ಮುಕ್ತಿಚಿತ್ರ

Author : ಅನುಪಮಾ ನಿರಂಜನ

Pages 194

₹ 25.00




Year of Publication: 1998
Published by: ಡಿ.ವಿ.ಕೆ. ಮೂರ್ತಿ
Address: #1498/1, ರಾಮಯ್ಯ ರೋಡ್, ಕೃಷ್ಣಮೂರ್ತಿ ಪುರಂ, ಮೈಸೂರು-570004

Synopsys

‘ಮುಕ್ತಿ ಚಿತ್ರ’ ಕೃತಿಯು ಅನುಪಮಾ ನಿರಂಜನ ಅವರ ಸಾಮಾಜಿಕ ಕಾದಂಬರಿ. ಈ ಕೃತಿಯು ಸಮಾಜದಲ್ಲಿ ನಡೆಯುವಂತಹ ವಿಚಾರಗಳನ್ನು ಪ್ರಸ್ತುತಪಡಿಸುತ್ತದೆ. ಹೋರಾಟದ ಚಿತ್ರಣಗಳು ಇಲ್ಲಿವೆ. ಹೆಣ್ಣನ್ನೇ ಮುಖ್ಯ ಪಾತ್ರವಾಗಿ ಒಳಗೊಂಡಿದೆ. ಸಮಾಜದಲ್ಲಿ ನಡೆಯುವಂತಹ ದಬ್ಬಾಳಿಕೆ, ಪುರುಷ ಪ್ರಧಾನ ಸಮಾಜದ ಮಿತಿಗಳು, ಜನರೊಂದಿಗಿನ ವ್ಯವಹಾರ ಹೀಗೆ ಎಲ್ಲದರ ಮೇಲೆ ಬೆಳಕು ಚೆಲ್ಲಿದೆ. ವೈಚಾರಿಕತೆ, ಬಂಡಾಯ ಪ್ರವೃತ್ತಿ, ಮಾನವೀಯ ಸಂಬಂಧಗಳ ನಿರೂಪಣೆ ಇವೆಲ್ಲಾ ಇವರ ಕಾದಂಬರಿಯ ಕ್ಷೇತ್ರಕ್ಕೆ ಹೊಸ ಮಜಲುಗಳನ್ನು ನೀಡಿದ ಕತಾವಸ್ತುಗಳಾಗಿವೆ.

 

About the Author

ಅನುಪಮಾ ನಿರಂಜನ
(17 May 1934 - 15 February 1991)

ವೃತ್ತಿಯಲ್ಲಿ ವೈದ್ಯೆಯಾಗಿದ್ದ ಡಾ. ಅನುಪಮಾ ನಿರಂಜನ ಅವರ ಮೊದಲ ಹೆಸರು ಡಾ.ವೆಂಕಟಲಕ್ಷ್ಮಿ. ಬರವಣಿಗೆಯನ್ನು ಹವ್ಯಾಸ ಮಾಡಿಕೊಂಡಿದ್ದ ಅವರು ’ಅನುಪಮಾ ನಿರಂಜನ’ ಕಾವ್ಯನಾಮದಲ್ಲಿ ಕಾದಂಬರಿಗಳನ್ನು ರಚಿಸಿದ್ದಾರೆ. 1934ರ ಮೇ 17 ರಂದು ತೀರ್ಥಹಳ್ಳಿಯಲ್ಲಿ ಜನಿಸಿದ ಅವರು ಖ್ಯಾತ ಕಾದಂಬರಿಕಾರ ನಿರಂಜನ ಅವರ ಪತ್ನಿ. ಅನುಪಮ ಅವರು ಪ್ರತಿಭಾವಂತ ಬರಹಗಾರ್ತಿ. ಅವರ ಪ್ರಕಟಿತ ಕೃತಿಗಳು ಅನಂತಗೀತೆ, ಸಂಕೋಲೆಯೊಳಗಿಂದ, ಶ್ವೇತಾಂಬರಿ, ನೂಲು ನೇಯ್ದ ಚಿತ್ರ, ಹಿಮದ ಹೂ, ಸ್ನೇಹ ಪಲ್ಲವಿ, ಹೃದಯವಲ್ಲಭ, ಆಕಾಶಗಂಗೆ, ಸಸ್ಯ ಶ್ಯಾಮಲಾ, ಋಣ, ಮೂಡಲ ಪಡುವಣ, ಮಾಧವಿ, ಎಳೆ, ಸೇವೆ, ಕೊಳಚೆ ಕೊಂಪೆಯ ದಾನಿಗಳು, ಇವು ಅವರ ಕಾದಂಬರಿಗಳು.  ಕಥಾಸಂಕಲನಗಳು- ...

READ MORE

Related Books