ಬಾಳಬಟ್ಟೆ

Author : ಎಂ. ಉಷಾ

Pages 300

₹ 330.00
Year of Publication: 2023
Published by: ಅಹರ್ನಿಶಿ ಪ್ರಕಾಶನ
Address: ಜ್ಞಾನವಿಹಾರ ಬಡಾವಣೆ, ಕಂಟ್ರಿಕ್ಲಬ್ ಎದುರು, ವಿದ್ಯಾನಗರ, ಶಿವಮೊಗ್ಗ- 577203
Phone: 9449174662

Synopsys

ಎಂ.ಉಷಾ ಅವರ ಕಾದಂಬರಿ' ಬಾಳಬಟ್ಟೆ'. ಈ ಕೃತಿಯ ಕುರಿತು ಓ.ಎಲ್.ನಾಗಭೂಷಣಸ್ವಾಮಿ ಅವರು ಹೀಗೆ ಹೇಳಿದ್ದಾರೆ; ಚಾಮರಾಜನಗರದ ಸೀಮೆಯಲ್ಲಿ 1925ರಿಂದ 1965ರ ಕಾಲದ ಮಿತಿಯಲ್ಲಿ ಬದುಕಿದ ಮಧ್ಯಮ ಮತ್ತು ಮೇಲುಜಾತಿಗಳ ಸಮುದಾಯದ ಮೂರು ತಲೆಮಾರುಗಳ ಕಥೆ ಹೇಳುತ್ತ ಆ ಕಾಲದ ಬದುಕಿನ ದಾರಿಯ ತಿರುವು, ಏರಿಳಿತಗಳನ್ನು ಬಲುಮಟ್ಟಿಗೆ ತಮ್ಮ ಬಾಲ್ಯದ ನೆನಪುಗಳಲ್ಲಿ ಊರಿಕೊಂಡು ಚಿತ್ರಿಸಿದ್ದಾರೆ. ಈಗ ಬದುಕಿನ ಆರನೆ ದಶಕಕ್ಕೆ ಕಾಲಿಡುತ್ತಿರುವ ಹಲವರು ತಮ್ಮ ಬಾಲ್ಯ ಕಾಲದ ಕನಸಿನ ಲೋಕವನ್ನು ಕಾದಂಬರಿಗೊಳಿಸುತ್ತಿದ್ದಾರೆ. ಈಗ ಕಾಣುವ ಆ ಕಾಲದ ಕನಸನ್ನು ಹೆಣ್ಣು ಪಾತ್ರಗಳ ನೋಟದ ಮೂಲಕ ಚಿತ್ರಿಸುವುದು ಈ ಕೃತಿಯ ಹೆಚ್ಚುಗಾರಿಕೆ. ಆಧುನಿಕತೆಗೆ ಹೊರಳುವ ವ್ಯಕ್ತಿಗಳಾಗಿ ತಮ್ಮತನ ಸ್ಥಾಪಿಸುವ ಆಸಕ್ತಿ, ತವಕಗಳ ಜೊತೆಗೇ ಪರಿಚಿತ ಬದುಕಿನ ಕ್ರಮವನ್ನು ಬಿಡಲಾರದ ತೊಳಲಾಟ ಎಲ್ಲ ಕಾಲದ ಎಲ್ಲ ಸಮಾಜಗಳಲ್ಲೂ ಕಾಣುವುದು ಸಹಜ ಉಷಾ ಅವರ ಕಾದಂಬರಿ ದೈನಿಕ ಬದುಕಿನ ವಿವರಗಳ ಮೂಲಕವೇ ವಿವಿಧ ಪಾತ್ರಗಳ ಮನಸಿನ ಲೋಕವನ್ನೂ, ಹೊರಲೋಕದ ಬದಲಾವಣೆಗಳನ್ನೂ ಹಿಡಿದಿಡಲು ಅಪೇಕ್ಷಿಸುತ್ತದೆ. ಅಮ್ಮ, ಅತ್ತೆ, ವಾರಗಿತ್ತಿ ಇಂಥ ಸಂಬಂಧಗಳ ಸಿಕ್ಕು, ಗೋಜಲುಗಳ ಮೂಲಕ, ಊಟ, ಉಪಚಾರ, ಹಬ್ಬ, ಸಂತೆ ಮತ್ತು ಎಂತಹ ಗ್ರಾಮೀಣ ಬದುಕನ್ನೂ ಅಲುಗಿಸಿ ಬದಲಿಸುವ ಅಧಿಕಾರ ವ್ಯವಸ್ಥೆಗಳ ಮೂಲಕವೇ ಬಾಳಬಟ್ಟೆಯ ಲೋಕ ರೂಪ ಪಡೆದಿದೆ. ವ್ಯಕ್ತಿ, ಮನೆ, ಊರು, ಸಮಾಜ, ಲೋಕ ಹೀಗೆ ಗತದ ಕನಸಿನ ವಿಸ್ತಾರ ಹಿಗ್ಗುತ್ತದೆ. ಉಪಾ ತಮ್ಮ ಮೊದಲ ಕಾದಂಬರಿಯಲ್ಲೇ ವಿವರ, ವಿಚಾರ ಮತ್ತು ನುಡಿಯ ಪದವನ್ನು ಸಾಧಿಸುವಲ್ಲಿ ಯಶಸ್ಸು ಪಡೆದಿದ್ದಾರೆ.

About the Author

ಎಂ. ಉಷಾ
(12 May 1967)

ಲೇಖಕಿ, ಅನುವಾದಕಿ ಎಂ. ಉಷಾ ಅವರು ಮೂಲತಃ ಚಾಮರಾಜನಗರ ಜಿಲ್ಲೆಯವರು. 1967 ಮೇ 12 ರಂದು ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಹಾಗೂ ಪಿ.ಎಚ್‌ಡಿ ಪದವಿ ಪಡೆದಿದ್ದಾರೆ. ಸಾಹಿತ್ಯ, ವಿಮರ್ಶೆ, ಆಧುನಿಕ ಪೂರ್ವ ಸಾಹಿತ್ಯ ಮತ್ತು ಇತಿಹಾಸ ವಿಷಯದಲ್ಲಿ ಆಸಕ್ತಿ. ಅನೇಕ ಗ್ರಂಥಗಳನ್ನು ಅನುವಾದಿಸಿದ್ದಾರೆ. ಭಾಷಾಂತರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಪತ್ರಿಕೆ ಮತ್ತು ಮಹಿಳೆ, ಭಾರತೀಯ ಸ್ತ್ರೀವಾದ ಮತ್ತು ಸಂಸ್ಕೃತಿ ಚಿಂತನೆ, ಮಹಿಳೆ ಮತ್ತು ಜಾತಿ, ಮಹಿಳಾ ಅಧ್ಯಯನ, ಆಧುನಿಕ ಮಹಿಳಾ ಸಾಹಿತ್ಯ, ಭಾಷಾಂತರ ಮತ್ತು ಲಿಂಗ ರಾಜಕಾರಣ, ಭಾಷಾಂತರ ಪ್ರವೇಶಿಕೆ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ‘ಶೂಲಿ ...

READ MORE

Related Books