ಕೆಂಗುಲಾಬಿ

Author : ಹನುಮಂತ ಹಾಲಿಗೇರಿ

Pages 138

₹ 190.00




Published by: ಸಹಜ ಪುಸ್ತಕ ಪ್ರಕಾಶನ, ಬಾಗಲಕೋಟೆ
Address: 20 ಮೈನ್ ರೋಡ್, 7 ಬ್ಲಾಕ್, ಕೋರಮಂಗಲ, ಬೆಂಗಳೂರು, 560085
Phone: 9986302947

Synopsys

ಕಥೆಗಾರ, ಪತ್ರಕರ್ತ ಹನುಮಂತ ಹಾಲಗೇರಿ ಅವರ ಅತ್ಯಂತ ಜನಪ್ರಿಯ ಕಾದಂಬರಿಯಿದು. ಮೊದಲ ಕಾದಂಬರಿಯಲ್ಲಿಯೇ ಹನುಮಂತ ಅವರು ಭರವಸೆ ಮೂಡಿಸುವಂತೆ ಕಥೆ ಹೇಳುವ ಕೌಶಲ್ಯ ರೂಢಿಸಿಕೊಂಡಿದ್ದಾರೆ. ಈ ಕಾದಂಬರಿಯು ಪ್ರಕಟವಾದ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಅತಿ ಹೆಚ್ಚು ಮುದ್ರಣಗಳನ್ನು ಕಂಡಿದೆ. ಲೈಂಗಿಕ ವೃತ್ತಿಯ ಸರಿ ಅಥವಾ ತಪ್ಪು ಎಂಬ ವಾದಿಸದೇ ಇರುವ ಕಾದಂಬರಿಯು ಒಂದು ಹೊತ್ತಿನ ಅನ್ನಕ್ಕಾಗಿ ಲೈಂಗಿಕ ಕಾರ್ಯಕರ್ತೆಯರಾಗಿ ಬದುಕಬೇಕಾದ ಅನಿವಾರ್ಯ ಸ್ಥಿತಿ ಅದು ರೂಪುಗೊಳ್ಳುವ ರೀತಿಯನ್ನು ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ವೇಶ್ಯೆಯರ ಬದುಕಿನ ಅನಾವರಣ ಎಂಬ ಟ್ಯಾಗ್ ಲೈನ್ ಹೊಂದಿದೆ. ಆದರೆ ಹಾಗಂತ ಇಡೀ ಪುಸ್ತಕದಲ್ಲಿ ಒಮ್ಮೆಯೂ ಓದುಗನನ್ನು ತಣಿಸುವುದಕ್ಕಾಗಿ ರೋಚಕ ತಂತ್ರ ಬಳಸಿಲ್ಲ. ಬದುಕಿನ ಘಟನೆಗಳ ಮೂಲಕ ಕಥೆ ಹೇಳುತ್ತ ಹೋಗುವ ಹನುಮಂತ ಅವರು ಜನಪ್ರಿಯತೆಯ ಆಮಿಷಕ್ಕೆ ಒಳಗಾಗದೇ ಸಂಯಮದಿಂದ ಕಥೆ ಕಟ್ಟಿಕೊಟ್ಟಿದ್ದಾರೆ. ಗ್ರಾಮೀಣ ಮಹಿಳೆ, ಕೆಳಜಾತಿ. ವರ್ಗದ ಮಹಿಳೆಯರ ಬದುಕಿನ ದುಸ್ಥಿತಿಯ ಚಿತ್ರಣ ದೊರೆಯುತ್ತದೆ. ಗ್ರಾಮೀಣ ಬದುಕಿನ ಊಳಿಗಮಾನ್ಯ ಶೋಷಕ ವ್ಯವಸ್ಥೆ, ಅದು ತನ್ನನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಕಟ್ಟಿದ ಸಂಪ್ರದಾಯದ ಗೋಡೆಗಳು, ಜಾತೀಯತೆ. ಅಸಹಾಯಕ ಮಹಿಳೆಯ ಮೇಲೆ ಮೇಲೆ ನಡೆಯುವ ದೌರ್ಜನ್ಯ, ಮಧ್ಯವರ್ತಿಗಳು, ಮಾರಾಟಗಾರರ ಜಾಲ, ಅಸಹಾಯಕತೆಗಳು ಮನ ಮಿಡಿಯುವಂತೆ ಚಿತ್ರಿತವಾಗಿವೆ. ಹನುಮಂತ ಅವರ ಸಂಯಮದ ಬರವಣಿಗೆಯು ಸಾಕ್ಷಿಯಂತಿದೆ. ಮುನ್ನುಡಿಯಲ್ಲಿ ಲೇಖಕರು ‘ಪ್ರಕೃತಿಯ ಎಲ್ಲ ಜೀವಿಗಳಿಗೆ ಊಟ ನೀರಡಿಕೆಯಷ್ಟೆ ಮೈಥುನವು ಪ್ರಾಥಮಿಕ ಅಗತ್ಯ ಮತ್ತ ನಿಸರ್ಗ ನಿಯಮ. ಅದನ್ನು ಬಂಧಿಸಲು ಹೋದಷ್ಟು ಅಪಾಯ ಹೆಚ್ಚು. ಬಂಧಿಸಿದ್ದರ ಪ್ರತಿರೋಧವಾಗಿ, ಈ ಅಮಾಯಕ ಹುಡುಗಿಯರು ಈ ವಿಷವರ್ತುಲದಲ್ಲಿ ಸಿಲುಕಿದ್ದಾರೆ. ಅವರು ನಮ್ಮಂಥವರ ತಾಯಿ, ಮಗಳು, ಹೆಂಡತಿ, ಅಕ್ಕ-ತಂಗಿಯರಾಗಬಹುದಿತ್ತು. ಇದೆಲ್ಲಕ್ಕೂ ಅವಕಾಶವಾಗದೆ ಅವರು ಬೀದಿಗಿಳಿಯಬೇಕಾಗಿ ಬಂದದ್ದು ದುರಂತ ಸತ್ಯ’ ಎಂದು ಹೇಳಿರುವುದು ಕಾದಂಬರಿಯಲ್ಲಿ ಕಥೆಯು ನಡೆಯವ ಸ್ವರೂಪವನ್ನು ಕುರಿತು ಸೂಚ್ಯವಾಗಿ ಹೇಳಿದಂತಿದೆ.

