ಸ್ವರ್ಗ

Author : ಜಿ. ಶರಣಪ್ಪ

Pages 264

₹ 320.00




Year of Publication: 2022
Published by: ದೇಸಿ ಪುಸ್ತಕ ಪ್ರಕಾಶನ
Address: #121,13ನೇ ಮುಖ್ಯರಸ್ತೆ, ಎಂ.ಸಿ.ಲೇಔಟ್, ವಿಜಯನಗರ, ಬೆಂಗಳೂರು-560040
Phone: 9845096668

Synopsys

ನೋಬೆಲ್‌ ಪ್ರಶಸ್ತಿ ಪುರಸ್ಕೃತ ಬ್ರಿಟಿಷ್‌ ಲೇಖಕ ಅಬ್ದುಲ್‌ರಜಾಕ್‌ ಗುರ್ನಾ ಅವರ ಹೆಸರಾಂತ ಐತಿಹಾಸಿಕ ಕಾದಂಬರಿ ʻಪ್ಯಾರಡೈಸ್‌ʼ ಕೃತಿಯ ಕನ್ನಡ ಅನುವಾದ ʻಸ್ವರ್ಗʼ. ಲೇಖಕ ಜಿ. ಶರಣಪ್ಪ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮೂಲ ಕೃತಿ 1994ರಲ್ಲಿ ಮೊದಲ ಬಾರಿ ಪ್ರಕಟವಾಗಿದ್ದು, ಬೂಕರ್‌ ಹಾಗೂ ವಿಟ್ಬ್ರೆಡ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತ್ತು. ಕಾದಂಬರಿಯು 20ನೇ ಶತಮಾನದ ಆರಂಭದಲ್ಲಿ ತಾಂಜಾನಿಯಾದ ಕಾವಾ ಎಂಬ ಕಾಲ್ಪನಿಕ ಪಟ್ಟಣದಲ್ಲಿ ಜನಿಸಿದ ಯೂಸುಫ್ ಎಂಬ ಹುಡುಗನ ಕಥೆಯನ್ನು ಅನುಸರಿಸುತ್ತದೆ. ಯೂಸುಫ್‌ನ ತಂದೆ ಶ್ರೀಮಂತ ಹೊಟೇಲ್ ಉದ್ಯಮಿ ಮತ್ತು ಶಕ್ತಿಶಾಲಿ ಅರಬ್ ವ್ಯಾಪಾರಿ ಅಜೀಜ್‌ನಿಂದ ಸಾಲ ಪಡೆದು ಸಾಲಗಾರನಾಗಿರುತ್ತಾನೆ. ಕಥೆಯ ಆರಂಭದಲ್ಲಿ ಯೂಸುಫ್ ಅಜೀಜ್‌ಗೆ ತನ್ನ ತಂದೆಯ ಸಾಲಕ್ಕೆ ಬದಲಾಗಿ ಗಿರವಿ ಇಟ್ಟು ಸಂಬಳವಿರದ ಸೇವಕನಾಗಿ ಕೆಲಸ ಮಾಡಲು ನಿರ್ಭಂಧಿತನಾದಾಗ ಆತ ಎದುರಿಸುವ ಕ್ರೂರ ಹಿಂಸೆಗಳನ್ನು ಕತೆಯುದ್ದಕ್ಕೂ ಹೇಳಲಾಗಿದೆ. ಯೂಸುಫ್ ಮರುಭೂಮಿಯಲ್ಲಿರುವ ವ್ಯಾಪಾರಿ ಕೇಂದ್ರಕ್ಕೆ ಸೇರಿ ಅಲ್ಲಿ ಅಜೀಜ್‌ನ ವ್ಯಾಪಾರಿಗಳ, ಸ್ಥಳೀಯ ಬುಡಕಟ್ಟುಗಳ, ಕಾಡು ಪ್ರಾಣಿಗಳು ಮತ್ತು ಕಷ್ಟಕರವಾದ ಭೂಪ್ರದೇಶದಿಂದ ಜೀವಭಯವನ್ನು ಎದುರಿಸುತ್ತಾನೆ. ಬಳಿಕ ಒಂದನೇ ವಿಶ್ವ ಸಮರದಲ್ಲಿ ಬಲವಂತವಾಗಿ ಸೈನ್ಯ ಸೇರಿ ಜರ್ಮನ್ ಸೈನ್ಯವನ್ನು ಎದುರಿಸಬೇಕಾಗುತ್ತದೆ. ಹೀಗೆ ಯೂಸುಫ್‌ನ ಜೀವನದ ಕುರಿತು ಹೇಳುವ ಕೃತಿಯನ್ನು ಜಿ. ಶರಣಪ್ಪ ಅವರು ಕನ್ನಡಕ್ಕೆ ಅಚ್ಚುಕಟ್ಟಾಗಿ ತಂದಿದ್ದಾರೆ.

About the Author

ಜಿ. ಶರಣಪ್ಪ

ಜಿ. ಶರಣಪ್ಪ ಇಂಗ್ಲಿಷ್ ಪ್ರಾಧ್ಯಾಪಕರು. ಹಿರಿಯೂರು ತಾಲೂಕಿನ ಸೂರಗೊಂಡನಹಳ್ಳಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ಸಕ್ರಿಯ. ಬೆಂಗಳೂರಿನ ಹೆಚ್.ಎಸ್.ಆರ್. ಬಡಾವಣೆಯಲ್ಲಿ ಸದ್ಯ ವಾಸ. ಈವರೆಗೆ  ಅನುವಾದ, ಕಥೆ, ಮಕ್ಕಳ ಸಾಹಿತ್ಯ, ವೈಚಾರಿಕ ಹೀಗೆ ಸುಮಾರು 34 ಪುಸ್ತಕಗಳು ಪ್ರಕಟವಾಗಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಮಟ್ಟದ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ...

READ MORE

Related Books