ವೇದಾವತಿ ತೀರದಲ್ಲಿ

Author : ಮೋದೂರು ತೇಜ

Pages 340

₹ 200.00
Year of Publication: 2010
Published by: ಅಕ್ಷಯ ಪ್ರಕಾಶನ
Address: ಜೆ. ಸಿ. ಆರ್. ಬಡಾವಣೆ ಚಿತ್ರದುರ್ಗ

Synopsys

'ವೇದಾವತಿ ತೀರದಲ್ಲಿ'  ಮೋದೂರು ತೇಜ ಅವರ ಮೊದಲ ಕಾದಂಬರಿ. ಸಣ್ಣ ಕತೆಗಳ ಮೂಲಕ ಚಿತ್ರದುರ್ಗ ಜಿಲ್ಲೆಯ ಆಂಧ್ರಕ್ಕೆ ಹೊಂದಿಕೊಂಡ ಗಡಿಸೀಮೆಯ ಜನತೆಯ ಬದುಕಿನ ಬಿಡಿ ಚಿತ್ರಗಳನ್ನು ಕಂಡರಿಸಿದ ತೇಜ ಅವರು, ಇಲ್ಲಿ ಬಹು ದೊಡ್ಡ ಭಿತ್ತಿಯ ಮೂಲಕ ಇಲ್ಲಿಯ ಮಧ್ಯಮ ಹಾಗೂ ಕೆಳಮಧ್ಯಮ ವರ್ಗದ ಜೀವನದ ಸೂಕ್ಷ್ಮಗಳನ್ನು ಸೆರೆಹಿಡಿಯ ಹೊರಟಿದ್ದಾರೆ.

ಈ ಗಡಿಭಾಗದ ಬಯಲು ಸೀಮೆಯಲ್ಲಿ ಹರಿಯುವ ನದಿಯೇ ವೇದಾವತಿ. ಮಳೆಗಾಲದಲ್ಲಿ ತುಂಬಿ ಹರಿಯುವ, ಬೇಸಿಗೆಯಲ್ಲಿ ಸೊರಗುವ - ಒಮ್ಮೊಮ್ಮೆ ಬತ್ತಿಯೇ ಹೋಗಿಬಿಡುವ ನದಿಯಂತೆಯೇ ಇಲ್ಲಿಯ ಜನರ ಬದುಕು ಕೂಡ.  ವೇದಾವತಿ ನದಿ ಇಲ್ಲಿಯ ಜನಗಳ ಜೀವನಕ್ಕೆ ಒಡ್ಡಿದ ಪ್ರತಿಯಂತಿದೆ. ಜೊತೆಗೆ, ಈ ಸೀಮೆಯ ಸಾಂಸ್ಕೃತಿಕ ಪಲ್ಲಟಗಳನ್ನು ಚಿತ್ರಿಸಿದೆ. ಈ ನೆಲದ ಸಾಂಸ್ಕೃತಿಕ ಅಸ್ಮಿತೆಯ ದಟ್ಟ ಚಿತ್ರಣ ಹಟ್ಟಿ ಜಾತ್ರೆ, ಗೌರಸಂದ್ರ ಮಾರಿ ಜಾತ್ರೆಯ ವಿವರಗಳಲ್ಲಿ ಮಡುಗಟ್ಟಿರುವುದನ್ನು ಕಾಣಬಹುದು. ಈ ಸೀಮೆಯ ಭಾಷೆಯ ಸೊಗಡನ್ನು ಚಿತ್ರಿಸುವಲ್ಲಿ ತೇಜ ಅವರು ಯಶಸ್ವಿಯಾಗಿದ್ದಾರೆ.

Related Books