ದೇವರ ಕೂಸು

Author : ಕೃಷ್ಣಮೂರ್ತಿ ಪುರಾಣಿಕPublished by: ಸಾಹಿತ್ಯ ನಂದನ
Address: ಬೆಂಗಳೂರು

Synopsys

ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕ್ ಅವರ ಸಮಾಜಿಕ ಕಾದಂಬರಿ ‘ದೇವರ ಕೂಸು’. ದೇವರು ದೆವ್ವ ಇವುಗಳ ಮೇಲಿನ ನಂಬಿಕೆ ಅಪನಂಬಿಕೆ ಇವೆಲ್ಲಾ ಅವರವರಿಗೆ ಬಿಟ್ಟಿದ್ದು. ಅವೆಲ್ಲಾ ವೈಯಕ್ತಿಕ ಭಾವನೆ ಎಂದೇ ಹೇಳಬಹುದು. ದೇವರನ್ನು ಅಪಾರವಾಗಿ ನಂಬುವವರು ದೆವ್ವವನ್ನೂ ನಂಬುತ್ತಾರೆ. ದೇವರನ್ನು ನಂಬದೇ ಇರುವವರು ದೆವ್ವವನ್ನೂ ನಂಬುತ್ತಾರೋ ಬಿಡುತ್ತಾರೋ. ಅಂದಿನ ಕಾಲದಲ್ಲಿ ದೆವ್ವದ ಮೇಲಿನ ನಂಬಿಕೆ ತುಸು ಹೆಚ್ಚೇ ಎಂದು ಹೇಳಬಹುದು. ಮರಣ ಹೊಂದಿದ ಜೀವವೊಂದು ಬದುಕಿರುವವರ ದೇಹದೊಳಗೆ ನುಸುಳಿ, ಕಾಟ ಕೊಡುತ್ತದೆಯೆಂಬುದೆಲ್ಲ ಆಗಿನವರ ನಂಬಿಕೆ. ಈಗಲೂ ಇದೆಯೇನೋ. ಕೃಷ್ಣಮೂರ್ತಿ ಪುರಾಣಿಕರ ದೇವರ ಕೂಸು ಕಾದಂಬರಿಯ ನಾಯಕ ಈರಯ್ಯ. ತಾಯಿಯ ಪ್ರೀತಿಯ ಕಾಣಲಿಲ್ಲ, ತಂದೆಯಿದ್ದರೂ ಸಹ ಅವರು ಶಿವನ ಬಹುದೊಡ್ಡ ಭಕ್ತರಾಗಿದ್ದ ಕಾರಣ ಶಿವನ ಧ್ಯಾನದಲ್ಲೇ ಮುಳುಗಿರುತ್ತಿದ್ದರು. ಹೀಗಾಗಿ ಈರಯ್ಯನಿಗೆ ಅವನ ಊರಿನವರೇ ಮನೆಯವರಂತೆ. ಅವನ ತಂದೆ ಕಾಲವಾದ ನಂತರ, ಊರಿನ ಗೌಡರ ಆಕಸ್ಮಿಕ ಭೇಟಿಯೇ ಅವನ ಜೀವನಕ್ಕೊಂದು ತಿರುವು ಸಿಕ್ಕಿದಂತೆ. ಗೌಡತಿಯ ಕಡೆಯವಳಾದ ಬಂಗಾರಿಯೊಡನೆ ವಿವಾಹ, ಅವರಿಬ್ಬರ ಅಪೂರ್ವವಾದ ಪ್ರೀತಿಯ ದಾಂಪತ್ಯ. ಫಲವಾಗಿ ಹುಟ್ಟುವ ಮಗಳು ಸಿಂಗಾರಿ. ಎಲ್ಲವೂ ಚೆನ್ನಾಗಿ ಸಾಗುತ್ತಿಯೆಂದು ಅಂದುಕೊಳ್ಳುವಾಗ ಬಂಗಾರಿಯ ಮರಣ, ಮುಂದೆ ಸಿಂಗಾರಿಯೂ ಅವನ ಬಾಳಿನಿಂದ ದೂರವಾಗುತ್ತಾಳೆ. ಈರಯ್ಯ ದುರಂತ ನಾಯಕ ಅಂತಲೇ ಹೇಳಬಹುದು. ಕಥೆಯು ಸುಖಾಂತ್ಯವೋ ದುಃಖದ ಅಂತ್ಯವೋ ತಿಳಿಯಲು ಕಾದಂಬರಿ ಓದಲೇ ಬೇಕು.

About the Author

ಕೃಷ್ಣಮೂರ್ತಿ ಪುರಾಣಿಕ
(05 September 1911 - 09 November 1985)

ಅಗ್ರಶ್ರೇಣಿಯ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು ಹುಟ್ಟಿದ್ದು ಬಾಗಲಕೋಟ ಜಿಲ್ಲೆಯ ಬೀಳಗಿಯಲ್ಲಿ.1911 ಸೆಪ್ಟಂಬರ್ 5ರಂದು. 1933ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಪುರಾಣಿಕರು 1946ರಲ್ಲಿ 'ರಾಮೂನ ಕಥೆಗಳು' ಪ್ರಕಟಿಸಿದರು. ಅವರ 'ಧರ್ಮದೇವತೆ' ಕಾದಂಬರಿ 'ಕರುಣೆಯೇ ಕುಟುಂಬದ ಕಣ್ಣು' ಎಂಬ ಚಲನಚಿತ್ರವಾಗಿದೆ. ಪುರಾಣಿಕರ 11 ಕೃತಿಗಳು  ಬೆಳ್ಳೆತೆರೆ ಕಂಡಿವೆ.  'ಸನಾದಿ ಅಪ್ಪಣ್ಣ' ಕನ್ನಡಿಗರೆಂದೂ ಮರೆಯದ ಕೃತಿ. ಮೊದಲ ಪ್ರಕಟಿತ ಗದ್ಯ ಕೃತಿ, 'ರಾಮೂನ ಕಥೆಗಳು'. ಮೊದಲ ಕವನ ಸಂಕಲನ 'ಬಾಳ ಕನಸು'. ಮೊದಲ ಕಾದಂಬರಿ 'ಮುಗಿಲಮಲ್ಲಿಗೆ'. 'ಮೌನಗೌರಿ', 'ಮುತ್ತೈದೆ', `ಮನೆ ತುಂಬಿದ ಹೆಣ್ಣು', 'ಮಣ್ಣಿನ ಮಗಳು', 'ಕುಲವಧು', 'ಮನಸೋತ ಮನದನ್ನೆ', 'ಧರ್ಮ ...

READ MORE

Related Books