ಲೇಖಕ ಧೀರಜ್ ಪೊಯ್ಯೆಕಂಡ ಅವರ ಚೊಚ್ಚಲ ಕಾದಂಬರಿ- ಮಿತಿ. ನಮ್ಮ ಪ್ರತಿನಿತ್ಯದ ಬದುಕಿನಲ್ಲಿ ಸಾಮಾನ್ಯವಾಗಿ ಎದುರಾಗುವ ಸಮಸ್ಯೆ, ನಡೆಯುವ ಸಂಗತಿಗಳು, ಸಾಧನೆಗಳನ್ನು ಲೇಖಕರು ಇಲ್ಲಿ ಕಾದಂಬರಿಯಾಗಿಸಿದ್ದಾರೆ. ಕೃತಿಗೆ ಮುನ್ನುಡಿ ಬರೆದಿರುವ ಸಾಹಿತಿ ಗುರುರಾಜ ಕೋಡ್ಕಣಿ ಅವರು “ನಮ್ಮದೇ ಸುತ್ತಮುತ್ತ, ನಮ್ಮದೇ ಜನರ ನಡುವೆ ನಡೆಯುತ್ತಿರುವ ಕತೆಯೇನೋ ಎಂಬ ಭಾವ ಹುಟ್ಟಿಸುವ ಸುಂದರ ಕತೆ. ತಮ್ಮ ಮೊದಲ ಕಾದಂಬರಿಯಲ್ಲಿಯೇ ಲೇಖಕರು ಗೆದ್ದಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು, ಕತೆಯಲ್ಲಿನ ಹಲವು ಸನ್ನಿವೇಶಗಳು ಓದುಗನದೂ ಆಗಿಬಿಡುವುದು ಇಲ್ಲಿನ ಮತ್ತೊಂದು ವಿಶೇಷ. ಓದುತ್ತ ಓದುತ್ತ ಹಲವು ಜಿಜ್ಞಾಸೆಗಳನ್ನು ಓದುಗನಲ್ಲಿ ಮೂಡಿಸುವ, 'ಮಿತಿ'ಯೊಳಗೆ ಬದುಕು ಅಥವಾ ಬದುಕಿಗೊಂದು ಮಿತಿಯಾ ಎಂಬ ಪ್ರಶ್ನೆಗಳ ನಡುವೆ ಸಂಘರ್ಷ ಹುಟ್ಟಿಸುವ ನೂರು ಚಿಲ್ಲರೆ ಪುಟಗಳ ಈ ಕಾದಂಬರಿಯನು ಒಮ್ಮೆ ಓದಲೇಬೇಕು’ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಯುವ ಲೇಖಕ ಧೀರಜ್ ಪೊಯ್ಯೆಕಂಡ ಅವರು ಮೂಲತಃ ಬಂಟ್ವಾಳ ತಾಲೂಕಿನ ಅಮ್ಟೂರು ಗ್ರಾಮದ ಪೊಯ್ಯೆಕಂಡದವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರು. ಇವರು ಹವ್ಯಾಸಿ ಬರಹಗಾರ, ಫೋಟೋಗ್ರಾಫರ್ ಹಾಗೂ ಗ್ರಾಫಿಕ್ ಡಿಸೈನರ್ ಕೂಡ ಹೌದು. ಪ್ರಸ್ತುತ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದು, ‘ಮಿತಿ’ ಅವರ ಮೊದಲ ಕಾದಂಬರಿ. ...
READ MORE