ಪ್ರೇಮಕ್ಕೇ ಜಯ

Author : ಡಿ. ಪದ್ಮನಾಭ

Pages 100

₹ 120.00
Year of Publication: 2021
Published by: HSRA ಪ್ರಕಾಶನ ಬೆಂಗಳೂರು

Synopsys

ಪದ್ಮನಾಭ ಡಿ.ಅವರ ಪೌರಾಣಿಕ ಕತೆಗಳ ಸಂಕಲನ ಶ್ರೀಕೃಷ್ಣ ಉವಾಚ ಎಂಬ ಉಪಶೀರ್ಷಿಕೆಯನ್ನು ಹೊಂದಿದೆ. ಶ್ರೀಕೃಷ್ಣನ ತಂದೆ ವಸುದೇವ. ವಸುದೇವನ ತಂಗಿಯ ಮಗಳು ಮಿತ್ರವಿಂದೆ. ಬಾಲ್ಯದಿಂದಲೂ ಕೃಷ್ಣನನ್ನು ಪ್ರೇಮಿಸಿ ಅವನ ಸತಿಯಾಗುವ ಕನಸು ಕಂಡಿದ್ದವಳು. ಅವಳ ಅಣ್ಣಂದಿರೇ ಅವಳ ಹಾದಿಯಲ್ಲಿ ಮುಳ್ಳುಗಳು.   ತಂದೆ ಅಣ್ಣಂದಿರನ್ನು ಎದುರಿಸಲಾರದವನು. ತನ್ನ ಆಸೆಯನ್ನು ಹೇಗೆ ಈಡೇರಿಸಿಕೊಂಡಳು, ಪೂರ್ವಸ್ಮರಣೆ ಏಕೆ ಮರೆತುಹೋಯಿತು, ಹೇಗೆ ನೆನಪಿನ ಶಕ್ತಿ ಮರಳಿಬಂದಿತು ರಾಜಕುಮಾರಿ ಒಬ್ಬರ ಮನೆಯಲ್ಲಿ ದಾಸಿ ಏಕಾದಳು ಕೊನೆಗೆ ಹೇಗೆ ಕೃಷ್ಣನನ್ನು ವರಿಸಿದಳು ಎಂಬ ರೋಚಕ ಕಥೆ. ವಿಷ್ಣುಪುರಾಣದ ಹಾಗೂ ಭಾಗವತದ ಹತ್ತು ಶ್ಲೋಕಗಳಲ್ಲಿನ ಕಥೆಯನ್ನು ನನ್ನ ಕಲ್ಪನೆಯಲ್ಲಿ ವಿಸ್ತರಿಸಿ ಬರೆದ ಕಥೆ. ಪ್ರೇಮಕ್ಕೇ ಜಯ.

About the Author

ಡಿ. ಪದ್ಮನಾಭ
(06 February 1966)

ಕವಿ ಡಿ. ಪದ್ಮನಾಭ ಅವರು ಮೈಸೂರಿನಲ್ಲಿ 1966 ಫೆಬ್ರುವರಿ 06 ರಂದು ಜನಿಸಿದರು. ಅವರ ‘ಹೂಬನ’ ಕವನ ಸಂಕಲನ ಇತ್ತಿಚೆಗೆ ಪ್ರಕಟವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಹಿಂದಿ ರತ್ನ ಹಾಗೂ ಸಂಸ್ಕೃತ ಸಾಹಿತ್ಯದಲ್ಲಿ ಆಸ್ಥೆ ಉಳ್ಳವರು. ‘ಸಂತೋಷ-ಸಂದೇಶ’, ‘ಭಾವಲಹರಿ’ ಕವನ ಸಂಕಲನಗಳು ಹಾಗೂ ‘ಭಾವಸರಿತೆ’ ಕಥಾಸಂಕಲನ ಪ್ರಕಟವಾಗಿವೆ. ...

READ MORE

Related Books