ವೆಂಕಿ ಬರ್ಗರ್

Author : ವೆಂಕಟೇಶ್ ರಾಘವೇಂದ್ರ

Pages 90

₹ 80.00




Year of Publication: 2009
Published by: ಪಪಿರಸ್ ಪ್ರಕಾಶನ
Address: ಮೇ ಪ್ಲವರ್ ಮೀಡಿಯಾ ಹೌಸ್, ಯಮುನಬಾಯಿ ರೋಡ್, ಯುನಿಟ್ 5, ಮೊದಲನೇ ಮಹಡಿ, ಮಾದವ ನಗರ, ಬೆಂಗಳೂರು-560001
Phone: 08022374436

Synopsys

‘ವೆಂಕಿ ಬರ್ಗರ್' ಕೃತಿಯು  ವೆಂಕಟೇಶ್ ರಾಘವೇಂದ್ರ ಅವರ ಕಾದಂಬರಿಯಾಗಿದೆ. ಇಲ್ಲಿ ಲೇಖಕ ಕತಾ ನಾಯಕನನ್ನು ‘ಈತ ವೆಂಕಿ’ ಅನ್ನುವ ಶೀರ್ಷಿಕೆಯಡಿ ಪರಿಚಯ ಮಾಡಿಕೊಡುತ್ತಾ, ಪಶ್ಚಿಮ ಘಟ್ಟದ ದಟ್ಟ ಕಾಡುಗಳಲ್ಲಿ ಇನ್ನೂ ನಿನ್ನೆ ಮೊನ್ನೆಯವರೆಗೆ ಸುತ್ತಾಡುತ್ತಿದ್ದ ಹುಡುಗ ಈಗ ಜಗತ್ತಿನ ಉದ್ದಗಲಕ್ಕೂ ಬೆಳೆದು ನಿಂತಿದ್ದಾನೆ. ವೆಂಕಿಗೆ ಇಡೀ ಜಗತ್ತೆ ಕ್ಯಾನ್ವಸ್ ಆಗಿದೆ ಎನ್ನುತ್ತಾರೆ. ನಿನ್ನೆ ಇಲ್ಲಿದ್ದ. ನಾಳೆ ಅಲ್ಲಿ. ಇನ್ನೊಮ್ಮೆ ನೋಡುವ ವೇಳೆಗೆ ಇನ್ನೆಲ್ಲಿ ಎಂಬಷ್ಟು ಆತ ಜಗತ್ತಿನ ಎಲ್ಲ ದೇಶಗಳನ್ನು ಸುತ್ತುತ್ತಾನೆ. ಆತನಿಗೆ ಹಾಸಿಗೆ ಇಡೀ ಭೂಮಿಯಾಗಿದೆ. ಕಾಳೀ ನದಿಯ ದಂಡೆ ಯು‌ದ್ದಕ್ಕೂ ಚಾರಣ ನಡೆಸುತ್ತಿದ್ದ, ಕುದುರೆಮುಖವನ್ನು `ಧೋ' ಎನ್ನುವ ಮಳೆಯಲ್ಲಿ ಹತ್ತುತ್ತಿದ್ದ, ಸೈಕಲ್ ತುಳಿಯುತ್ತಾ ಇಡೀ ಪಶ್ಚಿಮಘಟ್ಟವನ್ನು ಅಳತೆ ಮಾಡುತ್ತಿದ್ದ ವೆಂಕಿ ಅಮೇರಿಕನ್ನರ ಕಣ್ಣಲ್ಲಿ ಮಿಸ್ಟರ್ ವೆಂಕಟೇಶ್ ರಾಘವೇಂದ್ರ. ಅಮೆರಿಕಾದ ಕಲ್ಲಿನ ಗುಹೆಗಳನ್ನು ಹೊಕ್ಕಿ ಬರಲೆಂದು ಹೋದವನು ಈಗ ಜಗತ್ತಿನ ಎಲ್ಲಾ ಕತ್ತಲೆಗೂ ಮಿಣಿ ಮಿಣಿ ಬೆಳಕಾಗುವಷ್ಟು ಬೆಳೆದು ನಿಂತಿದ್ದಾನೆ. ವೆಂಕಿಗೆ ಲೇಖನಿ ಅಪರಿಚಿತವಲ್ಲ. ಅಮೇರಿಕಾಗೆ ಕಾಲಿಟ್ಟ ಮೊದಲ ದಿನದಿಂದ ಇಲ್ಲಿಯವರೆಗೆ ಸುಮಾರು 7 ವರ್ಷಗಳ ಕಾಲ ಟೈಮ್ಸ್ ಆಫ್ ಇಂಡಿಯಾ, ದಿ ಹಿಂದೂ, ಹಿಂದುಸ್ತಾನ್ ಟೈಮ್ಸ್, ಡೆಕ್ಕನ್ ಹೆರಾಲ್ಡ್, ದಿ ಟ್ರಿಬ್ಯೂನ್, ಪ್ರಜಾವಾಣಿಯಲ್ಲಿ ತಾವು ಕಂಡಂತಹ ವಿಚಾರಗಳಿಗೆ ಇಲ್ಲಿ ಮಾತಿನ ರೂಪ ಕಟ್ಟಿಕೊಟ್ಟಿದ್ದಾರೆ' ಎಂದಿದ್ದಾರೆ. ಜಾಗತೀಕರಣದಿಂದಾಗಿ ಮಸಾಲದೋಸೆ ತಿನ್ನುತ್ತಿದ್ದ ಬಾಯಲ್ಲಿ ಬರ್ಗರ್ ಬಂದು ಕೂತಿದೆ. ರಸಂ ಚಪ್ಪರಿಸುತ್ತಿದ್ದ ನಾಲಿಗೆ ಕೋಲಾಗೂ ಒಗ್ಗಿಕೊಂಡಿದೆ. ಮಸಾಲದೋಸೆ ಬರ್ಗರ್ ಎರಡರ ವಿಚಿತ್ರ ಸಂಗಮವೇ ‘ವೆಂಕಿ ಬರ್ಗರ್’ ಅಪ್ಪಟ ಕನ್ನಡ ಮನಸ್ಸೊಂದು ಅಮೆರಿಕಾಕ್ಕೆ ಕನ್ನಡಿ ಹಿಡಿಯುವ ಪ್ರಯತ್ನವಾದಂತಿದೆ ಈ ಕೃತಿ’ ಎಂದಿದ್ದಾರೆ.

About the Author

ವೆಂಕಟೇಶ್ ರಾಘವೇಂದ್ರ

ಲೇಖಕ ವೆಂಕಟೇಶ್ ರಾಘವೇಂದ್ರ ಅವರು ಅಂಕಣಕಾರರು.  ಕಾನೂನು ಪದವೀಧರರು ಜೊತೆಗೆ ಉದ್ಯಮಿ. ಪ್ರಸ್ತುತ ಅಮೇರಿಕದ ರಾಜಧಾನಿ ವಾಷಿಂಗ್ಟನ್ ಡಿಸಿ ಸಮೀಪದ ರಿಚ್ಮಂಡ್ ವರ್ಜೀನಿಯಾದಲ್ಲಿ ನೆಲೆಸಿದ್ದಾರೆ. ಪೋಲಾಂಡ್ ನಿಂದ ಥಾಯ್ಲಾಂಡ್ ; ಹಿಮಾಚಲದಿಂದ ತಮಿಳುನಾಡು, ಹೀಗೆ ವಿಶ್ವದ ಎಲ್ಲ ದಿಕ್ಕುಗಳಲ್ಲಿ ಕೂಡ ಸಂಚರಿಸಿ, ಸಾಮಾಜಿಕ ಬದಲಾವಣೆಗಳನ್ನು ಸೂಕ್ಷ್ಮವಾಗಿ ಅಭ್ಯಸಿಸಿದ್ದಾರೆ. Cross -sectoral partnerships ಬೆಳೆಸುವುದು ಅವರ ಪರಿಣಿತಿ. ’ Best practices/ differentiating factors  ಅಂದರೆ ಏನು? ಅದು ಬೇರೆ ಬೇರೆ ಕ್ಷೇತ್ರಗಳಿಗೆ ಹೇಗೆ ಅನ್ವಯಿಸುತ್ತದೆ? ಎಂಬುದು ಅವರ ಆಸಕ್ತಿಯ ಕ್ಷೇತ್ರ. ಪ್ರಸ್ತುತ ‘ಅಶೋಕ’ ಜಾಗತಿಕ ಸಂಸ್ಥೆಯ ಟ್ರಸ್ಟಿ ಹಾಗೂ ಅಮೆರಿಕನ್ ಇಂಡಿಯಾ ...

READ MORE

Related Books