ಒಮ್ಮೆ ನಕ್ಕ ನಗು

Author : ತ.ರಾ.ಸು. (ತ.ರಾ. ಸುಬ್ಬರಾವ್)

Pages 248

₹ 125.00
Year of Publication: 2017
Published by: ಓಂ ಶಕ್ತಿ ಪ್ರಕಾಶನ
Address: ನಂ. 748/12, 58ನೇ ತಿರುವು, 4ನೇ ಹಂತ, ರಾಜಾಜಿನಗರ, ಬೆಂಗಳೂರು-560010
Phone: 080 23354619

Synopsys

‘ಒಮ್ಮೆ ನಕ್ಕ ನಗು’ ಹಿರಿಯ ಕಾದಂಬರಿಕಾರ ತ.ರಾ.ಸು ಅವರ ಸಾಮಾಜಿಕ ಕಾದಂಬರಿ. ಈ ಕಾದಂಬರಿ ಕೇವಲ ಮನೋರಂಜನೆ, ವಾಚನದಿಂದ ಉದ್ದೀಪನ ಗೊಂಡ ವಾಚಕರ ಉತ್ಸಾಹಪೂರ್ಣ ಪ್ರಶ್ನೆಗೆ ಭಾವುಕತೆಯ ಉತ್ತರ ಕೊಡುವ ಉದ್ದೇಶ ಹೊಂದಿಲ್ಲ. ಇದರ ಗುರಿ ರಂಜನೆಗಿಂತ ಹೆಚ್ಚಾಗಿ ಪ್ರಚೋದನೆ. ಈ ದೃಷ್ಟಿಯಲ್ಲಿ ಈ ಕಾದಂಬರಿ, ತ.ರಾ.ಸು ಅವರು ಬರೆದ ಕಾದಂಬರಿಗಳಲ್ಲಿ 'ಮಸಣದ ಹೂವು', 'ಬಿಡುಗಡೆಯ ಬೇಡಿ', 'ಕೇದಿಗೆಯ ವನ', 'ಶಿಶುದೈತ್ಯ', 'ಲಾವಣ್ಯವತಿ', 'ಪಂಜರದ ಪಕ್ಷಿ' ಗಳ ಮಾರ್ಗಕ್ಕೆ ಸೇರಿದ್ದು. ಈ ಕಾದಂಬರಿಯನ್ನು ಓದುವಾಗ ಕಥನ ಕುತೂಹಲಕ್ಕಿಂತ, ವಿಚಾರ ಗ್ರಹಿಕೆಗೆ ಹಾಗೂ ಮಂಥನಕ್ಕೆ ಹೆಚ್ಚಿನ ಪ್ರಾಶಸ್ಯವಿದೆ ಎನ್ನಬಹುದು.

About the Author

ತ.ರಾ.ಸು. (ತ.ರಾ. ಸುಬ್ಬರಾವ್)
(12 June 1906 - 10 April 1984)

ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...

READ MORE

Related Books