ಸ್ವಾಧೀನ ಜೀವನ

Author : ಭಾರತೀಸುತ (ಶಾನಭಾಗ ರಾಮಯ್ಯ ನಾರಾಯಣರಾವ್)

Pages 319

₹ 2.00




Year of Publication: 1943
Published by: ಭಿ.ಪ. ಕಾಳೆ
Address: ಶ್ರೀ ಶೇಷಾಚಲ ಪ್ರೆಸ್, ಆನಂದವನ (ಅಗಡಿ), ಹಾವೇರಿ

Synopsys

ಖ್ಯಾತ ಕಾದಂಬರಿಕಾರ ಭಾರತೀಸುತ (ಶಾನಭಾಗ ರಾಮಯ್ಯ ನಾರಾಯಣರಾವ್) ಅವರು ಬರೆದ ಐತಿಹಾಸಿಕ ಕಾದಂಬರಿ-ಸ್ವಾಧೀನ ಜೀವನ. ಚೆಂಬಲ ನದಿ ತೀರದ ರೂಪನಗರ ಎಂಬ ಸಂಸ್ಥಾನದ ವಿಜಯಸಿಂಹ ಎಂಬ ಹಿಂದೂ ಜನರ ರಕ್ಷಕ. ಉತ್ತರದ ಬಹುತೇಕ ಸಣ್ಣ ಸಣ್ಣ ಸಂಸ್ಥಾನಗಳನ್ನು ಮುಸ್ಲಿಂ ಸೇನೆಯು ಅತಿಕ್ರಮಿಸುತ್ತಲೇ ಇತ್ತು. ಆ ಪೈಕಿ ಅಲ್ಲಾವುದ್ದೀನ್ ಖಿಲ್ಜಿ ಸಹ ಒಬ್ಬನು. ಮುಸ್ಲಿಂ ಸೈನ್ಯವು ಹಿಂದೂಗಳ ಮೇಲೆ ಒಂದಲ್ಲ ನೂರಾರು ರೀತಿಯಲ್ಲಿ ಹಿಂಸೆಗೆ ಗುರಿಪಡಿಸಿತ್ತು. ಆದ್ದರಿಂದ, ಮುಸ್ಲಿಂ ರನ್ನು ಹಿಂದೂಗಳು ಸಂಶಯದಿಂದಲೇ ನೋಡುವಂತಾಗಿದೆ. ಆದರೆ, ಅದಕ್ಕೆ ಇಡೀ ಮುಸ್ಲಿಂ ಧರ್ಮವನ್ನು ಹೊಣೆ ಮಾಡುವುದು ಸಲ್ಲದು. ಇಸ್ಲಾಂ ಧರ್ಮ ತಿಳಿಯದ ಪಠಾಣರು ಹಿಂದೂಗಳ ಮೇಲೆ ಕ್ರೌರ್ಯ ನಡೆಸಿದ್ದರು. ಅದನ್ನೂ ಸಹ ಮುಸ್ಲಿಂರ ಮೇಲೆ ಹೇರಲಾಗುತ್ತದೆ. ಇಂತಹ ಸಂಗತಿಗಳನ್ನು ಒಳಗೊಂಡ ಕಾದಂಬರಿಯು ತನ್ನ ಸಮಗ್ರ-ಸಮೃದ್ಧ ವಿಷಯದಿಂದಾಗಿ ಓದಿಸಿಕೊಂಡು ಹೋಗುತ್ತದೆ.

About the Author

ಭಾರತೀಸುತ (ಶಾನಭಾಗ ರಾಮಯ್ಯ ನಾರಾಯಣರಾವ್)
(15 May 1915 - 04 April 1976)

ಕೊಡಗು ಜಿಲ್ಲೆಯ ಬಿಳಿಗೇರಿಯಲ್ಲಿ ಜನಿಸಿದ ಶಾನಭಾಗ ರಾಮಯ್ಯ ನಾರಾಯಣರಾವ್ ಅವರು 'ಭಾರತೀಸುತ' ಎಂಬ ಹೆಸರಿನಲ್ಲಿ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆ ವಾಸ ಅನುಭವಿಸಿದ್ದ ಅವರು ಬಿಡುಗಡೆಯ ನಂತರ ಕಾದಂಬರಿ- ಸಾಹಿತ್ಯ ರಚನೆ ಆರಂಭಿಸಿದರು. ಪತ್ರಿಕೋದ್ಯಮದಲ್ಲಿ ಆಸಕ್ತರಾಗಿದ್ದ ಅವರು ಕೆಲಕಾಲ 'ರಾಷ್ಟಬಂಧು' ಮತ್ತು 'ಗುರುವಾಣಿ' ಎಂಬ ಪತ್ರಿಕೆ ನಡೆಸಿದರು. ನಂತರ ಶಿಕ್ಷಕ ವೃತ್ತಿ ಆರಂಭಿಸಿದ ಅವರು ಕಥೆ-ಕಾದಂಬರಿಗಳ ರಚನೆಯಲ್ಲಿ ತೊಡಗಿಸಿಕೊಂಡರು. ಅವರು ರಚಿಸಿದ ’ಎಡಕಲ್ಲು ಗುಡ್ಡದ ಮೇಲೆ’, ’ಹುಲಿಯ ಹಾಲಿನ ಮೇವು’, ’ಗಿರಿಕನ್ನಿಕೆ’, ’ಬಯಲುದಾರಿ’ ಕಾದಂಬರಿಗಳು ಚಲಚಿತ್ರಗಳಾಗಿ ಯಶಸ್ವಿಯಾದವು.  ಸಂತಾನಭಿಕ್ಷೆ ಇಳಿದು ಬಾ ತಾಯಿ, ಬೆಂಕಿಯ ಮಳೆ, ವಕ್ರ ರೇಖೆ, ಸಾಧನ ಕುಟೀರ, ಹುಲಿಬೋನು, ಗಿಳಿಯು ಪಂಜರದೊಳಿಲ್ಲ, ...

READ MORE

Related Books