ಅಗ್ನಿಗರ್ಭ

Author : ಜಿ. ಕುಮಾರಪ್ಪ

Pages 136

₹ 60.00
Year of Publication: 2001
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

‘ಅಗ್ನಿಗರ್ಭ’ ಜಿ. ಕುಮಾರಪ್ಪ ಅವರ ಅನುವಾದಿತ ಕಾದಂಬರಿಯಾಗಿದೆ. ಮಹಾಶ್ವೇತಾದೇವಿ ಅವರ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದು, ನಕ್ಸಲ್‌ ಬೇರಿ ಆಂದೋಲನದ ಹಿನ್ನೆಲೆಯಿರುವ ಕೃತಿಯಲ್ಲಿ ಶೋಷಿತರ ಆಕ್ರೋಶವನ್ನು ಲೇಖಕರು ಈ ಕೃತಿಯಲ್ಲಿ ತಿಳಿಸಿದ್ದಾರೆ.

About the Author

ಜಿ. ಕುಮಾರಪ್ಪ - 07 June 2020)

ಕನ್ನಡ ಸಾಹಿತ್ಯ ವಲಯದಲ್ಲಿ ತನ್ನದೇ ಛಾಪು ಮೂಡಿಸಿದ್ದ ಬರಹಗಾರ ಅನುವಾದಕ ಜಿ. ಕುಮಾರಪ್ಪ ಅವರು ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕಿನ ಬಸಾಪುರ ಗ್ರಾಮದವರು. ಕೋಲ್ಕತ್ತಾದ ಬಂಗಾಲಿ ನ್ಯಾಷನಲ್‌ ಗ್ರಂಥಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಇವರು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದವರು.  ಧೀಮಂತ, ಜಪಾನಿ ಹೈಕಗಳು ಕೃತಿಗಳನ್ನು ರಚಿಸಿರುವ ಇವರು ಬಂಗಾಲಿಯ ಹಲವಾರು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮಾತೆಯರು ಮಾನ್ಯರಾಗಿದ್ದಾಗ, ಸಂಶೋಧನೆಯ ಹಾದಿ, ಪ್ರತಿರೋಧ ಮುಂತಾದವು ಇವರು ಅನುವಾದಿಸಿರುವ ಪ್ರಮುಖ ಕೃತಿಗಳು.  ...

READ MORE

Reviews

ಹೊಸತು-2002- ನವೆಂಬರ್‌

ದೇಶದ ಮಣ್ಣನ್ನು ಯಾವ ಕಡೆಯಿಂದ ಅಗೆದರೂ ದೀನರ-ಭೂಹೀನ ಕೃಷಿಕರ ಒಂದೇ ಮಾತಿನಲ್ಲಿ ಹೇಳುವುದಾದರೆ ಶೋಷಿತರ ಕ್ಷೀಣ ಧ್ವನಿಯೇ ನೆಲದೊಳಗಿನಿಂದ ಕೇಳಿಸುತ್ತದೆ. ತಕ್ಕಡಿಯ ತಟ್ಟೆಗಳನ್ನು ಸಮನಾಗಿ ತೂಗಿಸಲು ರಾಜಕೀಯದ ಎಡವಾಗಲೀ ಬಲವಾಗಲೀ ಯಾವುದೇ ಪಂಥಕ್ಕೂ ಸಾಧ್ಯವಾಗಿಲ್ಲ. ನಕ್ಸಲ್‌ ಬಾರಿ ಆಂದೋಲನದ ಹಿನ್ನೆಲೆಯಿರುವ ಈ ಕೃತಿಯಲ್ಲಿ ