ಕಾಯ

Author : ಅಮರೇಂದ್ರ ಹೊಲ್ಲಂಬಳ್ಳಿ

Pages 146

₹ 120.00




Year of Publication: 2018
Published by: ನಿರುತ್ತರ ಪುಸ್ತಕ
Address: ನಂ.13, 1ನೇ ಮುಖ್ಯರಸ್ತೆ ,2 ನೇ ಅಡ್ಡರಸ್ತೆ, ಮಲ್ಲತಹಳ್ಳಿ, ಬೆಂಗಳೂರು. 560056
Phone: 9900903084

Synopsys

ನಶ್ಚರವಾಗಿರುವ, ಆದರೆ, ಅಜರಾಮರವೆಂಬ ಭ್ರಮೆಯನ್ನು ಹುಟ್ಟಿಸುವ ದೇಹವನ್ನು ಪ್ರಮುಖ ವಿಷಯವನ್ನಾಗಿಸಿಕೊಂಡು ಅಮರೇಂದ್ರ ಹೊಲ್ಲಂಬಳ್ಳಿಯವರು 'ಕಾಯ' ಕಾದಂಬರಿಯನ್ನು ರಚಿಸಿದ್ದಾರೆ. ದೇಹ ಸೃಷ್ಟಿಸುವ ಸಂಬಂಧ, ಹಮ್ಮುಬಿಮ್ಮು, ನೋವು, ಸಂದಿಗ್ಧತೆ, ಸಂಭ್ರಮ, ಅನಿವಾರ್ಯತೆ, ಅವಮಾನ ಇತ್ಯಾದಿಗಳನ್ನು ಈ ಕಾದಂಬರಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಮುಖ್ಯ ಕಥಾ ಚಾಲಕ ಆರ್ಮುಗಂ  ಆದರೂ ಆತ ನಡೆಯತೊಡಗಿದಂತೆ ಉಪಕಥೆಗಳು, ಪ್ರಸಂಗಗಳು ಕಾಯದ ಕರ್ಮಗಳ ಜತೆಗೆ ಹೆಜ್ಜೆ ಹಾಕುತ್ತವೆ. ಗಂಡು, ಹೆಣ್ಣು, ಮಕ್ಕಳು, ಮೂರನೆಯ ಅಂಗದ ಬದುಕನ್ನು ಬದುಕಬೇಕಾದ ವ್ಯಕ್ತಿಗಳು, ಕಾಯದ ಅನುಭವವನ್ನು ಪಡೆಯುತ್ತ ಬದುಕು ಎಂದರೇನೆಂದು ಹುಡುಕತೊಡಗುತ್ತಾರೆ.

ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಚರ್ಚೆ ಹುಟ್ಟುಹಾಕುತ್ತದೆ ಕಾದಂಬರಿ. ಕಥೆಯ ಕಟ್ಟುವಿಕೆ, ಭಾಷೆಯ ಬಳಕೆ, ಒಂದಕ್ಕೆ ಇನ್ನೊಂದನ್ನು ಹೆಣೆಯುವ ಜಾಣ್ಮೆಯನ್ನುಈ ಕಾದಂಬರಿಯಲ್ಲಿ ಕಾಣಬಹುದು. ಆರ್ಮುಗಂ, ಮಧುರಾ ಪಾವಟೆ, ಮಂಗಳಮುಖಿ ಅಕ್ಷತಾ ಬದುಕಿನ ಜಂಜಾಟಗಳ ಮೂಲಕ ಮನಸ್ಸು, ದೇಹಗಳ ಸಂತುಲನವನ್ನು ಅನ್ವೇಷಿಸಲಾಗಿದೆ. ಸಮಾಜದಲ್ಲಿರುವ ಸಣ್ಣತನ ಮೀರಿ ಆತ್ಮಾವಲೋಕನ ಮಾಡಿಕೊಳ್ಳಲು ಕೃತಿ ಪ್ರೇರೇಪಿಸುತ್ತದೆ. 

About the Author

ಅಮರೇಂದ್ರ ಹೊಲ್ಲಂಬಳ್ಳಿ

1968 ಕೋಲಾರ ಜಿಲ್ಲೆಯ ಹೊಲ್ಲಂಬಳ್ಳಿಯಲ್ಲಿ ಜನಿಸಿದ ಅಮರೇಂದ್ರ ಹೊಲ್ಲಂಬಳ್ಳಿ, 1994ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರಿನ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮರುಮಾತು (ವಿಮರ್ಶಾ ಲೇಖನಗಳ ಸಂಕಲನ) ಸೇರಿದಂತೆ ಹಲವು ಕೃತಿಗಳನನ್ನು ಪ್ರಕಟಿಸಿದ್ದಾರೆ. ‘ಕಾಯ’ ಇವರ ಕಾದಂಬರಿ.  ...

READ MORE

Related Books