ಅಂಗಳದಿಂದ ಬೈನರಿಯವರೆಗೆ

Author : ಮೇಘನಾ ಸುಧೀಂದ್ರ

Pages 120
Year of Publication: 2022
Published by: ಸಪ್ನ ಬುಕ್ ಹೌಸ್
Address: ಆರ್ ಒ#11, 3ನೆ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು - 560 009
Phone: 080-40114455

Synopsys

ಅಂಗಳದಿಂದ ಬೈನರಿಯವರೆಗೆ ಎಂಬುದು ಲೇಖಕಿ ಮೇಘನಾ ಸುಧೀಂದ್ರ ಅವರ ಕೃತಿ. ವೃತ್ತಿಪರ ಕ್ರಿಕೆಟ್ ನಲ್ಲಿ ಯಶಸ್ಸಿಗಾಗಿ ಹಾತೊರೆಯುತ್ತಿರುವ ಒಬ್ಬ ವೇಗದ ಬೌಲರ್ ಹಾಗೂ ಅನಲಿಸ್ಟ್ ನ ನಡುವಿನ ಸಂಬಂಧವನ್ನು ಅಡಿಪಾಯವಾಗಿಟ್ಟುಕೊಂಡು ಹೆಣೆದಿರುವ ಮೇಘನಾ ಸುಧೀಂದ್ರರವರ ಕಥನವಾಗಿದೆ. ನಮ್ಮ ತಾಯ್ನುಡಿ ಕನ್ನಡದಲ್ಲಿ ಕ್ರಿಕೆಟ್ ಗೆ ಒತ್ತು ಕೊಟ್ಟು ಹೊರಬಂದಿರುವ ಕೃತಿಯೆಂಬ ವಿಶೇಷತೆ ಈ ಕೃತಿಗಿದೆ. ಕನ್ನಡದಲ್ಲಿ ಕ್ರಿಕೆಟ್ ನ ಟೆಕ್ನಿಕಲ್ ವಿಷಯಗಳನ್ನು ಈ ಪುಸ್ತಕದಲ್ಲಿ ಸರಳವಾಗಿ ಬರೆದಿರುವುದರಿಂದ ಕನ್ನಡಿಗರು ಆಟವನ್ನು ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಖಂಡಿತ ಸಹಕಾರಿಯಾಗಲಿದೆ. ಮಾಜಿ ಅಂತರಾಷ್ಟ್ರೀಯ ಕ್ರಿಕೆಟರ್ ದೊಡ್ಡ ಗಣೇಶ ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ.

About the Author

ಮೇಘನಾ ಸುಧೀಂದ್ರ

ಜಯನಗರದ ಹುಡುಗಿ ಎಂದೇ ಖ್ಯಾತರಾದ ಮೇಘಾನರವರು ಬಾರ್ಸಿಲೋನಾದಲ್ಲಿ ಏಐ ವಿಷಯದಲ್ಲಿ ಪರಿಣಿತಿ ಪಡೆದು ಈಗ ಬೆಂಗಳೂರಿನ ಒಂದು ಖಾಸಗಿ ಸಂಸ್ಥೆಯಲ್ಲಿ ಏ ಐ(ಕೃತಕ ಬುದ್ಢಿಮತ್ತೆ) ಗುಂಪಿನ ಟೀಮ್ ಲೀಡ್ ಆಗಿ ಕೆಲಸ ಮಾಡುತ್ತಿದ್ದಾರೆ. 2019ರಲ್ಲಿ ನಡೆದ ವಿಜಯ ಕರ್ನಾಟಕದ ಯುಗಾದಿ ಕಥಾ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ವಿಜೇತರು. ಜಯನಗರದ ಹುಡುಗಿ, ಲಿಪಿಯ ಪತ್ರಗಳು #AI ಕಥೆಗಳು,ಬೆಂಗಳೂರು ಕಲರ್ಸ್ , ಪ್ರೀತಿ ಗೀತಿ ಇತ್ಯಾದಿ ಇವರ ಪ್ರಕಟಿತ ಪುಸ್ತಕಗಳು. ಕನ್ನಡಗೊತ್ತಿಲ್ಲ ಸಂಸ್ಥೆಯಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ಕಾಯಕದಲ್ಲಿ 6 ವರ್ಷದಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.  ಹೊಸ ಪೀಳಿಗೆಯ ಕಥೆಗಳು ಬರೆಯುವುದು ...

READ MORE

Related Books