ಕೆಂಡದ ಸೆರಗು

Author : ರಾಕೇಶ್ ನಾಯ್ಕ್

Pages 80

₹ 80.00
Year of Publication: 2021
Published by: ಹಿಮಘನ ಪ್ರಕಾಶನ
Address: #322/5, ನ್ಯೂ ಕವಿಕ ಲೇಔಟ್, 7ನೇ ಅಡ್ಡರಸ್ತೆ, ಮೈಸೂರು ರೋಡ್, ಬೆಂಗಳೂರು-560026.
Phone: 7019978440

Synopsys

'ಕೆಂಡದ ಸೆರಗು' ಕೃತಿಯು ರಾಕೇಶ್ ನಾಯಕ್ ಅವರ ಕಾದಂಬರಿಯಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಲೇಖಕಿ ನಕ್ಷತ್ರ ಅವರು, ಬಾಲ್ಯದಿಂದ ಇಲ್ಲಿವರೆಗೂ ದೇಹ ಮಾರಿಕೊಂಡವರು ಎಂದು ಕರೆಸಿಕೊಳ್ಳುವ ಹೆಣ್ಣು ಮಕ್ಕಳು ನಮ್ಮ ಬದುಕಲ್ಲಿ ನೆರೆಮನೆಯಾಕೆಯೋ ಸಹಪಾಠಿಯ ಅಮ್ಮನಾಗಿಯೋ, ಸಹದ್ಯೋಗಿಯಾಗಿಯೋ, ರಾತ್ರಿ ರಸ್ತೆ ದೀಪದಡಿ ಮಿಂಚುವ ಸೀರೆಯಲ್ಲಿ ನಿಂತ ಹೆಂಗಸಾಗಿಯೋ ಹಾದು ಹೋಗುತ್ತಿರುತ್ತಾರೆ. ಆ ಕ್ಷಣಕ್ಕೆ ನಮ್ಮೊಳಗೆ ನೂರು ಭಾವ ಹಾದು ಹೋಗುತ್ತದೆ. ಕೆಲವೊಮ್ಮೆ ಅವರ ಬಗ್ಗೆ ಸಿಟ್ಟು, ಕೆಲವೊಮ್ಮೆ ಹೇಸಿಗೆ, ಜಿಗುಪ್ಸೆ, ಕೆಲವೊಮ್ಮೆ ಕರುಣೆ ಮನಸ್ಸಲ್ಲಿ ಅವರ ಬಗ್ಗೆ ಹೀಗೆ ನೂರಾರು ಯೋಚನೆಗಳು ಹುಟ್ಟುತ್ತಿರುತ್ತದೆ. ಸಮಾಜದಲ್ಲಿ ಹೆಣ್ಣಿಗೆ ವ್ಯೆಶ್ಯೆಯ ಪಟ್ಟ ಕೊಡುವವನು ಗಂಡೇ ಆದರೂ ಹೆಸರು ಹೆಣ್ಣಿಗಷ್ಟೇ ಅಂಟಿಕೊಳ್ಳುತ್ತದೆ. ಅವಳನ್ನು ಇಂಚಿಂಚು ಸಾಯಿಸುತ್ತದೆ. ಒಮ್ಮೆ ಆ ಹೆಸರು ಅಂಟಿಕೊಂಡರೆ ಅವಳನ್ನು ಯಾರು ಹತ್ತಿರ ಸೇರಿಸಲಾರರು. ಯಾರಿಗಾಗಿ ಆಕೆ ಆ ಕೆಲಸಕ್ಕೆ ಇಳಿದಳೋ ಅವರೇ ಅವಳನ್ನು ಮುಂದೆ ಕಸಕ್ಕಿಂತ ಕಡೆ ಮಾಡಿದ ಉದಾಹರಣೆಗಳೆಷ್ಟೋ? ವೇಶ್ಯೆ ಎಂದು ಸಮಾಜದಿಂದ ಕರೆಯಲ್ಪಡುವ ಹೆಣ್ಣು ಮಕ್ಕಳ ಬದುಕಿನ ಕಥೆಗಳು ಹೃದಯವಿದ್ರಾವಕವಾಗಿರುತ್ತವೆ. ಹಾಗಾದರೆ ಅವರ ಮಕ್ಕಳ ಪಾಡು ಹೇಗೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಅಮ್ಮನ ಹಾದಿಯನ್ನೇ ಮಗಳು ಹಿಡಿಯುವುದು ಎಂಬುದು ಪ್ರಚಲಿತದಲ್ಲಿರುವ ಮಾತು. ಅಂತಹ ಪರಿಸರದಲ್ಲಿ ಬೆಳೆದ ಮಗು ಕೆಟ್ಟ ಹಾದಿ ತುಳಿಯಲು ಹಲವಾರು ಕಾರಣಗಳು ಇದ್ದರೂ ಅವನ್ನೆಲ್ಲ ಮೆಟ್ಟಿ ನಿಂತು ಬದುಕಟ್ಟಿಕೊಳ್ಳುವುದೇ ಇಲ್ಲಿ ಕಥಾವಸ್ತುವಾಗಿದೆ ಎನ್ನುತ್ತಾರೆ.

About the Author

ರಾಕೇಶ್ ನಾಯ್ಕ್

ರಾಕೇಶ್ ನಾಯ್ಕ್ ಮೂಲತಃ ದಾವಣಗೆರೆಯ ಭಾರತ್ ಕಾಲೋನಿಯವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದ್ದು, ಸಾಹಿತ್ಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ಕೆಂಡದ ಸೆರಗು ...

READ MORE

Related Books