ಕಾರ್ಮೋಡ ಸರಿದಾಗ

Author : ಸುನೀಲ್ ಸೀಕೆ

Pages 64

₹ 120.00
Year of Publication: 2021
Published by:  ಹೆಚ್.ಎಸ್.ಆರ್.ಎ.ಪ್ರಕಾಶನ
Address:  # 2, ಶ್ರೀ ಅನ್ನಪೂರ್ಣೇಶ್ವರಿ ನಿಲಯ, 1ನೇ ಮುಖ್ಯರಸ್ತೆ, ಬೈರವೇಶ್ವರನಗರ, ಲಗ್ಗೆರೆ,ಬೆಂಗಳೂರು-560058
Phone: 7892793054

Synopsys

ಲೇಖಕ ಸುನೀಲ್ ಸೀಕೆ ಅವರ ಕಾದಂಬರಿ-ಕಾರ್ಮೋಡ ಸರಿದಾಗ.ಮಕ್ಕಳಾಗದಿದ್ದಾಗ ಚಂದ್ರು ಮತ್ತು ಗೀತಾ ದಂಪತಿ ವೈದ್ಯರ ಸಲಹೆ ಮೇರೆಗೆ ಹೆಣ್ಣು ಮಗುವನ್ನು ದತ್ತು (ಮಾನಸ) ಪಡೆಯುತ್ತಾರೆ. ನಂತರದ ಕೆಲವೇ ತಿಂಗಳಲ್ಲಿ ಗೀತಾ ಗರ್ಭಾವತಿಯಾಗುತ್ತಾಳೆ. ಉದರದಲ್ಲಿ ಮಗುವಿನ ಬೆಳವಣಿಗೆಯ ಖುಷಿ ಅನುಭವಿಸುವ ಗೀತಾ,  ಮಾನಸಳ ಮೇಲೆ ಗಮನ ಕೊಡೋದಿಲ್ಲ. ಇದರಿಂದ ಚಂದ್ರು ಮತ್ತು ಗೀತಾಳ ನಡುವೆ ಮನಸ್ತಾಪ ಉಂಟಾಗುತ್ತದೆ. ಮುಂದೆ ವಿಚ್ಛದೆನೆಯೂ ಆಗುತ್ತದೆ. ಮಾನಸಳನ್ನು ಕರೆದುಕೊಂಡು ಬೆಂಗಳೂರಿಗೆ ಬರುವ ಚಂದ್ರು, ಮಾನಸಳನ್ನು ಓದಿಸುತ್ತಾನೆ. ಈ ಮಧ್ಯೆ,  ತನ್ನ ಮಗಳು ಸಹನಾ, ಬೆಂಗಳೂರಿನಲ್ಲಿ ಮಾನಸಳನ್ನು ಭೇಟಿಯಾಗುತ್ತಾಳೆ. ಇಬ್ಬರೂ ಒಂದಾಗಿ ತಂದೆ-ತಾಯಿಯನ್ನುಒಟ್ಟಿಗೆ ಕೂಡಿಸುವ ಕಥಾ ವಸ್ತು ವನ್ನು ಒಳಗೊಂಡ ಕಾದಂಬರಿ ಇದು. ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ. 


 

About the Author

ಸುನೀಲ್ ಸೀಕೆ
(03 December 1991)

ಲೇಖಕ ಸುನೀಲ್ ಸೀಕೆ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಹೋಬಳಿಯ ಸೀಕೆ-ಮುದುಗುಣಿ ಗ್ರಾಮದವರು. ತಂದೆ ದಿ.ಜಾನ್ ಡಿಸೋಜ ತಾಯಿ ಫಿಲೋಮಿನಾ ಡಿಸೋಜ. ಹತ್ತನೇ ತರಗತಿವರೆಗೆ ಓದು. ಕೃಷಿಕರು.  ಕೃತಿಗಳು: ಮಧುರಾ (ಕಾದಂಬರಿ-2020), ಕಾರ್ಮೋಡ ಸರಿದಾಗ (ಕಾದಂಬರಿ-2021)  ...

READ MORE

Related Books