ಶ್ರೇಯಾಂಸ

Author : ಮಿರ್ಜಿ ಅಣ್ಣಾರಾಯ

Pages 335




Year of Publication: 1955
Published by: ವಾಹಿನಿ ಪ್ರಕಾಶನ
Address: ಜಯಚಾಮರಾಜ ರಸ್ತೆ, ಬೆಂಗಳೂರು-2

Synopsys

ಶ್ರೇಯಾಂಸ-ಮಿರ್ಜಿ ಅಣ್ಣಾರಾಯ ಅವರ ಕಾದಂಬರಿ. ಕೃತಿಯ ಆರಂಭದಲ್ಲಿ ಲೇಖಕರೇ ಹೇಳಿರುವಂತೆ ‘ ವ್ಯಕ್ತಿಯ ಜೀವನ ಹೋರಾಟವೇ ಈ ಕಾದಂಬರಿಯ , ಮುಖ್ಯ ಕಥಾಸೂತ್ರವಾಗಿದೆ. ಅದರ ಜೊತೆಗೆ, ಜೈನ ಮನೆತನದಲ್ಲಿಯ ಸರಳ, ಸುಂದರ, ತ್ಯಾಗಮಯ ಸಂಸ್ಕೃತಿಯ ಚಿತ್ರಣವನ್ನೂ ಚಿತ್ರಿಸಲಾಗಿದೆ. ಸುತ್ತಲಿನ ಸಾಮಾಜಿಕ ಜೀವನವೂ - ಶ್ರೇಯಾಂಸನ ಬಾಳಿನ ಮೇಲೆ ಪರಿಣಾಮವನ್ನು ಮಾಡಿದ, ಸ್ವಾಭಾವಿಕವಾಗಿ ಇಲ್ಲಿ ಮೂಡಿಬಂದಿದೆ. ಇಂಥ ಲೋಕದಲ್ಲಿ ಬಾಳಿ, ಬೆಳೆದು ತನ್ನ ಜೀವನವನ್ನೇ ಕಲೆಯನ್ನಾಗಿಸ ಬೇಕೆಂದು ಹೆಣಗುವ ಶ್ರೇಯಾಂಸ ನಿಜವಾಗಿಯೂ ಶ್ರೇಯಸ್ಸಿನ ಒಂದಂಶವನ್ನಾದರೂ ಸಂಪಾದಿಸಿದ್ದಾನೆಂಬುದನ್ನು ಇಲ್ಲಿ ಕಾಣಬಹುದಾಗಿದೆ. ಕಾದಂಬರಿಯು ನನ್ನ ಜೀವನದೊಡನೆ ಬೆಳೆದುಬಂದ ಕೃಷಿ ಯಂತೆ ಎನಿಸಿ, 'ನನಗೊಂದು ಆತ್ಮೀಯ ಆನಂದವನ್ನು ಒದಗಿಸಿದೆ. ಇಲ್ಲಿಯ ಸಂಗತಿ ಸತ್ಯವೇ ಆಗಿದ್ದರೂ ಅನೇಕ ಪಾತ್ರ, ಪ್ರಸಂಗ ಮತ್ತು ಸನ್ನಿವೇಶಗಳು ಕಾಲ್ಪನಿಕವಾಗಿರುವ ಸಂಭವವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ಮಿರ್ಜಿ ಅಣ್ಣಾರಾಯ
(25 March 1918 - 11 December 1975)

ಪ್ರಸಿದ್ಧ ಸಾಹಿತಿಗಳು, ಸಮಾಜ ಸುಧಾರಕರೂ ಆದ ಮಿರ್ಜಿ ಅಣ್ಣಾರಾಯರು ಹುಟ್ಟಿದ್ದು (ಜನನ 25-03-1918, ಮರಣ: 11-12-1975) ಬೆಳಗಾವಿ ಜಿಲ್ಲೆಯ ಶೇಡಬಾಳದಲ್ಲಿ. ಕನ್ನಡ ಭಾಷೆಯ ಜೊತೆಗೆ ಮರಾಠಿ, ಹಿಂದಿ, ಇಂಗ್ಲಿಷ್, ಗುಜರಾತಿ ಭಾಷೆಗಳಲ್ಲಿ ಪ್ರಭುತ್ವ. ಪಡೆದಿದ್ದರು.  ನಿಸರ್ಗ’ ಇವರು ಬರೆದ ಮೊದಲ ಕಾದಂಬರಿ. ಭಾಷೆಯ ಹೊಸತನ, ಸರಳ ನಿರೂಪಣೆಯಿಂದ ಕೂಡಿದ ಕಾದಂಬರಿ. ಚಾರಿತ್ರಿಕ ಕಾದಂಬರಿಗಳು: ಸಾಮ್ರಾಟ್ ಶ್ರೇಣಿಕ, ಚಾವುಂಡರಾಯ. ಪೌರಾಣಿಕ ಕಾದಂಬರಿ- ಋಷಭದೇವ. ಕಥಾಸಂಕಲನಗಳು-ಪ್ರಣಯ ಸಮಾ, ಅಮರ ಕಥೆಗಳು, ವಿಜಯಶ್ರೀ. ಶೈಕ್ಷಣಿಕ ಗ್ರಂಥಗಳು-ಭಾಷಾ ಶಿಕ್ಷಣ, ಲೇಖನ ಕಲೆ, ಮೂಲ ಶಿಕ್ಷಣದ ಮೌಲ್ಯಮಾಪನ. ವಿಮರ್ಶಾ ಕೃತಿಗಳು-ದತ್ತವಾಣಿ, ವಿಮರ್ಶೆಯ ಸ್ವರೂಪ, ಭರತೇಶನ ...

READ MORE

Related Books