ಹೇಮರೆಡ್ಡಿ ಮಲ್ಲಮ್ಮನ ಕಥೆಯು

Author : ಕುಂ. ವೀರಭದ್ರಪ್ಪ

Pages 372

₹ 225.00




Year of Publication: 2012
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು - 560 009

Synopsys

ಕುಂ.ವೀ. ಅವರ ಕಾದಂಬರಿ ’ಹೇಮರೆಡ್ಡಿ ಮಲ್ಲಮ್ಮನ ಕಥೆಯು’. ಭೂಪಟಕ್ಕೂ ತನ್ನ ಅಸ್ತಿತ್ವದ ಸುಳಿವು ನೀಡದಿರುವ ವಾಗಿಲಿ'ಯಲ್ಲಿ ನಡೆಯುವ ಹೇಮರೆಡ್ಡಿ ಮಲ್ಲಮ್ಮ ನಾಟಕ ಮತ್ತು ಅದರ ಶತದಿನೋತ್ಸವ ಕಥೆಯು ಈ ಕಾದಂಬರಿ ವಸ್ತು.  ಹಲವು ಕತೆಗಳ ತರುರಾಜಿಯಾಗಿ ವಿಸ್ತರಿಸಿಕೊಂಡಿದೆ. ವಾಗಿಲಿಗೆ ಬರುವ ನಾಟಕ ತಂಡ ಮತ್ತು ನಟಿ ಪದ್ಮಾವತಿಯರು ನೆಪವಾಗಿ ಇಡೀ ವಾಗಿಲಿಯ ದಣಿಗಳ, ಕೊಲೆಗಡುಕರ, ರಾಜಕೀಯದ, ಜನಸಾಮಾನ್ಯರ ಬದುಕು ತೆರೆದುಕೊಳ್ಳುತ್ತದೆ. ವಾಗಿಲಿ ಎಂಬ ತ್ರಿಕೋನಾಕೃತಿಯ ಮೂರೂ ಮೂಲೆಯಲ್ಲಿ ಪ್ರೇಮ ಹಿಂಸೆ ತ್ಯಾಗ, ಅದರ ಒಳ ಆವರಣದಲ್ಲಿ ಮೃಗೀಯ ಗ್ರಾಮೀಣ ಬದುಕು.’ ಅನಾವರಣಗೊಳ್ಳುತ್ತದೆ.

