ನೀಲನಭ ಕೆಂಪಾಯ್ತು

Author : ಹೆಚ್.ಜಿ. ರಾಧಾದೇವಿ

Pages 160

₹ 110.00




Year of Publication: 2016
Published by: ಶ್ರೀ ಲಕ್ಷ್ಮಿವೆಂಕಟೇಶ್ವರ ಪ್ರಕಾಶನ
Address: ನ0.298,6ನೇ ಕ್ರಾಸ್ ತ್ರಿವೇಣಿ ರಸ್ತೆ, ಯಶವಂತಪುರ,ಬೆಂಗಳೂರು -560022

Synopsys

ಹೆಚ್. ಜಿ .ರಾಧಾದೇವಿಯವರು ಕನ್ನಡದ ಸುಪ್ರಸಿದ್ಧ ಲೇಖಕಿಯರ ಸಾಲಿನಲ್ಲಿ ಅಗ್ರಸ್ಥಾನ ಗಳಿಸಿದವರು. ಪ್ರಗತಿ ಶೀಲ ಸಮಾಜಕ್ಕೆ ತೆರೆದುಕೊಳ್ಳುತ್ತಿದ್ದ ಆಗಿನ ಹೆಣ್ಣುಮಕ್ಕಳು ಎದುರಿಸಬೇಕಾಗಿದ್ದ ಸಮಸ್ಯೆಗಳು ನೂರೆಂಟು. ಇಂತಹ ಸಂಕಷ್ಟಗಳ ನಡುವೆಯೂ ತಮ್ಮತನವನ್ನು ಉಳಿಸಿಕೊಂಡು ದಿಟ್ಟತನದಿಂದ ತಮ್ಮದೇ ಆದ ಬದುಕಿನ ಸಮೀಕರಣವನ್ನು ಬರೆದುಕೊಂಡ ನಾಯಕಿಯರು ಇವರ ಕಾದಂಬರಿಗಳಲ್ಲಿ ಕಾಣಸಿಗುತ್ತಾರೆ.ಇಲ್ಲಿನ ತಾಯಂದಿರೇ ಆಗಲಿ.. ಅಣ್ಣತಮ್ಮಂದಿರೇ ಆಗಲಿ....ಇಲ್ಲಿನ ಅಕ್ಕ-ತಂಗಿಯರೇ ಆಗಲಿ ಅಥವಾ ನಾಯಕ-ನಾಯಕಿಯರೇ ಆಗಲಿ ಯಾರು ದೇವಲೋಕದಿಂದ ಇಳಿದುಬಂದಂತೆ ವರ್ತಿಸುವುದಿಲ್ಲ.ದೇವ ಗಣದಂತೆ ಭಾಸವಾಗುವುದಿಲ್ಲ.

ಸಾಧಾರಣ ಮನುಷ್ಯರಿಗೆ ಸಹಜವಾಗಿ ಇರುವಂತಹ ಎಲ್ಲ ದೌರ್ಬಲ್ಯಗಳು....ನ್ಯೂನತೆಗಳು ಇಲ್ಲಿಯ ಪಾತ್ರಗಳಲ್ಲಿ ಕಾಣಸಿಗುತ್ತವೆ.ಆದರೂ ಇದೆಲ್ಲದರ ಮಧ್ಯೆ ಮಿಂಚುವ ಮಾನವೀಯತೆ ,ಸಹನೆ , ವಿವೇಕಗಳು ಇಲ್ಲಿನ ಪಾತ್ರಗಳನ್ನು ಮುನ್ನಡೆಸುತ್ತವೆ. ಎಲ್ಲ ಕುತಂತ್ರ ... ಕುಚೇಷ್ಟೆ... ತಂತ್ರಗಾರಿಕೆ ಮೋಸಗಳ ನಡುವೆ ಕೊಲ್ಲುವವರ ಮಧ್ಯೆ ಕಾಯುವನು ಒಬ್ಬನಿದ್ದಾನೆ ಎನ್ನುವಂತೆ ಇನ್ನಿಲ್ಲದ ಭಕ್ತಿಯಿಂದ ದೇವರಿಗೆ ಶರಣಾಗಿ ನೀನೆ ಗತಿ ಎಂದು ನಂಬಿದರೂ ಸಹ ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳಬೇಕು ಎನ್ನುವ ಪ್ರಜ್ಞೆ ಇರುವ ಹೆಣ್ಣುಮಕ್ಕಳು ಇವರ ಕಾದಂಬರಿಗಳ ವಿಶೇಷ..

