ಬೆಂಕಿ ಸುಳಿ

Author : ನರಸಿಂಹಮೂರ್ತಿ ಹೂವಿನಹಳ್ಳಿ

Pages 280

₹ 250.00
Year of Publication: 2019
Published by: ಪ್ರೇರಣಾ ಪ್ರಕಾಶನ
Address: # 2393/M, 1ನೇ ಎ-ಮುಖ್ಯರಸ್ತೆ, ಆರ್ಪಿಸಿ ಲೇಔಟ್ ವಿಜಯನಗರ, ಬೆಂಗಳೂರು-560040
Phone: 9480583913

Synopsys

ಬೆಂಕಿ ಸುಳಿ-ಲೇಖಕ ನರಸಿಂಹಮೂರ್ತಿ ಹೂವಿನಹಳ್ಳಿ ಅವರ ಕಾದಂಬರಿ. ಖ್ಯಾತ ವಿಮರ್ಶಕ ಎಚ್.ಎಸ್. ರಾಘವೇಂದ್ರರಾವ್ ಕೃತಿಗೆ ಬರೆದ ಮುನ್ನುಡಿಯಲ್ಲಿ ‘ಬೆಂಕಿ ಸುಳಿ ಬಹುಮಟ್ಟಿಗೆ ಸಂಭಾಷಣೆಗಳ ಮೂಲಕ ಕಟ್ಟಿರುವ ಕಾದಂಬರಿ. ನಿರೂಪಕನಿಗಿಂತ ಪಾತ್ರಗಳಾಡುವ ಮಾತುಗಳೇ ಮುನ್ನೆಲೆಗೆ ಬರುತ್ತವೆ. ಎಲ್ಲ ಪಾತ್ರಗಳೂ ಗ್ರಾಮೀಣವಾಗಿ ಭಾಷೆಯೂ ಗ್ರಾಮೀಣವೇ ಆಗಿರುವುದರಿಂದ ಅದು 'ಆಡು ಮಾತು'ಗಳ ಪಾತಳಿಯಿಂದ ಮೇಲೆ ಹೋಗುವುದು ಅಪರೂಪ. ಆದರೆ, ಎಚ್ಚರದ ಓದು ಆ ಭಾಷೆಯಲ್ಲಿರುವ ಸತ್ವವನ್ನು ನಮ್ಮ ಗಮನಕ್ಕೆ ತರುತ್ತದೆ. ಅಲ್ಲಿರುವ ತಿಳಿವಳಿಕೆಯು ವಿದ್ಯಾಭ್ಯಾಸದಿಂದ ಬಂದುದಲ್ಲ, ಲೋಕಾನುಭವದಿಂದ ಬಂದುದು. ಅದರ ಮೇಲೆ ಲೇಖಕರು ತಮ್ಮ 'ಜ್ಞಾನ'ವನ್ನು ಹೇರುವುದಿಲ್ಲ. ಮಾತಾಡುವುದು ಅವರು ಸೃಷ್ಟಿಸಿದ ಪಾತ್ರಗಳು. ಈ ಚಿಂತಕರಿಗೆ ತಮ್ಮದೇ ಆದ ರೂಪಕಗಳನ್ನು ಕಟ್ಟಿಕೊಡುವ ಸಾಮರ್ಥ್ಯವೂ ಇರುತ್ತದೆ. ನರಸಿಂಹಮೂರ್ತಿಯವರು ಬರೆಯುತ್ತಿರುವುದು ಇಪ್ಪತ್ತೊಂದನೆಯ ಶತಮಾನದ ಈ ದಿನಗಳ ಇಂಥ ಹಳ್ಳಿಯ ಬಗ್ಗೆ.ಅವರಿಗೆ ನಂಜುಂಡಸ್ವಾಮಿಯವರ ರೈತಸಂಘದಿಂದ ಮೊದಲಾಗಿ ಬೀದಿನಾಟಕಗಳವರೆಗೆ ಕಾಳಜಿಯಿದೆ. ಅವು ಸೃಷ್ಟಿಸುವ ಹಳ್ಳಿಯಲ್ಲಿಯೂ ಇಂಥ ತಿಳಿವಳಿಕೆಯಿರುವ ಸಾಮಾನ್ಯ ಜನ ಇದ್ದಾರೆ. ಆದರೆ, ನರಸಿಂಹಮೂರ್ತಿ ವಕೀಲರ ಪಾತ್ರವನ್ನು ವಹಿಸಿದೆ,ಗ್ರಾಮೀಣ ಮುಗ್ಧತೆಯ ಹುಸಿಯನ್ನೂ ಹೇಳದೆ ಮನುಷ್ಯ ಸ್ವಭಾವದ ಮೂಲನೆಲೆಗಳಲ್ಲಿ ನಿಟ್ಟಿನಲ್ಲಿ ಹೊರಡುತ್ತಾರೆ. ಅವರು ಕಟ್ಟಿಕೊಡುವ ಪಾತ್ರಗಳನ್ನು ಒಳ್ಳೆಯವರು-ಕೆಟ್ಟವರು- ಶೋಷಕರು-ಶೋಷಿತರು ಮುಂತಾದ ಕ್ಲೀಷೆಗಳಲ್ಲಿ ವಿವರಿಸುವುದು ಸಾಧ್ಯವಿಲ್ಲ. ಅವರು ಏಕಕಾಲದಲ್ಲಿ ಇವೆಲ್ಲವೂ ಆಗಬಹುದಾದ ಮನುಷ್ಯರು’ ಎಂದು ಪ್ರಶಂಸಿಸಿದ್ದಾರೆ.

