ಕಾಡ್ಗಿಚ್ಚು

Author : ಅನಂತ ಕುಣಿಗಲ್

Pages 252

₹ 150.00




Year of Publication: 2023
Published by: ಅವ್ವ ಪುಸ್ತಕಾಲಯ
Address: ಕೆಂಚನಹಳ್ಳಿ ಅಂಚೆ, ಹೆಚ್.ದುರ್ಗ ಹೋಬಳಿ ಕುಣಿಗಲ್ ತಾಲ್ಲೂಕು, ತುಮಕೂರು-572123 \n\n

Synopsys

'ಕಾಡ್ಗಿಚ್ಚು' ಅನಂತ ಕುಣಿಗಲ್ ಅವರ ಕಾದಂಬರಿ. ಈ ಕೃತಿಯ ಕುರಿತು ಬರೆದಿರುವ ಲೇಖಕ ಮಹೇಶ ಅರಬಳ್ಳಿ ಅವರು 'ಸಹಬಾಳ್ವೆ ಅನ್ನುವುದು ಕನಸಿನ ಮಾತು. ಆದರೆ ಆ ಕನಸಿನಲ್ಲಿ ಮೂಡುವ ಆಶಯ ನಾಡಿನ ಎಲ್ಲರ ಹಿತವೇ ಆಗಿರುತ್ತದೆ. ಎಲ್ಲರೂ ತಮ್ಮ  ಶಕ್ತ್ಯಾನುಸಾರ ಇರುವ ಪರಿಸ್ಥಿತಿಯನ್ನೇ ಉತ್ತಮಗೊಳಿಸಿಕೊಂಡು ಬದುಕಬೇಕು ಎನ್ನುವ ಉದ್ದೇಶ ಸಮಾಜದ ಪ್ರಗತಿಗೆ ಬಹು ಮುಖ್ಯ. ಅದು ಸದುದ್ದೇಶವಾಗಿರುವ ತನಕ ನಾಡಿನ ಹಿತರಕ್ಷಣೆ ಸಾಧ್ಯ. ಅಧಿಕಾರ ಹೊಂದಿದವರು, ಪ್ರಭಾವೀ ವ್ಯಕ್ತಿಗಳು, ಅನುಕೂಲಸ್ಥರು, ಅದೃಷ್ಟವಂತರು ಅದನ್ನು ತಮ್ಮ ಸ್ವಾರ್ಥ ಸಾಧನೆಗೆ ಅತಿಯಾಸೆಯಿಂದ ವಾಮ ಮಾರ್ಗಗಳನ್ನು ಅನುಸರಿಸಿ ನಾವು ಬೇರೆಯವರಿಗಿಂತ ಉತ್ತಮರು ಎಂಬ ಶ್ರೇಷ್ಟತೆಯ ವ್ಯಸನದಲ್ಲಿ ಮುಳುಗಿದಾಗ ಸಮಾಜದಲ್ಲಿ ಅಸಮತೋಲನ ಉಂಟಾಗುತ್ತದೆ. ನೊಂದವರು, ಅನ್ಯಾಯಕ್ಕೆ ಒಳಗಾದವರು ದಂಗೆ ಏಳುತ್ತಾರೆ. ಅವರ ಒಡಲ ಕಿಚ್ಚು ಮುಂದಿನ ಕ್ರಾಂತಿಗೆ ನಾಂದಿಯಾಗುತ್ತದೆ. ಪ್ರಕೃತಿ ಸಹಜವಾದ ಕಾಡಿನಲ್ಲಿ ಒಣ ಮರ ಗಿಡ ಗಂಟಿಗಳು ಒಂದಕ್ಕೊಂದು ತಿಕ್ಕಾಡಿ ಉಂಟಾದ ಕಿಡಿಯಲ್ಲಿ ಕಾಡು ಸುಟ್ಟು ಭಸ್ಮವಾಗುತ್ತದೆ. ಆದರೆ ಅಷ್ಟೇ ಸಹಜವಾಗಿ ಅಲ್ಲಿ ಮತ್ತೆ ಚಿಗುರೊಡೆಯುತ್ತದೆ. ಮತ್ತದೇ ಹಸಿರಿನ ಹಸಿವಿನಿಂದ ತನ್ನನ್ನು ತಾನೇ ಪೊರೆದುಕೊಳ್ಳುತ್ತದೆ. ಕಾಡಿಗೆ ಇರುವ ಸೆಲ್ಫ್ ಹೀಲಿಂಗಿನ ಶಕ್ತಿ ನಾಡಿಗೂ ಬೇಕಾಗಿದೆ. ತಿಕ್ಕಾಟದ ಬೆಂಕಿಯಲ್ಲಿ ನೊಂದು ಬೆಂದವರ ಬಿಸಿಯುಸಿರಿಗೆ ತಣ್ಣನೆಯ ಭರವಸೆ ಬೇಕಾಗಿದೆ. ಎಲ್ಲರೂ ಎಲ್ಲವೂ ಸಮಾನವಾಗಿ ಬದುಕುವ ಒಂದು ಛಾವಣಿಯಲ್ಲಿ ಹಳೇ ಬೇರಿನ ಅನುಭವದಲ್ಲಿ ಹೊಸ ಚಿಗುರಿಗೆ ಅವಕಾಶವಾಗಿ ಹುಲುಸಾಗಿ ಬೆಳೆಯಬೇಕಾಗಿದೆ.