About the Author

ಹನುಮಂತ ಹಾಲಿಗೇರಿ
(20 October 1980)

ಬಾಗಲಕೋಟೆ ಸಮೀಪದ ತುಳಸಿಗೇರಿಯವರಾದ ಹನಮಂತ ಹಾಲಿಗೇರಿಯವರು ಬಸವೇಶ್ವರ ಕಾಲೇಜಿನಲ್ಲಿ ಬಿ.ಎ. ವಿದ್ಯಾರ್ಥಿಯಾಗಿದ್ದರೂ ಅದನ್ನು ಅರ್ಧಕ್ಕೆ ಕೈ ಬಿಟ್ಟು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಗ್ರಾಮೀಣ ಅಭಿವೃದ್ಧಿ ವಿಭಾಗದಲ್ಲಿ ಪದವಿ ಪಡೆದರು. ಸರ್ವ ಶಿಕ್ಷಣ ಅಭಿಯಾನದ ಟೀಚರ್ ಆಗಿ ಮೂರು ವರ್ಷಗಳ ಕಾಲ ಗ್ರಾಮೀಣ ಗುರುಕುಲ ನಡೆಸಿರುವ ಅವರು, ನಂತರ ‘ಭೈಪ್’ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸೇರಿ ಅಲ್ಲಿಯೂ ಮೂರು ವರ್ಷ ಕೆಲಸ ಮಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಮಾಡುವ ಉದ್ದೇಶದಿಂದ ನಿಸರ್ಗ ಮಿಲ್ಕ್ ಡೈರಿ ಸಂಸ್ಥೆ ಕಟ್ಟಿದ್ದರು. ಕೆಂಗುಲಾಬಿ ಕಾದಂಬರಿ ಪ್ರಕಟಿಸುವ ಮುನ್ನ ಅವರು ಎಂಟನೇ ತರಗತಿಯಲ್ಲಿದ್ದಾಗ ‘ರೊಚ್ಚಿಗೆದ್ದ ...

READ MORE

Conversation

Related Books