About the Author

ನರಸಿಂಹಮೂರ್ತಿ ಹೂವಿನಹಳ್ಳಿ

ಡಾ. ನರಸಿಂಹಮೂರ್ತಿ ಹೂವಿನಹಳ್ಳಿ ಅವರು ಹುಟ್ಟಿದ್ದು ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕು, ಐ.ಡಿ.ಹಳ್ಳಿ ಹೋಬಳಿಯ ಹೂವಿನಹಳ್ಳಿಯಲ್ಲಿ. ಕನ್ನಡದಲ್ಲಿ ಎಂ.ಎ ಪದವಿ ಪಡೆದು, ಬೇಂದ್ರೆ ಮತ್ತು ಕಂಬಾರರ ಕಾವ್ಯದಲ್ಲಿ ಪುರಾಣಪ್ರಜ್ಞೆ ಮತ್ತು ಸಮಕಾಲೀನತೆ ಎಂಬ ವಿಷಯದಲ್ಲಿ ಮಹಾ ಪ್ರಬಂಧ ರಚಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಕನ್ನಡ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ವರಕವಿ ಬೇಂದ್ರೆ ಕಾವ್ಯಗಳ ಅಧ್ಯಯನ(ಲೇಖನಗಳು), ಮೌನದ ಸೆರಗು(ಕವಿತೆಗಳು), ಬೇಂದ್ರೆ ಮತ್ತು ಕಂಬಾರರ ಕಾವ್ಯದಲ್ಲಿ ಪುರಾಣಪ್ರಜ್ಞೆ ಮತ್ತು ಸಮಕಾಲೀನತೆ(ತೌಲನಿಕ ಅಧ್ಯಯನ), ಕನಕದಾಸರ ಕೃತಿಗಳಲ್ಲಿ ಸಮಾನತಾ ಸಮಾಜ (ವಿಮರ್ಶಾ ಲೇಖನಗಳು), ದೇವರ ಜಾತ್ರೆ(ಕಾದಂಬರಿ), ಅರಿವಿನ ಕನ್ನಡಿ(ವಿಮರ್ಶಾ ಸಂಕಲನ), ...

READ MORE

Related Books