ಚೈತ್ರ ರಾಗದ ಹಾಡು

Author : ಹೆಚ್.ಜಿ. ರಾಧಾದೇವಿ

₹ 125.00




Published by: ಶ್ರೀ ಲಕ್ಷ್ಮಿ ವೆಂಕಟೇಶ್ವರ ಪ್ರಕಾಶನ
Address: ನ0.298,6ನೇ ಕ್ರಾಸ್ ತ್ರಿವೇಣಿ ರಸ್ತೆ, ಯಶವಂತಪುರ,ಬೆಂಗಳೂರು -560022

Synopsys

ಖ್ಯಾತ ಕಾದಂಬರಿಗಾರ್ತಿ ಹೆಚ್.ಜಿ.ರಾಧಾದೇವಿ ಅವರ ಸಾಮಾಜಿಕ ಕಾದಂಬರಿ ‘ಚೈತ್ರ ರಾಗದ ಹಾಡು’. ಹತ್ತೆಕ್ರೆ ಜಮೀನು ಹೊಂದಿದ ಪಾರ್ವತಮ್ಮ ಪರಮೇಶ್ವರಯ್ಯ ದಂಪತಿಗಳಿಗೆ, ವೆಂಕಟೇಶ, ಗೋವಿಂದ, ಶ್ರೀನಿವಾಸ, ಲಲಿತ ಎಂಬ ನಾಲಕ್ಕು ಮಂದಿ ಮಕ್ಕಳು.... ವೆಂಕಟೇಶ,ಗೋವಿಂದ ಇಬ್ಬರೂ ವಿದ್ಯೆಯಲ್ಲಿ ಚುರುಕು.... ಶ್ರೀನಿವಾಸ ಬಾಲ್ಯ ದಲ್ಲಿ ಆಟವಾಡುತ್ತಿದ್ದಾಗ ಬಿದ್ದು ತಲೆಗೆ ಏಟು ತಾಗಿದುದರಿಂದ ಮ0ಕಾಗಿ ಕುಳಿತು ಜೊಲ್ಲು ಸುರಿಸುತ್ತಿದ್ದ.... ಬಗೆ ಬಗೆ ಔಷದಿ ಕೊಡಿಸಿದ ಕಾರಣ ಮನೆಯವರು ಹೇಳಿದ ಮಾತು ಅರ್ಥ ಮಾಡಿಕೊಂಡು, ಹೇಳಿದ ಮಾತು ಕೇಳುತ್ತಿದ್ದ.... ವಿದ್ಯಾಭ್ಯಾಸಕ್ಕೆ ವಿಶೇಷ ವ್ಯವಸ್ಥೆ ಮಾಡಿದರೂ, ವಿದ್ಯೆ ಕಲಿಯದಿದ್ದರೂ ಶುಭ್ರ ವಾಗಿ ಬಟ್ಟೆ ಧರಿಸುತ್ತಿದ್ದ.... ಹೇಳಿದ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದ.... ಪರಮೇಶ್ವರಯ್ಯ ನವರ ಮರಣಾನಂತರ ಜಮೀನು ಮಾರಾಟಮಾಡಿ, ವೆಂಕಟೇಶ ಹಾಗು ಗೋವಿಂದ ಉದ್ಯೋಗಕ್ಕೆ ಸೇರಿದರು... ಗೋವಿಂದ ಸಹೋದ್ಯೋಗಿ ಇಂದಿರಾಳನ್ನು ಪ್ರೀತಿಸಿ ಮದುವೆ ಆದ ನಂತರ ವೆಂಕಟೇಶ ಕೂಡಾ ಸಂಸಾರಿಯಾದ... ಅತ್ತಿಗೆಯಂದಿರು ದಿನಾ ಮನೆ ಕೆಲಸ ವನ್ನು ಶ್ರೀನಿವಾಸನಿಗೆ ಅಂಟಿಸುತ್ತಿದ್ದರು....ಈ ನಡುವೆ ವಾರದಲ್ಲಿ 5ದಿನ ಕೆಲಸ ವಿರುವ ಒಂದು ಪುಟ್ಟ ಉದ್ಯೋಗ ಶ್ರೀನಿವಾಸನಿಗೆ ದೊರೆಯುತ್ತದೆ... ಎಲ್ಲರೂ ಅವನನ್ನು ಶೋಷಿಸುವುದನ್ನು ನೋಡ್ತಾ, ಆತನಿಗೊಂದು ಮದುವೆ ಆಗಲಿಲ್ಲ ಅನ್ನುವ ಬೇಸರಕ್ಕೂ ಕೊರಗಿ ಒಂದು ದಿನ ಪಾರ್ವತಮ್ಮ ತೀರಿ ಹೋಗುತ್ತಾರೆ... ತಾಯಿಯ ಮರಣಾನಂತರ ಶ್ರೀನಿವಾಸ ಇನ್ನೂ ಹೆಚ್ಚು ಶೋಷಣೆಗೊಳಗಾದ.,. ತಿರಸ್ಕಾರವನ್ನೂ ಅನುಭವಿಸಿದ... ಪಾರ್ವತಮ್ಮ ಆತನ ಪಾಲಿನ ಆಸ್ತಿಗೆ ಭದ್ರವಾದ ವ್ಯವಸ್ಥೆಯನ್ನು ಮಾಡಿದ್ದರು... ಶ್ರೀನಿವಾಸ ಉದ್ಯೋಗ ಮಾಡುವ ಜಾಗದಲ್ಲಿ ಪರಿಚಿತರಾದ ಸುಂದರಮ್ಮ ನವರ ಮಗಳು ಈ ಕಥಾ ನಾಯಕಿ ಚಂದ್ರಿಕಾ.... ಅವಳ ಬದುಕಲ್ಲಿ ಚಂದ್ರಿಕೆ ಹರಡಿರಲಿಲ್ಲ... ದಟ್ಟವಾದ ಅಮಾವಾಸ್ಯೆಯ ಕತ್ತಲನ್ನು ಬೆಳದಿಂಗಳಾಗಿ ಪರಿವರ್ತಿಸುವ ಕಲೆ ಅವಳಲ್ಲಿತ್ತು.... ತನ್ನ ದಾರಿಯಲ್ಲಿ ಮುಳ್ಳು ಹರವುವವರು ಇರುವಾಗ ತನ್ನ ಪಾಲಿನ ಚೈತ್ರ ರಾಗದ ಹಾಡು ಹೇಗೋ ಅನ್ನುವ ಚಿಂತೆ ಆಕೆಗೆ...ಮುಳ್ಳು ಹರವಲು ಯತ್ನಿಸಿದವರಿಗೆ ಹೂವಿನ ಹಾದಿ ಮಾಡಿ ಕೊಟ್ಟು ಕ್ಷಮಿಸುತ್ತಾಳೆ.... ಚಂದ್ರಿಕಾಳ ಬಾಳಲ್ಲಿ ಮೂಡಿದ ಹಾಡು ಯಾವುದು... ಆ ಹಾಡು ಇಂಪಾಗಿತ್ತೇ... ಶ್ರೀನಿವಾಸನ ಜೀವನ ದಲ್ಲಿ ತಿರುವು ಸಂಭವಿಸಿತೇ.... ಇದನ್ನು ಈ ಕೃತಿ ಓದಿಯೇ ಅರಿಯಬೇಕು.....

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books