ವಿಮರ್ಶಕ ಓ.ಎಲ್ ನಾಗಭೂಷಣಸ್ವಾಮಿ ಅವರು ಈ ಕಾದಂಬರಿ ಕುರಿತು’ ಒಂದು ಸಂಗತಿಯನ್ನು ಹತ್ತು ಬಗೆಗಳಲ್ಲಿ ವಿವರಿಸಿ ಇಪ್ಪತ್ತು ಸಾಧ್ಯತೆಗಳನ್ನು ಹೊಳೆಯಿಸಿ ತಬ್ಬಿಬ್ಬುಗೊಳಿಸುವ ವಾಕ್ಯಗಳ ಸಮೃದ್ದಿ: ಉತ್ತೇಕ್ಷೆಯ ಮೂಲಕ ವಿಡಂಬನೆ ಮಾಡುತ್ತಿರುವಾಗಲೇ ವಾಸ್ತವದ ಭೀಕರತೆಯನ್ನು ಕಾಣಿಸಿ ದಿಗ್ದಮೆ ಮೂಡಿಸುವ ಕೌಶಲ, ಈ ಕಾದಂಬರಿಯೊಂದು ದುಃಸ್ವಪ್ನಗಳ ಪರಿಶೆ', 'ತಮ್ಮ ಊರಿನ ಹೆಸರು ಗೊತ್ತಿರಬಹುದಾದ ಆದರೆ 'ಈ ದೇಶದ ಹೆಸರು ತಿಳಿದಿಲ್ಲದ' ಸದಾ 'ಸಾಮಾಜಿಕ ಅವಗಢಗಳಿಗೆ ಗುರಿಯಾಗುತ್ತಲೇ ಇರುವ ’ಶಿಕ್ಷಣವಂಚಿತ ಪ್ರಜಾನಿವಹ'ವನ್ನು ಮಲ್ಲಮ್ಮ ಕಲಕಿದ ಪರಿಯನ್ನು ವಾಗಿಲಿಯ ಶಿಕ್ಷಕ - ನಿರೂಪಕ, ತನ್ನ ಗೆಳೆಯ ತೆಲುಗಿನ ಕತೆಗಾರ ಬರೆದ ಕಾದಂಬರಿಯ ಮೂಲಕ ಕಡೆದಿಡುತ್ತಾನೆ.  'ಕಾದಂಬರಿಯೊಳಗಿನ ಕಲ್ಲಿನ ವಾಸ್ತವ ವಾಗಿಲಿಯಲ್ಲಿ ಸಂಭವಿಸುತ್ತಿರುವ ವರ್ತಮಾನದೊಂದಿಗೆ ಬೆರೆತು ನಿಜ ಬದುಕಿನ ನಿಜ ವ್ಯಕ್ತಿಗಳು ಕಾದಂಬರಿಯ ಪಾತ್ರಗಳಾಗಿ, ಕಲ್ಲಿನ ಪಾತ್ರಗಳು ನಿಜ ಬದುಕಿನಲ್ಲಿ ಕಾಣಿಸಿಕೊಂಡು, ಒಂದೊಂದು ಪ್ರಮುಖ ಪಾತ್ರವೂ ಹಲವು ಹೆಸರುಗಳನ್ನು ಹೊತ್ತು ಹಲವು ಅವತಾರಗಳನ್ನು ತಳೆದು, ತೆಲುಗಿನ ಲೇಖಕನ ವೈಯಕ್ತಿಕ ಬದುಕು, ಅವನ ಹಸ್ತಪ್ರತಿ ಓದುತ್ತಿರುವ ನಿರೂಪಕನ ಬದುಕು, ಈ ಕಾದಂಬರಿ ಬರೆಯುತ್ತಿರುವ ಕುಂವೀ ವ್ಯಕ್ತಿತ್ವ ಎಲ್ಲ ಬೆರೆತು, ಬದುಕಿನ ಅನ್ವೇಷಣೆ, ಸಾಹಿತ್ಯದ ಪರಿಶೀಲನೆ ಕಾದಂಬರಿಕಾರನ ಬದುಕಿನ ವಿಶ್ಲೇಷಣೆ ಎಲ್ಲ ಹೆಣಿಗೆಗೊಂಡು ಅತ್ಯಂತ ಕೌಶಲದಿಂದ ರೂಪುತಳೆದಿರುವ ಈ ಕೃತಿ ಕುಂವೀ ಅವರ ಇದುವರೆಗಿನ ಬರವಣಿಗೆಯ ಎಲ್ಲ ಮುಖ್ಯ ಅಂಶಗಳನ್ನು, ಧೋರಣೆಗಳನ್ನು - ಒಳಗೊಂಡೂ ಭಿನ್ನವಾಗಿದೆ’ ಎಂದು ವಿಶ್ಲೇಷಿಸಿದ್ದಾರೆ.

About the Author

ಕುಂ. ವೀರಭದ್ರಪ್ಪ
(01 October 1953)

ಕುಂ.ವೀ. ಎಂದೇ ಜನಪ್ರಿಯರಾಗಿರುವ ಕಾದಂಬರಿಕಾರ, ಕತೆಗಾರ ಕುಂ. ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನವರು. 1953ರ ಅಕ್ಟೋಬರ್ 1ರಂದು ಜನಿಸಿದರು. ‘ಬೇಲಿ ಮತ್ತು ಹೊಲ’ ಕಿರುಕಾದಂಬರಿಯ ಮೂಲಕ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ. ವೀರಭದ್ರಪ್ಪ, ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಮತ್ತು ನುಡಿಗಟ್ಟುಗಳಿಂದ. ಅವರ ಕತೆಗಳಲ್ಲಿ ಕಾದಂಬರಿಗಳಲ್ಲಿ ಕಾಣಿಸಿಕೊಂಡ ಭಾಷೆ ಅವರಿಗೆ ಸಾಹಿತ್ಯದಲ್ಲೊಂದು ಪ್ರತ್ಯೇಕ ಸ್ಥಾನ ಕಲ್ಪಿಸಿಕೊಟ್ಟಿತು. ’ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ’, ’ಕತ್ತಲಿಗೆ ತ್ರಿಶೂಲ ಹಿಡಿದ ಕತೆ’ಗಳ ಮೂಲಕ ಸಣ್ಣ ಕತೆಯ ದಿಕ್ಕನ್ನು ಬದಲಾಯಿಸಿದರು. ಶಿವರಾಜ್ ...

READ MORE

Related Books