಕದಲ್ಲಿದೆ.

About the Author

ಜಯಲಕ್ಷ್ಮಿ ಪಾಟೀಲ್
(08 June 1968)

ಜಯಲಕ್ಷ್ಮಿ ಪಾಟೀಲ್ ಅವರು ಬಹುಮುಖ ಪ್ರತಿಭೆಯ ಕಲಾವಿದೆ. ಅಭಿನೇತ್ರಿ, ಕವಯತ್ರಿ, ಬರಹಗಾರ್ತಿ, ಉತ್ತಮ ವಾಗ್ಮಿ, ಸ್ತ್ರೀವಾದಿ ಹಾಗೂ ಉತ್ತಮ ಸಂಘಟಕಿಯಾಗಿಯೂ ಕಾರ್ಯ ಸಾಧಿಸಿದ್ದಾರೆ. ಉತ್ತರ ಕರ್ನಾಟಕದ ಬಿಜಾಪುರ ಜಿಲ್ಲೆಯ ನಿಂಬಾಳದವರಾದ ಜಯಲಕ್ಷ್ಮಿ ಗುಲ್ಬರ್ಗಾ ಜಿಲ್ಲೆ ಯಾದಗಿರಿಯಲ್ಲಿ 968 ಜೂನ್‌ 08ರಂದು ಜನಿಸಿದರು. ತಂದೆ ರಾಜಶೇಖರ ಅವರಾದಿ, ನಿವೃತ್ತ ಸರಕಾರಿ ವೈದ್ಯಾಧಿಕಾರಿ. ತಾಯಿ, ಸರೋಜಿನಿ ಅವರಾದಿ. ಜಯಲಕ್ಷ್ಮಿ ಪಾಟೀಲ್ ಬಿಜಾಪುರದ 'ಕೆ.ಸಿ.ಪಿ.ಸೈನ್ಸ್ ಕಾಲೇಜ್' ನಲ್ಲಿ ಬಿ.ಎಸ್ಸಿ ಪದವಿ ಗಳಿಸಿದರು.  ನೀಲ ಕಡಲ ಭಾನು' ಅವರ ಕವನ ಸಂಕಲನ. ‘ಹೇಳತೇವ ಕೇಳ' (ಮಹಿಳಾ ದೌರ್ಜನ್ಯದ ವಿರುದ್ಧದ ಲೇಖನ ಸಂಗ್ರಹದ ಪುಸ್ತಕದ) ಸಂಪಾದನೆ. ಗ್ರಾಮೀಣ ...

READ MORE

Related Books