ಅಮೂಲ್ಯ

Author : ವಿಜಯಲಕ್ಷ್ಮಿ ಸತ್ಯಮೂರ್ತಿ

Pages 90

₹ 70.00
Year of Publication: 2021
Published by: ಲಕ್ಷ್ಮೀ ನರಸಿಂಹ ಪ್ರಕಾಶನ
Address: ಬೆಂಗಳೂರು
Phone: 8904483376

Synopsys

‘ಅಮೂಲ್ಯ’ ಎಂಬುದು ವಿಜಯಲಕ್ಷ್ಮೀ ಅವರ ಕಾದಂಬರಿ. ಕಥಾನಾಯಕಿ ಅಮೂಲ್ಯ ಬಡತನದಲ್ಲಿಯೇ ಬೆಳೆದವಳು. ಆದರೆ ಆಕೆಯ ಅಪ್ರತಿಮ ಸೌಂದರ್ಯದ ಕಾರಣಕ್ಕಾಗಿ ಉದ್ಯಮಿಯೊಬ್ಬರ ಅನುರಾಗಕ್ಕೆ ಸಿಕ್ಕು ಅವನನ್ನು ವರಿಸಿದಳು. ಆಕೆಯ ಬದುಕಿನಲ್ಲಾಗುವ ಏಳು ಬೀಳುಗಳು ಇಲ್ಲಿ ಚಿತ್ರಿತವಾಗಿದೆ. ಉದ್ಯಮ ನಷ್ಟಕ್ಕೆ ಈಡಾಗುವಂತಹ ವಿಚಾರಗಳನ್ನು ಇಲ್ಲಿ ಲೇಖಕಿ ಕಟ್ಟಿಕೊಟ್ಟಿದ್ದಾರೆ. ಆಕೆಯ ಪತಿ ಅಕಾಲಿಕ ಮರಣಕ್ಕೆ ತುತ್ತಾಗಿ ದೊಡ್ಡ ಮೊತ್ತದ ಸಾಲವನ್ನು ಬಿಟ್ಟು ಹೋಗುತ್ತಾನೆ. ಭವ್ಯ ಬಂಗಲೆ ಸುಖದ ಸಾಧನೆಗಳೆಲ್ಲ ಕೈ ಬಿಟ್ಟು ಅಮೂಲ್ಯ ದುಃಖಸ್ಥಿತಿಯ ಸುಳಿಗೆ ಸಿಗುತ್ತಾಳೆ ಮತ್ತು ತನ್ನನ್ನು ವಿಶ್ವಾಸಿಕ ಎಂದು ಭಾವಿಸಿದವನಿಗೆ ಒಪ್ಪಿಸಿಕೊಳ್ಳುತ್ತಾಳೆ. ಆ ವ್ಯಕ್ತಿಯೂ ಆಕೆಗೆ ಮೋಸ ಮಾಡಿದ ಕಾರಣ ಅವಳು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸುತ್ತಾಳೆ. ಆದರೆ, ಎದೆ ತುಂಬ ಕರುಣೆ ತುಂಬಿದ ವೈದ್ಯರ ಕೃಪೆಯಿಂದ ಬದುಕಿ ಉಳಿದು ತನ್ನ ಉಳಿಯುವಿಕೆಯ ಜೀವನವನ್ನು ರೋಗಿಗಳ ಆರೈಕೆಗೆ ಮುಡಿಪಾಗಿ ಇರಿಸುತ್ತಾಳೆ. ಆ ಹೆಸರಾಂತ ವೈದ್ಯರು ಅವಳ ಪಾಲಿನ ದೇವರಾಗಿ ಆಕೆಯ ಬದುಕಿಗೆ ಆಶ್ರಯದಾತರಾಗುತ್ತಾರೆ. ಈ ಕಾದಂಬರಿಯು ಹೆಣ್ಣಿನ ಬದುಕಿನ ಸುತ್ತಲೂ ಚಿತ್ರಿತವಾಗಿದೆ.

About the Author

ವಿಜಯಲಕ್ಷ್ಮಿ ಸತ್ಯಮೂರ್ತಿ

ಲೇಖಕಿ ಮತ್ತು ಕವಯತ್ರಿ ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ಸಾಹಿತ್ಯ ಯಾನ ಶುರುವಾಗಿದ್ದು ಇತ್ತಿಚಿನ ದಿನಗಳಲ್ಲಿ. ಅವರ ಮೊದಲ ಕೃತಿ, 2016 ಅಂತರಂಗದ ಭಾವನೆಗಳ `ಸಂವೇದನೆ’ ಕೃತಿ ಪ್ರಕಟವಾಯಿತು. ಬಸವನ ಬಾಗೇವಾಡಿಯಲ್ಲಿ ಕಳೆದ 2017ರ ಬಸವ ವಿಭೂಷಣ ರಾಷ್ಟ್ರೀಯ  ಪ್ರಶಸ್ತಿ, ಧಾರವಾಡದ ಚೆನ್ನಮ್ಮ ಪುಸ್ತಕ ಪ್ರಶಸ್ತಿ ದೊರೆತಿದೆ. 2019 ರ ಕೆ. ಎಸ್. ನರಸಿಂಹ ಸ್ವಾಮಿ ಕಾವ್ಯ ಪುರಸ್ಕಾರ ದೊರೆತಿದೆ. ‘ನವಮಿ’ ಅವರ ಕಥಾಸಂಕಲನ, ‘ಗಂಧದೋಕುಳಿ’, ‘ಸಾಗರವ ಗೆದ್ದವಳು’ ಕವನ ಸಂಕಲನ. ಪಂಚಮಿ ಹಾಗೂ ಪ್ರೀತಿಯ ಪಂಚಗವ್ಯ ಕೃತಿಗಳು 2019ರಲ್ಲಿ ಪ್ರಕಟವಾಗಿವೆ. ಕನ್ನಡ ವಚನ ಸಾಹಿತ್ಯ ಪರಿಷತ್ತು ವತಿಯಿಂದ ...

READ MORE

Related Books