ಅರಿತು ಬೆರೆತ ಹೃದಯಗಳು

Author : ಸುಶೀಲಾ ಕಮತಗಿ

Pages 126

₹ 100.00
Year of Publication: 2020
Published by: ನೆಲೆ ಪ್ರಕಾಶನ
Address: ಗುರುಬಸವ, ವಿದ್ಯಾನಗರ, ಸಿಂದಗಿ- 586128
Phone: 9972779222

Synopsys

‘ಅರಿತು ಬೆರೆತ ಹೃದಯಗಳು’ ಲೇಖಕಿ  ಸುಶೀಲಾ ಕಮತಗಿ ಅವರ ಕಾದಂಬರಿ. ಮಧ್ಯಮವರ್ಗದ ಕುಟುಂಬಗಳಲ್ಲಿ ಕಣ್ಣಿಗೆ ರಾಚುವ ಸಣ್ಣತನಗಳು, ಅನಿರೀಕ್ಷಿತವಾಗಿ ಧುತ್ತನೆ ಪ್ರಕಟಗೊಳ್ಳುವ ಔದಾರ್ಯಗಳು ಅವರ ಎಲ್ಲ ಕಾದಂಬರಿಗಳ ವಸ್ತುವಾಗಿದ್ದರೂ, ಇಲ್ಲಿಯ  ಪಾತ್ರಗಳು ವರ್ತಮಾನ ಶಿಕ್ಷಣ ವ್ಯವಸ್ಥೆಯಲ್ಲಿ ನುಸುಳಿಕೊಂಡು ಬಂದಿರುವ ನೈತಿಕ ಅಧಃಪತನವನ್ನು, ಆಗಾಗ ಸ್ಫೋಟಗೊಳ್ಳುವ ಗೂಂಡಾಗಿರಿ,ರಾಜಕೀಯ ಕ್ಷೇತ್ರದ ಪುಡಾರಿತನ ಹಾಗೂ ನಿರ್ದಯೆ ಇತ್ಯಾದಿ  ಸಂಗತಿಗಳನ್ನು ಗಂಭೀರವಾಗಿ ಚರ್ಚಿಸುತ್ತವೆ.

 ಸುಭದ್ರ ದೇಶವೊಂದರ ನಿರ್ಮಿತಿಯಲ್ಲಿ ಅವಶ್ಯವಾಗಿ ಬೇಕಾಗಿರುವ ದೇಶಭಕ್ತಿ, ಮಾನವ ಅಂತಃಕರಣ, ಸಹಜೀವಿಯ ಬಗೆಗೆ ನಾವು ತಾಳಬೇಕಾಗಿರುವ ಕಕ್ಕುಲಾತಿ ಹಾಗೂ ಸುಸ್ಥಿರವಾದ ಕೌಟುಂಬಿಕ ವ್ಯವಸ್ಥೆಯಲ್ಲಿ ಅದರ ಸದಸ್ಯರು ತಳೆದಿರಬೇಕಾದ ಆರೋಗ್ಯಪೂರ್ಣ ನಿಲುವುಗಳ ಬಗೆಗೂ ಇಲ್ಲಿಯ ಪಾತ್ರಗಳು ಬದ್ಧತೆಯನ್ನು ಮೆರೆಯುತ್ತವೆ. 

2004ರಲ್ಲಿ ಲೇಖಕಿಯು ತಮ್ಮ 71 ನೇ ವಯಸ್ಸಿನಲ್ಲಿ ನಿಧನರಾದರು, ಅವರ ನಾಲ್ಕು ಅಪ್ರಕಟಿತ ಕಾದಂಬರಿಗಳನ್ನು ಸುಶೀಲಾ ಕಮತಗಿ ಅವರ ಅಪ್ರಕಟಿತ ಕಾದಂಬರಿಗಳ ಪ್ರಕಟಣಾ ಮಾಲೆಯಡಿ ನೆಲೆ ಪ್ರಕಾಶನ ಸಂಸ್ಥೆಯು 2020 ರಿಂದ ಕೈಗತ್ತಿಕೊಂಡಿದ್ದರ ಫಲವೇ ಈ ಕೃತಿ. 

About the Author

ಸುಶೀಲಾ ಕಮತಗಿ
(15 February 1932)

ಲೇಖಕಿ, ಸುಶೀಲಾ ಕಮತಗಿ ಅವರು ಮೂಲತಃ ಗದಗದವರು. ಓದಿದ್ದು 9ನೇ ತರಗತಿಯಾದರೂ ಸಾಹಿತ್ಯ ರಚನೆಯಲ್ಲಿ ಮಹತ್ವದ ಕೃಷಿ ಮಾಡಿದವರು. ಇವರ ತಂದೆ- ಕೊಟ್ರಪ್ಪ ಇಂಗಳಳ್ಳಿ, ತಾಯಿ- ತ್ವಾಟಪ್ಪ ಕೋ. ಕತೆಗಾರ್ತಿ, ಕಾದಂಬರಿಗಾರ್ತಿಯಾಗಿ ಗುರುತಿಸಿಕೊಂಡಿದ್ದ ಸುಶೀಲಾ ಅವರು ಆಧಾರ ಎಂಬ ಕಥಾ ಸಂಕಲನ, ಕಾಡಬೆಳದಿಂದಗಳು, ಬಿರಿದ ಮೊಗ್ಗು, ತ್ಯಾಗ, ಕತ್ತಲೆ ಕರಗುವ ಮುನ್ನ ಅವರ ಪ್ರಮುಖ ಕಾದಂಬರಿಗಳು. ಸುಶೀಲಾ ಕಮತಗಿ ಅವರು 2004ರಲ್ಲಿ ನಿಧನರಾದರು.  ...

READ MORE

Related Books