ಶರಪಂಜರ

Author : ತ್ರಿವೇಣಿ

Pages 214

₹ 135.00




Year of Publication: 2015
Published by: ತ್ರಿವೇಣಿ ಪಬ್ಲಿಕೇಷನ್ಸ್
Address: # 1195, ಬಾಲಕೃಷ್ಣರಾವ್, ಚಾಮರಾಜಪುರಂ, ಮೈಸೂರು-570005

Synopsys

ಖ್ಯಾತ ಕಾದಂಬರಿಗಾರ್ತಿ ತ್ರಿವೇಣಿ ಅವರ ಜನಪ್ರಿಯ ಕಾದಂಬರಿ ಶರಪಂಜರ. ಹೆಣ್ಣಿನ ದೇಹ, ಒತ್ತಡ, ಮಾನಸಿಕ ಸ್ಥಿತಿಗತಿಗಳನ್ನು ಮನೋಶಾಸ್ತ್ರೀಯವಾಗಿ ವಿಶ್ಲೇಷಿಸುವ ಕತೆಯನ್ನು ಹೊಂದಿರುವ ಈ ಕಾದಂಬರಿ ಚಲನಚಿತ್ರವಾಗಿಯೂ ಜನಪ್ರಿಯತೆ ಪಡೆದಿದೆ. ಖ್ಯಾತ ನಟಿ ಕಲ್ಪನಾ ಅವರ ನಟನೆಯಲ್ಲಿ ಮೂಡಿಬಂದ ಶರಪಂಜರ ಚಲನಚಿತ್ರ ಕಲ್ಪನಾ ನಟನೆಯ ಅತ್ಯನ್ನುತ ಚಿತ್ರಗಳಲ್ಲೊಂದು.

About the Author

ತ್ರಿವೇಣಿ
(29 July 1963 - 05 July 1963)

ತ್ರಿವೇಣಿ ಎಂಬ ಬರಹನಾಮದಿಂದ ಪ್ರಸಿದ್ದರಾದ ಅನುಸೂಯ ಶಂಕರ್ ರವರು ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರು.  ತಂದೆ ಬಿ.ಎಮ್. ಕೃಷ್ಣಸ್ವಾಮಿ, ತಾಯಿ ತಂಗಮ್ಮ ಇವರ ಮಗಳಾಗಿ 1928 ರ ಸೆಪ್ಟಂಬರ್ 1 ರಂದು ಮೈಸೂರಿನಲ್ಲಿ ಇವರು ಜನಿಸಿದರು. ಹೈಸ್ಕೂಲ್ ವರೆಗಿನ ಶಿಕ್ಷಣ ಮಂಡ್ಯದಲ್ಲಿ ಹಾಗೂ ಕಾಲೇಜು ಶಿಕ್ಷಣ ಮೈಸೂರಿನಲ್ಲಿ ಆಯಿತು. 1947ರಲ್ಲಿ ಮಹಾರಾಜಾ ಕಾಲೇಜಿನಿಂದ ಮನ:ಶಾಸ್ತ್ರದಲ್ಲಿ ಚಿನ್ನದ ಪದಕದೊಂದಿಗೆ ಬಿ.ಎ.ಪದವಿ ಪಡೆದರು. ಕನ್ನಡದ ಕಣ್ವ ಬಿ.ಎಂ.ಶ್ರೀಯವರ ಸೋದರನ ಪುತ್ರಿಯಾಗಿದ್ದ ತ್ರಿವೇಣಿಯವರು ಸ್ತ್ರೀಯರು ಹೆಚ್ಚಾಗಿ ಬರೆಯದೇ ಇದ್ದ ಕಾಲದಲ್ಲಿ ಬರವಣಿಗೆ ಪ್ರಾರಂಬಿಸಿ ಕೆಲವೇ ವರ್ಷಗಳಲ್ಲಿ ಅಸಾಧಾರಣ ಜನಪ್ರಿಯತೆಯನ್ನು ಗಳಿಸಿದರು. 1953 ರಲ್ಲಿ ತ್ರಿವೇಣಿಯವರ ಮೊದಲನೆಯ ಕಾದಂಬರಿ ಪ್ರಕಟವಾಯಿತು. ಹತ್ತು ವರ್ಷಗಳಲ್ಲಿ ...

READ MORE

Related Books