ಒಲವ ಹಂಚುವ ಮುದುಕಿ

Author : ನಾಗವೇಣಿ ಹೆಗಡೆ

Pages 100

₹ 120.00
Year of Publication: 2021
Published by: ಹೆಚ್.ಎಸ್.ಆರ್.ಎ.ಪ್ರಕಾಶನ
Address: #2 ಅನ್ನಪೂರ್ಣೇಶ್ವರಿ ನಿಲಯ, 1ನೇ ಮುಖ್ಯ ರಸ್ತೆ, ಭೈರವೇಶ್ವರ ನಗರ,ಲಗ್ಗೆರೆ, ಬೆಂಗಳೂರು 560058.
Phone: 7892793054

Synopsys

ಒಲವ ಹಂಚುವ ಮುದುಕಿ- ಲೇಖಕಿ ನಾಗವೇಣಿ ಹೆಗಡೆ ಅವರು ಮಕ್ಕಳಿಗಾಗಿ ಬರೆದ ಕಾದಂಬರಿ.ವಸ್ತುವಿನ ಮಧ್ಯೆ ಕಾವ್ಯಗಳ ಸಾಲುಗಳು ಸೇರುವುದರಿಂದ ಓದು ವೇಗ ಪಡೆಯುತ್ತದೆ. ಬದುಕಿನ ಅನುಭವವು ಕಾದಂಬರಿಯ ವಸ್ತುವಾಗಿದ್ದು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ ಇತ್ಯಾದಿ ಸಾಹಿತ್ಯಕ ಅಂಶಗಳು ಓದುಗರ ಗಮನ ಸೆಳೆಯುತ್ತವೆ. 

ಮಕ್ಕಳಿಂದ ಒಳ್ಳೆಯದನ್ನು ಓದಿಸಬೇಕೆಂದು ಕೊಂಡಿರುವ ಪಾಲಕರಿಗೆ ಹಾಗೂ ಸಾಹಿತ್ಯಾಭಿಮಾನಿಗಳಿಗೆ ಈ ಕೃತಿ ರುಚಿಸುವುದರಲ್ಲಿ ಸಂದೇಹವಿಲ್ಲ.ಇದೊಂದು ವಿಶಿಷ್ಟ ಬಗೆಯ ಕೃತಿ.ಅಪರೂಪದ ಪ್ರಯೋಗ. ಕನ್ನಡ ಸಾಹಿತ್ಯದ ಮಟ್ಟಿಗೆ ಪ್ರಯೋಗಗಳು ಹೊಸದಲ್ಲ. ಆದರೆ ಮಕ್ಕಳ ಸಾಹಿತ್ಯದ ಮಟ್ಟಿಗೆ ಇದು‌ ಹೊಸ ಬಗೆಯ ಮತ್ತು ಹೊಸತನದಲ್ಲೂ ಯಶಸ್ವಿಯಾದ ಕೃತಿ. ಬೌದ್ಧಿಕ ಜಾಣ್ಮೆ ಮತ್ತು ಕಲಾ ಸಂವೇದನೆಗಳೆರೆಡರ ಮಿಲನವಿದು. 

ಒಲವ ಹಂಚುವ ಮುದುಕಿ-ಈ ಶೀರ್ಷಿಕೆಯೇ ಆಪ್ತವಾಗಿದೆ. ಇದರೊಳಗಿನ ಮುದುಕಿ ನಿಂಗಜ್ಜಿಯಲ್ಲಿ ಅನುಭವ, ವಿವೇಕವಿದ್ದರೆ ಇಲ್ಲಿ ಬರುವ ಮಕ್ಕಳಲ್ಲಿ ಉತ್ಸಾಹ ಹೊಸ ಚಿಂತನೆಗಳಿವೆ. ಭಿನ್ನ ತಲೆಮಾರಿನ ವ್ಯಕ್ತಿತ್ವವೊಂದು , ಭಿನ್ನ ಮನಸ್ತತ್ವದ ಮಕ್ಕಳೊಂದಿಗೆ ಒಲವಿನಿಂದ, ತೆರೆದ ಮನಸ್ಸಿನಿಂದ, ವಿಶಾಲ ಹೃದಯದಿಂದ ಸ್ಪಂದಿಸುತ್ತ ಅವರಲ್ಲಿ ಕಥೋಪದೇಶದ ಮೂಲಕ ಸಜ್ಜನತೆ, ಸದಾಲೋಚನೆ, ಸನ್ನಡತೆ, ಸತ್ಸಂಗಗಳ ಚರ್ಚಿಸುತ್ತಾಳೆ. ವಿಧೇಯತೆ, ವಿನಮ್ರತೆ, ವಿಶಾಲತೆಗಳ ಕಲಿಸುತ್ತಾಳೆ. ಇಲ್ಲಿ ಚಿತ್ರಿತರಾಗಿರುವ ಮಕ್ಕಳೂ ಕೂಡ ನಿಂಗಜ್ಜಿಯೊಂದಿಗೆ ಸಹಜವಾಗಿ ಬೆರೆತು ಒಲವನ್ನು ಹಂಚಿಕೊಳ್ಳುತ್ತಾರೆ. 