ದಾಂಪತ್ಯ ಜೀವನದ ಎಲ್ಲ ಏರುಪೇರುಗಳ ನಡುವೆಯೂ ಗಂಡಹೆಂಡತಿಯ ಪರಸ್ಪರ ದೌರ್ಬಲ್ಯಗಳು,ಎಡರು-ತೊಡರುಗಳು...ಎಲ್ಲವೂ ಏನೆಲ್ಲ ಏರಿಳಿತಗಳನ್ನು ಸೃಷ್ಟಿಸಿದರು ಸಹ ಕಡೆಗೆ ಸಂಸಾರವೆಂಬ ಸಾಗರವನ್ನು ಇಬ್ಬರೂ ಸೇರಿ ಒಂದಾಗಿ ಈಜುವ ಪ್ರಯತ್ನ ಮಾಡುವಲ್ಲಿ ಹಲವಾರು ಕಾದಂಬರಿಗಳು ಅಂತ್ಯವಾಗುತ್ತವೆ. ರಾಧಾ ದೇವಿಯವರಿಗೆ ಸಂಸಾರ ಎನ್ನುವುದು ಬಂಧನವಲ್ಲ.. ಬದಲಾಗಿ ಬಿಡಿಸಿಕೊಳ್ಳಲಾಗದ ಬಂಧ ಎನ್ನುವುದು ಸಹ ಸರಿಯಾಗಿ ತಿಳಿದಿದೆ .ಹಾಗಾಗಿಯೇ ಅವರು ಎಂತಹ ಕಾರಣಗಳಿದ್ದರೂ ಸಹ ಸಂಸಾರದ ಬಂಡಿಯ ಚಕ್ರಗಳೇ ಆಗಿ ಗಂಡ ಹೆಂಡತಿ ಇಬ್ಬರೂ ಅದನ್ನು ಎಳೆಯಬೇಕು ಎನ್ನುವ ಸಂದೇಶವನ್ನು ನೀಡುತ್ತಾರೆ. ಆದರೆ ಸಾಮಾನ್ಯವಾಗಿ ಹೆಂಡತಿಯೇ ತನಗಿಂತ ಉನ್ನತ ಮಟ್ಟಕ್ಕೇರುತ್ತಿದ್ದರೆ ಗಂಡಸರಿಗೆ ಅದು ಅಹಂಗೆ ನೀಡುವ ಪೆಟ್ಟಾಗಿ ಪರಿಣಮಿಸುತ್ತದೆ .ಈ ಕಾದಂಬರಿಯಲ್ಲಿ ಸಹ ಅನುಕೂಲಸ್ಥರ ಮನೆತನದ ಇಂದಿರಾ ಸುಮಧುರ ಶಾರೀರದ ...ಸಂಗೀತದಲ್ಲಿ ಆಸಕ್ತಿ ಇರುವ ಸುಂದರಿ ಹೆಣ್ಣು ಮಗಳು.ಅವಳ ಮನೆಯವರಿಗೆ ಸಂಗೀತ ಕಲೆಯ ಮೇಲೆ ಪ್ರತ್ಯೇಕ ಆಸಕ್ತಿ ಇಲ್ಲವಾದರೂ ಸಹ ಇಂದಿರಾ ಸಂಗೀತವೆಂದರೆ ಪ್ರಾಣ ಬಿಡುತ್ತಿದ್ದಳು.ಆಕಸ್ಮಿಕವಾಗಿ ಪರಿಚಯವಾಗುವ ಶ್ರೀನಾಥನನ್ನು ಪ್ರೇಮಿಸಿ ವರಿಸುವ ಇಂದಿರಾ ತನ್ನ ಜೀವನದ ಗತಿಯು ತಾನೆಣಿಸದಂತಿರದೆ ಕಷ್ಟಕರವಾಗಿ ಬದಲಾಗುವುದೆಂದು ಆ ಕ್ಷಣದಲ್ಲಿ ಖಂಡಿತ ಎಣಿಸಿರಲಿಲ್ಲ.ಮನೆಯವರ ಇಷ್ಟಕ್ಕೆ ವಿರುದ್ಧವಾಗಿಯೇ ಮದುವೆಯಾಗಬೇಕಾದ ಇಂದಿರಾ ಶ್ರೀನಾಥ ಕಡಿಮೆ ಸಂಪಾದಿಸುತ್ತಿದ್ದರೂ ಸಹ ಅದನ್ನು ಲೆಕ್ಕಿಸದೆ ಸಂಸಾರ ಇಬ್ಬರದ್ದು ಎಂದು ತಿಳಿದು ಶ್ರೀನಾಥನ ಗೆಳೆಯ ರಣಧೀರನ ಸುಮಧುರ ಲಹರಿ ಸಂಸ್ಥೆಯ ನಾಯಕಿಯಾಗಿ ಅಭೂತಪೂರ್ವವಾಗಿ ಯಶಸ್ವಿಯಾಗುತ್ತಾಳೆ.ತನ್ನ ಸಂಪಾದನೆಯಿಂದ ಮನೆಯಲ್ಲಿದ್ದ ಕೊರತೆಗಳನ್ನೆಲ್ಲ ತುಂಬುತ್ತಿದ್ದ ಇಂದಿರಾ ಗರ್ಭಿಣಿಯಾದರೂ ಒಂಬತ್ತು ತಿಂಗಳು ತುಂಬುವವರೆಗೂ ಸಹಸಂಗೀತ ಸಭೆಗಳಲ್ಲಿ ಭಾಗವಹಿಸುತ್ತಿದ್ದಳು.. ಎಳೆಯ ಮಗುವನ್ನು ಸಹ ಬಿಟ್ಟು ಮುಂದೆಯೂ ಹಾಡಲು ಹೋಗುತ್ತಿದ್ದಳು. ಹೀಗೆ ಸಾಗುವ ಕಥೆಯಲ್ಲಿನ ತಿರುವುಗಳೇನೇನು ಎಂಬುದೇ ಈ ಕಾದಂಬರಿಯ ಪ್ರಮುಖ ಆಕರ್ಷಣೆ. ಮೊದಲನೆಯ ಮುದ್ರಣ- 1995, ಎರಡನೆಯ ಮುದ್ರಣ- 2016ರಲ್ಲಿ...

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books