ಮಾತೃಕನ್ಯೆ

Author : ಉಳುವೆ ಕೆ. ಶಾರದಾ

Pages 211

₹ 80.00




Year of Publication: 2000
Published by: ದಿವ್ಯಚಂದ್ರ ಪ್ರಕಾಶನ
Address: ಕರ್ನಾಟಕ ಹೌಸಿಂಗ್‌ ಬೋರ್ಡ್‌ ಕಾಲೋನಿ, 2ನೇ ಹಂತ, 1ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಬಸವೇಶ್ವರ ನಗೆ, ಬೆಂಗಳೂರು - 560079

Synopsys

ಮಾತೃ ಹೃದಯಿ ಕಾದಂಬರಿಗಾರ್ತಿ ಉಳುವೆ ಕೆ. ಶಾರದಾ ಅವರ ಐದನೇ ಕಾದಂಬರಿ”ಮಾತೃಕನ್ಯೆ’. ಇಡೀ ಸೃಷ್ಟಿಯ ಜೀವನಾಡಿ ಸ್ತ್ರೀ ಶಕ್ತಿ. ಸೃಷ್ಟಿಯ ಎಲ್ಲಾ ಭಾವನಾ ಶಕ್ತಿ, ಕ್ರಿಯಾ ಶಕ್ತಿ, ಸೌಂದರ್ಯ ಮಾಧುರ್ಯ ಕೋಮಲತೆಗಳೊಂದಾಗಿ ಮೂರ್ತಿವೆತ ರೂಪವೇ ಸ್ತ್ರೀ ಕೇಂದ್ರಿತ ಕಥಾವಸ್ತು, ತಾಯಿ ಮಕ್ಕಳ ಭಾಂದವ್ಯದ ಒಳಸುಳಿ ಕಾದಂಬರಿಯಲ್ಲಿ ತೆರೆದುಕೊಳ್ಳತ್ತದೆ. ಜೀವಂತ ಮೂರ್ತಿಗಳನ್ನು ನಿರ್ಮಿಸುವ ಸ್ತ್ರೀ ಸೃಷ್ಟಿಯ ಪ್ರತಿ ಜೀವಿಯ 'ಅಮ್ಮಾ' ಎಂಬ ಮೊದಲ ಕರೆಗೆ ಓಗೊಡುವ ಮಾತೃದೇವತೆಯೇ ಸ್ತ್ರೀ. ಇಂತಹ ಹೆಣ್ಣು ಜನ್ಮ ಸಾರ್ಥಕವೆಂದು ಹೆಮ್ಮೆಪಡುವ ಕಥಾನಾಯಕಿಗೆ ಬದುಕಿನ ದಾರಿಯಲ್ಲಿ ಬೇರೆಯದೇ ರೀತಿಯಲ್ಲಿ ಮುಳುಗುವ ಪ್ರಸಹನ ಬಂದೊದಗುತ್ತದೆ. ಇಲ್ಲಿ ಕಥಾನಾಯಕಿಯ ಬಾಳಿನಲ್ಲಿ ಪ್ರಥಮ ದಿನಗಳಲ್ಲಿ ಹದ್ದಂತೆ ಎರಗಿ ಅವಳನ್ನು ವಂಚಿಸುತ್ತಾನೆ. ಬದುಕೆಂದರೆ ಭಯಪಡುವಂತೆ ಮಾಡುತ್ತಾನೆ. ಆ ಬಲೆಯಿಂದ ಬಿಡಿಸಿಕೊಂಡು ಕೆಚ್ಚೆದೆಯ ಹೆಣ್ಣಾಗಿ ಆಶೆ-ನಿರಾಶೆಗಳ, ನವ ಮಾನಗಳ ಸುಖ-ದುಃಖಗಳ ತಾಕಲಾಟದಲ್ಲಿ ನಲುಗಿದ ಕೆಚ್ಚೆದೆಯ ಹೆಣ್ಣೊಬ್ಬಳ ಹೃದಯಂಗಮ ಕಥೆಯೇ - ಮಾತೃ ಕನ್ಯೆ.

About the Author

ಉಳುವೆ ಕೆ. ಶಾರದಾ
(10 October 1970)

ಕತೆಗಾರ, ಕವಯತ್ರಿ ಉಳುವೆ ಕೆ. ಶಾರದಾ ಅವರು ಜನಿಸಿದ್ದು 10-10-1970  ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಉಳುವೆಯಲ್ಲಿ. ತಂದೆ ಕೃಷ್ಣಮೂರ್ತಿ ಎಸ್., ತಾಯಿ ನಾಗರತ್ನ. ‘ಸುಪ್ರಭಾತ (1993), ಬ್ರಹ್ಮಗಂಟು (1994), ಪ್ರಣಯ ಫಣಿಬಂಧನ (1997), ಹೊಸಹಾದಿಯಲ್ಲಿ(1996), ಝಣಝಣ ರೂಪಾಯಿ (1998), ಚಂದ್ರೋದಯ (1997), ಮಾತೃಕಸ್ಯೆ (19997), ನನಸಾದ ಕನಸು (1998), ಮನಸು ಕೊಟ್ಟವಳು (2000) ಅವರ ಪ್ರಕಟಿತ ಕಾದಂಬರಿಗಳು.  ‘ನೆನಪಿನ ಕೋಲು’ ಕಥಾ ಸಂಕಲನ 2001, `ನಿಸರ್ಗದ ಮಡಿಲು' ಕವನ ಸಂಕಲನ 2005ರಲ್ಲಿ ಪ್ರಕಟವಾಗಿದೆ. ಅವರ ಸಾಹಿತ್ಯ ಸೇವೆಗೆ `ಅಳಸಿಂಗ ಪ್ರಶಸ್ತಿ (1998), ಅತ್ತಿಮಬ್ಬೆ ಉದಯೋನ್ಮುಖ ಪ್ರಶಸ್ತಿ (ಅತ್ತಿಮಬ್ಬೆ ಪ್ರತಿಷ್ಠಾನ) (1994), ಕೃನಾ ಮೂರ್ತಿ ಪ್ರಶಸ್ತಿ (1995), ...

READ MORE

Related Books