ಝಣ ಝಣ ರೂಪಾಯಿ

Author : ಉಳುವೆ ಕೆ. ಶಾರದಾ

Pages 152

₹ 50.00




Year of Publication: 1988
Published by: ಗಜಾನನ ಪ್ರಕಾಶನ
Address: ನಂ. 43/8, ಮಾಗಡಿ ಮುಖ್ಯರಸ್ತೆ, (ಮಹಾರಾಜ ಟಿಂಟ್ ಹೌಸ್ ಎದುರು) ಆಗ್ರಹಾರ ದಾಸರಹಳ್ಳಿ, ಜೈಮುನಿರಾವ್ ಸರ್ಕಲ್ ಹತ್ತಿರ ಬೆಂಗಳೂರು-560079.

Synopsys

ಪ್ರತಿದಿನ ಒಂದಲ್ಲ, ಒಂದು- ಮನುಷ್ಯನ ದುರಾಸೆಯ ದುರಂತಗಳನು ನಾವು ನೋಡುತ್ತಾ ಬಂದಿದ್ದೇವೆ. ಎಲ್ಲಕ್ಕಿಂತ ಮಿಗಿಲಾದುದು ಹಣ ಎಂಬ ನಂಬಿಕೆ ಬಂದಾಗ ಮನುಷ್ಯ ಹೇಗೆಲ್ಲ ಬದಲಾಗುತ್ತಾನೆ ಎಂಬುದನ್ನು ಈ ಕಾದಂಬರಿಯಲ್ಲಿ ಸೂಕ್ಷ್ಮವಾಗಿ ವಿವರಿಸುತ್ತದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ನಾಗರಿಕ ಮನುಷ್ಯರು ತನ್ನದೇ ದುಶ್ಚಟಗಳಿಂದ ಕಳಿದುಕೊಳ್ಳಲಾರದಷ್ಟು ಹಣ 'ಜೂಜು' ಲಾಟರಿ ಆಡುವಿಕೆಯಿಂದ ಕಳೆದುಕೊಂಡು ಬಿಟ್ಟಿದ್ದಾರೆ. ಪತನ ಕಂಡಿದ್ದಾರೆ. ನಾವು ನಾಚಬೇಕು ; ಈ ಷಂಡತನಕ್ಕೆ ತಲೆ ತಗ್ಗಿಸಬೇಕು. ವಸ್ತು ಸ್ಥಿತಿ ಕಂಡು “ಅಯ್ಯೋ' ಎನ್ನುವಿರಿ ! “ ಕರುಳು ಕಿವುಚಿ ಛೇ...ಈ ಮಾನವ ಎಷ್ಟು ಆಸೆಬುರುಕ. ಹಣವೆಂದರೆ ಹೆಣವೂ ಬಾಯಿ ಬಿಟ್ಟಿತು.ಅನಾಯಾಸವಾಗಿ ಹಣ ಬರಬೇಕು, ಶ್ರಮ ಯಾರಿಗೂ ಬೇಡ, ಮೈಮುರಿಯಬಾರದು, ಹೊಲಗದ್ದೆಗಳಲ್ಲಿ ಕೃಷಿ ಕೆಲಸ ಬೇಡ, ಬೆವರು ಇಳಿಯಬಾರದು ! ಆದರೆ ಕುಬೇರನ ವಂಶಸ್ಥರೇ ಈಗಲೇ ಆಗಿಬಿಡಬೇಕು.... ಎಂಥಾ ಅರ್ಥಹೀನ, ದುರಾಸೆಗಳ “ರುಣ ಝುಣ ರೂಪಾಯಿ” ಕಾದಂಬರಿ ಚಿತ್ರಣ.

About the Author

ಉಳುವೆ ಕೆ. ಶಾರದಾ
(10 October 1970)

ಕತೆಗಾರ, ಕವಯತ್ರಿ ಉಳುವೆ ಕೆ. ಶಾರದಾ ಅವರು ಜನಿಸಿದ್ದು 10-10-1970  ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಉಳುವೆಯಲ್ಲಿ. ತಂದೆ ಕೃಷ್ಣಮೂರ್ತಿ ಎಸ್., ತಾಯಿ ನಾಗರತ್ನ. ‘ಸುಪ್ರಭಾತ (1993), ಬ್ರಹ್ಮಗಂಟು (1994), ಪ್ರಣಯ ಫಣಿಬಂಧನ (1997), ಹೊಸಹಾದಿಯಲ್ಲಿ(1996), ಝಣಝಣ ರೂಪಾಯಿ (1998), ಚಂದ್ರೋದಯ (1997), ಮಾತೃಕಸ್ಯೆ (19997), ನನಸಾದ ಕನಸು (1998), ಮನಸು ಕೊಟ್ಟವಳು (2000) ಅವರ ಪ್ರಕಟಿತ ಕಾದಂಬರಿಗಳು.  ‘ನೆನಪಿನ ಕೋಲು’ ಕಥಾ ಸಂಕಲನ 2001, `ನಿಸರ್ಗದ ಮಡಿಲು' ಕವನ ಸಂಕಲನ 2005ರಲ್ಲಿ ಪ್ರಕಟವಾಗಿದೆ. ಅವರ ಸಾಹಿತ್ಯ ಸೇವೆಗೆ `ಅಳಸಿಂಗ ಪ್ರಶಸ್ತಿ (1998), ಅತ್ತಿಮಬ್ಬೆ ಉದಯೋನ್ಮುಖ ಪ್ರಶಸ್ತಿ (ಅತ್ತಿಮಬ್ಬೆ ಪ್ರತಿಷ್ಠಾನ) (1994), ಕೃನಾ ಮೂರ್ತಿ ಪ್ರಶಸ್ತಿ (1995), ...

READ MORE

Related Books