ಹಂಸಗಾನ

Author : ಎಂ.ಕೆ. ಇಂದಿರಾ

₹ 90.00




Year of Publication: 2020
Published by: ಇಂದಿರಾ ಪ್ರಕಾಶನ

Synopsys

ಕಥೆಗಾರ್ತಿ, ಕಾದಂಬರಿಗಾರ್ತಿ ಎಂ.ಕೆ.ಇಂದಿರಾ ಅವರ ಹಂಸಗಾನ ಮತ್ತು ಸಂದರ್ಶನ ಎಂಬ ಎರಡು ಕಿರು ಕಾದಂಬರಿ ಯನ್ನೊಳಗೊಂಡಿರುವ ಕೃತಿ ಇದು. 'ಹಂಸಗಾನ' ಕಾದಂಬರಿಯು 1991 ರಲ್ಲಿ ಮೊದಲ ಮುದ್ರಣ ಕಂಡಿತು. ಅದಕ್ಕೂ ಮೊದಲು ಆಗಿನ 'ಹಂಸರಾಗ' ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು. ನಂತರ 1996 ರಲ್ಲಿ ಎರಡನೇ, 2006 ರಲ್ಲಿ ಮೂರನೇ ಹಾಗೂ 2020 ರಲ್ಲಿ ನಾಲ್ಕನೇ ಮುದ್ರಣ ಕಂಡಿದೆ.

ಮುರಳಿ, ಕಮಲ, ಯಮುನಕ್ಕ ಹಾಗೂ ವೇದಾ ಇವರುಗಳು ಕಾದಂಬರಿಯಲ್ಲಿ ಬರುವ ಮುಖ್ಯ ಪಾತ್ರಗಳು. ಚಿಕ್ಕಂದಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡ ಮುರಳಿ ತನ್ನ ದೊಡ್ಡಮ್ಮ (ತಾಯಿಯ ಅಕ್ಕ) ಯಮುನಕ್ಕನ ಆಶ್ರಯದಲ್ಲಿ ಬೆಳೆಯುತ್ತಾನೆ. ಅವರಿಗೂ ಮಕ್ಕಳಾಗಿರುವುದಿಲ್ಲ ಹೀಗಾಗಿ ಮುರಳಿಯನ್ನೇ ಸ್ವಂತ ಮಗನಷ್ಟು ಅಕ್ಕರೆಯಿಂದ ಕಾಣುತ್ತಾರೆ. ಒಟ್ಟಾರೆಯಾಗಿ ಹಂಸಗಾನ ಕಿರು ಕಾದಂಬರಿಯು ಸುಖಾಂತ್ಯವಿರುವ ಕಥಾವಸ್ತು ಹೊಂದಿದೆ. ಇಲ್ಲಿ ಲೇಖಕಿ ಇಂದಿರಾ ಅವರ ನಿರೂಪಣಾ ಶೈಲಿಯಲ್ಲಿ ಆರಂಭಿಕ ಓದುಗರನ್ನೂ ಸೆಳೆಯುವ ಗುಣವಿದೆ. ಹಂಸಗಾನಕ್ಕೆ ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುವ ಶಕ್ತಿಯಿದೆ.

About the Author

ಎಂ.ಕೆ. ಇಂದಿರಾ
(05 January 1917 - 15 March 1994)

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು 05-01-1917 ರಂದು. ಊರು ಮಲೆನಾಡಿನ ತೀರ್ಥಹಳ್ಳಿ. ತಂದೆ ತರೀಕೆರೆ ಸೂರ್ಯನಾರಾಯಣ, ತಾಯಿ ಬನಶಂಕರಮ್ಮ. ಇಂದಿರಾ ಓದಿದ್ದು, ಕನ್ನಡ ಮಾಧ್ಯಮಿಕ ಶಾಲೆಯ  2ನೇಯ ತರಗತಿವರೆಗೆ ಮಾತ್ರ. ತಮ್ಮ 12 ವರ್ಷಕ್ಕೆ ಮದುವೆಯಾಯಿತು. ಅವರು ಬರೆಯಲು ಆರಂಭಿಸಿದ್ದು 1963ರಲ್ಲಿ. ತುಂಗಭದ್ರ ಅವರ ಮೊದಲ ಕೃತಿ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು.ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ "ತುಂಗಭದ್ರ"."ತುಂಗಭದ್ರೆ"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ...

READ MORE

Related Books