ಈ ಕಿರಿಯರ ಕಿರು ಕಾದಂಬರಿ ಕೇವಲ ಕಥಾಸರಿತ್ಸಾಗರವಲ್ಲ. ಕಾದಂಬರಿಯ ಮೂಲಕ ಕಥೆಗಳ ಅನಾವರಣವಿದು. ಆ ಕಥೆಗಳೊಳಗೆ ಚಿಣ್ಣರ ಭಾವಲೋಕ ಮೆಚ್ಚುವಂಥ ಕವನಗಳ ಭಾವಭಾಷೆಯ ಆಗರ. ಬಾಲಬೋಧೆಯೊಂದಿಗೆ ಭಾವ ಬೋಧಕ ಶೈಲಿಯೇ ಇದರೊಳಗಿನ ಪ್ರಯೋಗ.ವಾಸ್ತವ ಬದುಕಿನ ದರ್ಶನ. ಎಲ್ಲಿಯೂ ಲಘುವೆನಿಸದ ಆದರೆ ಸರಳ ಭಾಷೆಯ , ಸಾಮಾಜಿಕ ಬದುಕಿನ ಘನತೆಯ ಹಾಳುಗೆಡವದ, ಗಾಂಭೀರ್ಯತೆಯೂ ಇರುವ ಚಂದದ ಪುಟ್ಟ ಮಾಯಾಲೋಕವಿದು.

ನಿಂಗಜ್ಜಿಯ ವ್ಯಕ್ತಿತ್ವದೊಂದಿಗೆ ಲೇಖಕಿಯ ಸುವಿಚಾರಗಳು ನಮಗೆ ಮನವರಿಕೆ ಮಾಡಿಕೊಡುತ್ತವೆ. ಆದರೆ , ಮಕ್ಕಳ ಅಬೋಧತೆ , ವಯೋ ಸಹಜ ತಿಳಿವಳಿಕೆಯ ಮೂಲಕ ಲೇಖಕಿಯ ಮಾಧುರ್ಯ ಭಾವ ಅರಿವಾಗುತ್ತದೆ. ಈ ಕಾದಂಬರಿಯಲ್ಲಿ ಸಂಸ್ಕೃತಿ, ಸಮಾಜ, ಸಂವೇದನೆ ಜಡವಾಗದ ಹಾಗೆ, ಚಲನಶೀಲವಾಗಿರುವ ಹಾಗೆ ನೋಡಿಕೊಳ್ಳುತ್ತವೆ. ಇಲ್ಲಿನ ಕಥೆಗಳು ಮಾಯಾಲೋಕವನ್ನು ಕಟ್ಟಿ, ಕಲ್ಪನಾ ಲೋಕದಲ್ಲಿ ವಿಹರಿಸುವಂತೆ ಮಾಡುತ್ತವೆ. ಇದು ‘ಕಥಾತ್ಕವಿತಾಸಾರ’  ಕಾವ್ಯಕಥನ..

 

About the Author

ನಾಗವೇಣಿ ಹೆಗಡೆ

ಕವಯತ್ರಿ ನಾಗವೇಣಿ ಹೆಗಡೆ ಅವರು ಮೂಲತಃ ಶಿರಸಿಯ ಹೆಗ್ಗರ್ಸಿಮನೆ ಗ್ರಾಮದವರು. ಜನಿಸಿದ್ದು ಶಿರಸಿಯ ಬೊಮ್ಮನಹಳ್ಳಿಯಲ್ಲಿ. ತಂದೆ ಕಮಲಾಕರ, ತಾಯಿ ಸುನಂದಾ. ಗೃಹಿಣಿಯ ಹೊಣೆಗಾರಿಕೆ ಮಧ್ಯೆಯೂ ಫ್ಯಾಷನ್ ಡಿಸೈನ್ ಸೇರಿದಂತೆ ಸಾಹಿತ್ಯದಲ್ಲೂ ವಿಶೇಷ ಆಸಕ್ತರು. ಮೊದಲಿನಿಂದಲೂ ಕರಕೌಶಲಗಳಲ್ಲಿಆಸಕ್ತರು. ಮಾತ್ರವಲ್ಲ; ಭರ್ಚಿಎಸೆತ, ರೀಲೆ, ವಾಲಿಬಾಲ್ , ಕಬ್ಬಡ್ಡಿಗಳಲ್ಲೂ ಬಹುಮಾನ ವಿಜೇತರು. ನಾಡಿನ ಹಲವಾರು ಪತ್ರಿಕೆಗಳಲ್ಲಿಇವರ ಕಥೆ-ಕವನಗಳು  ಪ್ರಕಟಗೊಳ್ಳುತ್ತಿವೆ. `ಕಣ್ಣು'  ಪತ್ರಿಕೆಯ ಶಿರಸಿ ಉಪಸಂಪಾದಕಿ ಹಾಗೂ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.  ಕೃತಿಗಳು: ಕಾವ್ಯಮಂಜರಿ (ಕವನ ಸಂಕಲನ-2018), ಅಗ್ನಿದಿವ್ಯ (ಕವನ ಸಂಕಲನ( 2021), ಒಲವ ಹಂಚುವ ಮುದುಕಿ(ಮಕ್ಕಳ ಕಾದಂಬರಿ-2021, ವಿನಯವಾಣಿ ...

READ MORE

Related Books