ಅವಳ ತಲ್ಲಣಗಳು

Author : ಗೀತಾಂಜಲಿ ಬಿ. ಎಮ್

Pages 96

₹ 100.00




Year of Publication: 2021
Published by: ಸ್ಫೂರ್ತಿ ಪ್ರಕಾಶನ
Address: ಬೆಂಗಳೂರು

Synopsys

ಲೇಖಕಿ ಗೀತಾಂಜಲಿ ಬಿ.ಎಮ್.  ಅವರ ಕಾದಂಬರಿ ’ಅವಳ ತಲ್ಲಣಗಳು’. ಹೆಣ್ಣೊಬ್ಭಳು ಸಮಾಜದಲ್ಲಿ ದಿನನಿತ್ಯ ಅನುಭವಿಸುವಂತಹ ವಿಚಾರಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಲೇಖಕಿ ತಾನು ಸಮಾಜದಿಂದ ಅನುಭವಿಸಿದಂತಹ ಸಂಗತಿಗಳ ಬಗ್ಗೆ ವಿವರಿಸುತ್ತಾ, ಸಮಾಜದಲ್ಲಿ ಆಗಬೇಕಿರುವ ಬದಲಾವಣೆಯ ಕುರಿತು ಧ್ವನಿಯಾಗುತ್ತಾರೆ. ಈ ಕೃತಿಯ ಮೂಲ ಉದ್ದೇಶ ಸಮಾಜದಲ್ಲಿ ಅಸಹಾಯಕತೆಯಿಂದ ಬಳಲುತ್ತಿರುವ ಹೆಣ್ಣು ಮಕ್ಕಳನ್ನು ಹುರಿದುಂಬಿಸುವುದಾಗಿದೆ. ಜಗತ್ತೇ ನಶ್ವರ ಎಂದೆನಿಸಿಕೊಳ್ಳುವ ವ್ಯಕ್ತಿಗಳಿಗೆ ಜೀವನವನ್ನು ಮತ್ತೆ ಹೊಸ ರೀತಿಯಲ್ಲಿ ಕಾಣುವಂತೆ ಈ ಕೃತಿ ಪ್ರೇರೇಪಿಸುತ್ತದೆ ಎನ್ನುತ್ತಾರೆ ಲೇಖಕಿ ಗೀತಾಂಜಲಿ. ಉದ್ಯೋಗಿಯಾಗಿರುವಂತಹ ಹೆಣ್ಣೊಬ್ಬಳು ಸಮಾಜದಿಂದ ಅನುಭವಿಸುವ ಅಸಹಾಯಕತೆ ದೌರ್ಜನ್ಯ, ನೋವು ಯಾತನೆ ಒಂಟಿತನ ಹೀಗೆ ಮುಂತಾದ ಸಂಗತಿಗಳನ್ನು ಈ ಪುಸ್ತಕದಲ್ಲಿ ಕಾಣಬಹುದಾಗಿದೆ.

About the Author

ಗೀತಾಂಜಲಿ ಬಿ. ಎಮ್

ಲೇಖಕಿ ಗೀತಾಂಜಲಿ ಬಿ. ಎಮ್  ಅವರು ವೃತ್ತಿಯಿಂದ ಪತ್ರಕರ್ತೆ. ಟಿವಿ ಹಾಗೂ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಭರತ ನಾಟ್ಯ ಕಲೆ, ಸಾಹಿತ್ಯ ಮತ್ತು ಓದು ಬರಹ ಅವರ ಆಸಕ್ತಿದಾಯಕ ಕ್ಷೇತ್ರವಾಗಿದೆ. ಕೃತಿಗಳು: ಅವಳ ತಲ್ಲಣಗಳು (ಕಾದಂಬರಿ) ...

READ MORE

Related Books