ಸ್ವಯಂವರ

Author : ಪ್ರಸನ್ನಾ ವಿ. ಚೆಕ್ಕೆಮನೆ

₹ 230.00
Year of Publication: 2022
Published by: ಅಪರಂಜಿ
Address: ಚಿಕ್ಕಮಗಳೂರು

Synopsys

ಲೇಖಕಿ ಪ್ರಸನ್ನಾ ವಿ. ಚೆಕ್ಕೆಮನೆ ಅವರು ಆರನೆಯ ಕಾದಂಬರಿ ಸ್ವಯಂವರ. ಕಾಸರಗೋಡಿನ ಕುಂಬಳೆ ಸೀಮೆಯ ಹವ್ಯಕ ಭಾಷೆಯಲ್ಲಿ ರಚಿಸಲ್ಪಟ್ಟಿದೆ. ಮಹೇಶ್ ಎಳ್ಯಡ್ಕ ಅವರು ಕೃತಿಯಲ್ಲಿ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ,ಭಾಷೆಯ ಬೆಳೆವು ಉತ್ತಮ ಸಾಹಿತ್ಯಗಳಿಂದ: ಸಾಹಿತ್ಯದ ಔನತ್ಯವು ಭಾಷಾ ಉಪಯೋಗದಿಮದ. ಪ್ರಸನ್ನಾ ಚೆಕ್ಕೆಮನೆ ಯವರ ಕಾದಂಬರಿ ಇಂತಹ ಅನುಪಮ ಬಂಧದ ಉದಾಹರಣೆ ಎಂಬುದಾಗಿ ಹೇಳಿದ್ದಾರೆ.

About the Author

ಪ್ರಸನ್ನಾ ವಿ. ಚೆಕ್ಕೆಮನೆ
(05 January 1979)

ಕಾಸರಗೋಡಿನ ಬಾಡೂರು ಗ್ರಾಮದ ಪಳ್ಳದಲ್ಲಿರುವ ಸರ್ಪಂಗಳ ಹರಿಯಪ್ಪ ಭಟ್ ಹಾಗೂ ರಮಾ ಎಚ್. ಭಟ್ ದಂಪತಿಯ ಪುತ್ರಿ ಪ್ರಸನ್ನಾ ವಿ ಚೆಕ್ಕೆಮನೆ 05-01-1979ರಂದು ಜನಿಸಿದರು. ಅವರು ಚೆಕ್ಕೆಮನೆ ವೆಂಕಟಕೃಷ್ಣ ಅವರ ಪತ್ನಿ. ಕನ್ನಡ, ಮಲೆಯಾಳಂ ಹಾಗೂ ಹವ್ಯಕ ಭಾಷೆಗಳಲ್ಲಿ ಕಥೆ, ಕವನ, ಭಾವಗೀತೆ, ಭಕ್ತಿಗೀತೆ, ಲೇಖನಗಳನ್ನು ಬರೆಯುತ್ತಿರುವ ಇವರ ಒಂದು ಹವ್ಯಕ ಕಾದಂಬರಿ ಸ್ವಯಂವರವು ಒಪ್ಪಣ್ಣ. ಕಾಂ ಎಂಬ ವೆಬ್ ಸೈಟ್ ನಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ. ತುಳಸೀಹಾರ, ಗರಿಕೆಯಂಚಿನ ಹಿಮಬಿಂದು, ಸಿಂಧೂರ ರೇಖೆಯ ಮಿಂಚು, ನಿನಗಾಗಿ ತೆರೆದ ಬಾಗಿಲು, ಯಾವ ಕಾಣಿಕೆ ನೀಡಲಿ ನಿನಗೆ, ನನ್ನೆದೆಯು ಮಿಡಿಯುತಿದೆ ನಿನ್ನ ...

READ MORE

Related Books