ಪ್ರವಲ್ಲಿಕಾ

Author : ಶೈಲಜಾ ಸುರೇಶ್

Pages 164

₹ 150.00




Year of Publication: 2020
Published by: ಪಾಂಚಜನ್ಯ ಪಬ್ಲಿಕೇಷನ್ಸ್
Address: # 1, ಮಿಲ್ಕ್ ನರಸಿಂಹಯ್ಯ ಬಡಾವಣೆ, ಎನ್.ಆರ್.ಐ ಇನ್ಸ್ ಸ್ಟಿಟ್ಯೂಟ್, ಪಾಪರೆಡ್ಡಿ ಪಾಳ್ಯ, ಬೆಂಗಳೂರು-560072
Phone: 9740066842

Synopsys

ಲೇಖಕಿ ಶೈಲಜಾ ಸುರೇಶ್ ಅವರ ಕಾದಂಬರಿ-ಪ್ರವಲ್ಲಿಕಾ. ಉತ್ತರ-ದಕ್ಷಿಣ ಧ್ರುವಗಳಾಗಿ ಸಿಡಿದು ನಿಂತಿರುವ ಎರಡು ಕುಟುಂಬಗಳನ್ನು ಒಗ್ಗೂಡಿಸುವ ನಾಯಕಿ ಪ್ರವಲ್ಲಿಕಾ ಅವಳ ದುರಂತಮಯ ಹಾಗೂ ಸಾಹಸಮಯವಾದ ಕಥಾ ವಸ್ತು ಹೊಂದಿರುವ ಈ ಕಾದಂಬರಿಯು ಹೆಣ್ಣುಮಕ್ಕಳ ಕಣ್ಣೀರು-ಶಾಪ ಒಳ್ಳೆಯದಲ್ಲ ಎಂಬ ಭಾವನಾತ್ಮಕ ಅಂಶವನ್ನು ಸಮರ್ಥಿಸಿಕೊಳ್ಳುತ್ತದೆ. ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ನಂಬಿದವರೇ ಬೆನ್ನಿಗೆ ಚೂರಿ ಹಾಕುವ ಮನಸ್ಸಿನ ಕ್ರೌರ್ಯದ ಅನಾವರಣವಿದೆ. ಕಥಾ ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರನ್ನು ಆಕರ್ಷಿಸುತ್ತದೆ. ತಾವು ಈಗಾಗಲೇ ಬರೆದ ‘ಮಾಮರವೆಲ್ಲೋ ಕೋಗಿಲೆಯಲ್ಲೋ’ ಕಾದಂಬರಿಯ ಮುಂದುವರಿದ ಭಾಗವಾಗಿ ಇಲ್ಲವೇ ಸ್ವತಂತ್ರ ಕಾದಂಬರಿಯಾಗಿಯೂ ‘ಪ್ರವಲ್ಲಿಕಾ’ ಓದಬಹುದು ಎಂದು ಲೇಖಕಿ ಹೇಳಿದ್ದಾರೆ.

About the Author

ಶೈಲಜಾ ಸುರೇಶ್
(02 October 1964)

ಶೈಲಜಾ ಸುರೇಶ್ (ದಾಕ್ಷಾಯಿಣಿ ಎಚ್.), ಬಿ.ಎ. ಪದವೀಧರರು.  1964ರ ಅಕ್ಟೋಬರ್ 2 ರಂದು ಹಾಸನದಲ್ಲಿ ಜನನ. ತಂದೆ  ಹೆಚ್. ಹನುಮಂತಪ್ಪ, ತಾಯಿ- ಸಾವಿತ್ರಮ್ಮ. ಕಾದಂಬರಿ : ಇಂದಿರಾ 2004, ಹೃದಯರಾಗ 2006, ಬಾಳಿನ ಹೊಂಬೆಳಕು 2008,  ಕಥಾಸಂಕಲನ : ಹೊಂಗನಸು 2012ರಲ್ಲಿ ಪ್ರಕಟವಾಗಿವೆ. ಸಣ್ಣಕತೆ ಹಾಗೂ ನಾಟಕಗಳನ್ನು ರಚಿಸಿದ್ದು ಹವ್ಯಾಸಿ ಪತ್ರಕರ್ತೆ ಕೂಡ. ಆಕಾಶವಾಣಿ, ದೂರದರ್ಶನಕ್ಕಾಗಿ ಹಲವು ಬರೆಹಗಳನ್ನು ನೀಡಿದ್ದಾರೆ. ಅವರು ಲೇಖಕಿಯರ ಸಾಹಿತ್ಯ ವೇದಿಕೆಯ ಅಧ್ಯಕ್ಷರು. ಇವರಿಗೆ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ದೇವರ ದಾಸಿಮಯ್ಯ ಪ್ರಶಸ್ತಿ, ಸಾಹಿತ್ಯ ಸೇತು ಪ್ರಶಸ್ತಿ, ಗೌರವಹುದ್ದೆ : ಹಾಸನ ಜಿಲ್ಲಾ ಕನ್ನಡ ಲೇಖಕಿಯರ ...

READ MORE

Related Books