ಲೋಟಸ್‌ ಪಾಂಡ್‌

Author : ತಾರಾ ಭಟ್

Pages 116

₹ 50.00
Published by: ಲೋಹಿಯ ಪ್ರಕಾಶನ
Address: ಕ್ಷಿತಿಜ, ಕಪ್ಪಗಲ್ಲು ರಸ್ತೆ, ಗಾಂಧಿನಗರ, ಬಳ್ಳಾರಿ-583103
Phone: 839225741

Synopsys

‘ಲೋಟಸ್‌ ಪಾಂಡ್‌’ ಕೆ. ತಾರಾಭಟ್‌ ಅವರ ಕಾದಂಬರಿಯಾಗಿದೆ. ಈ ನೆಲಕ್ಕೆ ಹೊಂದದ ತಳಿ, ನಮ್ಮ ಸಂಸ್ಕೃತಿಗೆ ಭಿನ್ನವಾದ ಯಾವೊಂದು ಸಹಾ ನಮ್ಮಲ್ಲಿ ಗಟ್ಟಿಯಾಗಿ ಬೇರು ಬಿಡಲಾರದೆಂಬ ಕಟುಸತ್ಯವನ್ನು ಈ ಕಾದಂಬರಿ ಧ್ವನಿಸುತ್ತದೆ.

About the Author

ತಾರಾ ಭಟ್
(03 September 1944)

ಕಥೆಗಾರ್ತಿ, ಕಾದಂಬರಿಗಾರ್ತಿ ತಾರಾ ಭಟ್ ಅವರು 1944 ಸೆಪ್ಟಂಬರ್ 03 ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದರು. ‘ಅವ್ಯಕ್ತ, ಲೋಟಸ್ ಪಾಂಡ್’ ಅವರ ಪ್ರಸಿದ್ಧ ಕಾದಂಬರಿಗಳು. ‘ಹೊಕ್ಕಳ ಬಳ್ಳಿ, ಸರ್ವಾಧಿಕಾರಿ, ಪಂಚಶತ್ತಮ’ ಎಂಬ ನಾಟಕಗಳು, ’ಗಾಳಿಯಲ್ಲಿ ಹೆಪ್ಪುಗಟ್ಟಿದ ಮೌನ, ಬೋಳು ಮರದ ಕೊಂಬೆಗಳು, ಸರಿದು ಹೋದ ಕಾಲ’ ಕಥಾಸಂಕಲನಗಳನ್ನು ರಚಿಸಿದ್ದಾರೆ. ‘ಲೋಟಸ್‌ಪಾಂಡ್’ ಕಾದಂಬರಿಗೆ ವರ್ಧಮಾನ ಪ್ರಶಸ್ತಿ’, ರಾಮಮನೋಹರ ದತ್ತಿನಿಧಿ ಪ್ರಶಸ್ತಿ ಲಭಿಸಿದೆ. ಅವರ ’ಅವ್ಯಕ್ತ’ ಕಾದಂಬರಿಗೆ ಪುತ್ತೂರು ಕರ್ನಾಟಕ ಸಂಘದಿಂದ ಉಗ್ರಾಣ ಪ್ರಶಸ್ತಿ ಲಭಿಸಿದೆ.  ...

READ MORE

Reviews

ಹೊಸತು- 2004- ಜನವರಿ

'ಲೋಟಸ್ ಪಾ೦ಡ್ !' ನಮ್ಮ ತಾವರೆಯ ಕೊಳವನ್ನೂ ನಾವು ಹಾಗೆನ್ನಲಾರೆವು ! ನಮಗೆ ವಿದೇಶಿ ಹೆಸರಿನಿಂದ ನಮ್ಮವಸ್ತುಗಳನ್ನು ಗುರುತಿಸಿಕೊಳ್ಳುವ ಬಯಕೆ. ಈ ನೆಲಕ್ಕೆ ಹೊಂದದ ತಳಿ, ನಮ್ಮ ಸಂಸ್ಕೃತಿಗೆ ಭಿನ್ನವಾದ ಯಾವೊಂದು ಸಹಾ ನಮ್ಮಲ್ಲಿ ಗಟ್ಟಿಯಾಗಿ ಬೇರು ಬಿಡಲಾರದೆಂಬ ಕಟುಸತ್ಯವನ್ನು ಈ ಕಾದಂಬರಿ ಧ್ವನಿಸುತ್ತದೆ. ಕೊಳ್ಳುಬಾಕ ಸಂಸ್ಕೃತಿಯತ್ತ ಒಲವನ್ನು ಬೆಳೆಸಿಕೊಳ್ಳುತ್ತಿರುವ ಶ್ರೀಮಂತ ವರ್ಗದ ಜನರಿಗೆ ಇಲ್ಲಿನ ಪಾತ್ರಗಳು ಅನ್ವಯಿಸುತ್ತವೆ. ಕೃತ್ರಿಮತೆ - ಥಳುಕಿನ ಬದುಕಿನ ಒಂದು ಅನಾವರಣ. 

Related Books