ಎರಡನೇ ಹೆಂಡತಿ

Author : ಭಿ.ಪ. ಕಾಳೆ

Pages 90

₹ 0.00




Year of Publication: 1928
Published by: ವೈ.ಜಿ. ಕುಲಕರ್ಣಿ
Address: ಶ್ರೀ ಶೇಷಾಚಲ ಪ್ರೆಸ್, ಆನಂದವನ (ಅಗಡಿ) ಹಾವೇರಿ.

Synopsis

ಭಿ. ಪ. ಕಾಳೆ ಅವರು ಬರೆದ ಕಾದಂಬರಿ-ಎರಡನೇ ಹೆಂಡತಿ. ‘ದ್ವಿತೀಯ ಭಾರ್ಯ ಪ್ರಾಣಾತ್ ಗರಿಯಸಿ’ ಎಂಬಂತೆ ಎರಡನೇ ಹೆಂಡತಿಯನ್ನು ಅತಿ ಹೆಚ್ಚು ಪ್ರೀತಿಸುವುದು ಮತ್ತು ಆಕೆಗೇ ಹೆಚ್ಚು ಹೆದರುವುದು ಏಕೆ? ಇಂತಹ ಪ್ರಶ್ನೆಗಳ ಮೂಲಕ ಹೆಣೆದ ಕಾದಂಬರಿ ಇದು.

About the Author

ಭಿ.ಪ. ಕಾಳೆ
(20 January 1889)

ಭಿಕಾಜಿಪಂತ ಕಾಳೆ ಎಂಬುದು  ಪೂರ್ಣ ಹೆಸರು. ಭಿ.ಪ.ಕಾಳೆ ಎಂದೇ ಖ್ಯಾತಿ. ಹೆಸರಾಂತ ಕಾದಂಬರಿಕಾರರು. ಪ್ರಕಾಶಕ-ಮುದ್ರಕರೂ ಹೌದು. ತಂದೆ ಪರಶುರಾಮ ಪಂತ ಕಾಳೆ. ಧಾರವಾಡ ಜಿಲ್ಲೆಯ ಕುಂದುಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ 1889ರ ಜನವರಿ 20ರಂದು ಹುಟ್ಟಿದರು. ಕುರಂದವಾಡ ಸಂಸ್ಥಾನಿಕರ ಅಧೀನದಲ್ಲಿದ್ದ ಈ ಪ್ರದೇಶ ಪಟವರ್ಧನ ಸಂಸ್ಥಾನಿಕರ ಆಡಳಿತಕ್ಕೆ ಒಳಪಟ್ಟಿತ್ತು. ಸಂಸ್ಥಾನಿಕರ ಮನೆ ಮಾತು ಮರಾಠಿ. ಆಡಳಿತದ ಭಾಷೆಯೂ ಮರಾಠಿ.  ಸಂಶಿ ಗ್ರಾಮವು ಮರಾಠಿಮಯವೇ ಆಗಿತ್ತು. ಮಹಾರಾಷ್ಟ್ರದಿಂದ ಪಟವರ್ಧನ ಸಂಸ್ಥಾನಕ್ಕೆ ಬಂದು ಅಲ್ಲಿಯ ಬೇರೆ ಬೇರೆ ಊರುಗಳಲ್ಲಿ ನೆಲಸಿದ ಚಿತ್ಪಾವನ (ಕೊಂಕಣಸ್ಥ) ಬ್ರಾಹ್ಮಣ ಮನೆತನಗಳಲ್ಲಿ ಕಾಳೆ ಕುಟುಂಬವೂ ಒಂದು. ಈ ಕುಂಟುಂಬ ಸಾಂಸಿಯಲ್ಲಿ ...

READ MORE

Related Books