“ಕಾಡ್ಗಿಚ್ಚು” ಕಾದಂಬರಿಯಲ್ಲಿ ಅನಂತ ಕುಣಿಗಲ್ ಅವರು ಈ ಮೇಲಿನ ವಿಚಾರವನ್ನೇ ಎಳೆ ಎಳೆಯಾಗಿ ಬಿಡಿಸಿದ್ದಾರೆ. ಇದು ಅವರದೇ ಕಾದಂಬರಿಯಾದ “ರೌದ್ರಾವರಣಂ”ನ ಮುಂದುವರಿದ ಭಾಗ. ಆದರೆ ಕಾಡ್ಗಿಚ್ಚನ್ನು ಪ್ರತ್ಯೇಕವಾಗಿ ಓದಿದರೂ ಯಾವುದೇ ತೊಡಕಿಲ್ಲದೆ ಓದಿಸಿಕೊಳ್ಳುತ್ತದೆ. ರೌದ್ರಾವರಣಂ ನಲ್ಲಿ  ಓದುಗರ ಮನಸೆಳೆದ ಅಂಶಗಳು ಕಾಡ್ಗಿಚ್ಚಿನಲ್ಲೂ ನಿಚ್ಚಳವಾಗಿ ಮೂಡಿವೆ. ಅಲ್ಲಿ ಚಂದ್ರ, ಇಲ್ಲಿ ರೂಬಿ. ಉಳಿದಂತೆ ಹಳೆಯ ಪಾತ್ರಗಳು ಮುಂದುವರೆದುಕೊಂಡು ಹೋಗುತ್ತವೆ. ಈ ಕಥನದ ಅಂತ್ಯ ರೋಚಕವಾಗಿದ್ದು ಮುಂದಿನ ಭಾಗಕ್ಕೆ ಮುನ್ನುಡಿಯಂತಿದೆ.

ಒಂದು ಕಥನವನ್ನು ಪ್ರಾರಂಭಿಸಿ, ಅದನ್ನು ಸೀರೀಸಿನಲ್ಲಿ ಮುಂದುವರೆಸಿಕೊಂಡು ಹೋಗುತ್ತಿರುವ ಅನಂತರವರ ಶ್ರದ್ಧೆ, ತಯಾರಿ ಹಾಗೂ ನೈಜ ಕಥನ ಶೈಲಿ ಶ್ಲಾಘನೀಯವಾದದ್ದು. ರೌದ್ರಾವರಣಂ ಕೃತಿಗೆ ಓದುಗರು ತೋರಿದ ಪ್ರೀತಿ ಕಾಡ್ಗಿಚ್ಚಿಗೂ ಮುಂದುವರೆಯಲಿ ಎಂದು ಆಶಿಸಿದ್ದಾರೆ. 

About the Author

ಅನಂತ ಕುಣಿಗಲ್
(20 December 1997)

ಅನಂತ (20-ಡಿಸೆಂಬರ್-1997) ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಂಚನಹಳ್ಳಿ ಗ್ರಾಮದವರು. ತಾಯಿ ಗೌರಮ್ಮ ಮತ್ತು ತಂದೆ ಶ್ರೀಮಾನ್ ಲೇ. ನರಸಯ್ಯ. ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದ ನಂತರ ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯಲ್ಲಿ ಥಿಯೇಟರ್ ಡಿಪ್ಲೊಮಾ ತರಬೇತಿ ಮುಗಿಸಿ, ಶಿವಸಂಚಾರ ರೆಪರೇಟರಿಯಲ್ಲಿ ನಟ ಹಾಗೂ ತಂತ್ರಜ್ಞನಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವಾರು ಕನ್ನಡ ಕಿರುಚಿತ್ರಗಳನ್ನು ನಿರ್ಮಿಸಿ, ಶಾಲಾ ಕಾಲೇಜು ಮಕ್ಕಳಿಗೆ ಕಿರು ನಾಟಕಗಳನ್ನು ನಿರ್ದೇಶನ ಮಾಡಿರುತ್ತಾರೆ. ಅವ್ವ ಪುಸ್ತಕಾಲಯ ಎಂಬ ಸಾಹಿತ್ಯ ಬಳಗವನ್ನು ಕಟ್ಟಿಕೊಂಡು ಸಾಹಿತ್ಯ ಸೇವೆಯಲ್ಲಿ ನಿರಂತರಾಗಿರುವ ಇವರು ಸದ್ಯ ಬೆಂಗಳೂರಿನಲ್ಲಿದ್ದುಕೊಂಡು ಕನ್ನಡ ಚಲನಚಿತ್ರಗಳಲ್ಲಿ ...

READ MORE

Excerpt / E-Books

https://wa.me/c/918548948660

Related Books