ಮೂರು ಹೆಜ್ಜೆ ಭೂಮಿ

Author : ಬಿ. ಜನಾರ್ದನ ಭಟ್

Pages 284

₹ 250.00
Year of Publication: 2015
Published by: ಮನೋಹರ ಗ್ರಂಥ ಮಾಲಾ
Address: ಲಕ್ಷ್ಮಿಭವನ, ಸುಭಾಶ್ ರಸ್ತೆ., ಧಾರವಾಡ-580001
Phone: 08362441823

Synopsys

ಗ್ರಾಮೀಣ ಬದುಕಿನ ಸೊಗಡು, ಅಲ್ಲಿಯ ಸಂಸ್ಕೃತಿ, ಆಚಾರ ವಿಚಾರ, ನಡವಳಿಕೆ, ನಂಬಿಕೆ, ಹಬ್ಬಹರಿದಿನಗಳು, ಹಾಗೆಯೇ ವಿಭಿನ್ನ ಜನಸಮುದಾಯಗಳನ್ನು ಲೇಖಕರು ಬಿ. ಜನಾರ್ದನ ಭಟ್ ಅವರು ಈ ಕೃತಿಯಲ್ಲಿ ಚಿತ್ರಿಸಿದ್ದಾರೆ. ಕಾದಂಬರಿಯಲ್ಲಿಯ ಗ್ರಾಮವೊಂದರ ಮೂರು ಭಾಗಗಳಾದ ಮಾದರಿಯ ಕುಮೆರಿ, ಗಂಪದ ಬಯಲು ಹಾಗೂ ಕಿರ್ಸನ್ ಪದವುಗಳನ್ನು ಕಂಪೆನಿಯೊಂದು ಮೂರು ತ್ರಿವಿಕ್ರಮ ಹೆಜ್ಜೆಗಳಲ್ಲಿ ವಶಪಡಿಸಿಕೊಳ್ಳಲು ಮುಂದಾಗಿ ವಿಫಲವಾದ ಕಥನವೇ ಈ ಕಾದಂಬರಿಯ ವಸ್ತು.

About the Author

ಬಿ. ಜನಾರ್ದನ ಭಟ್

ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ...

READ MORE

Related Books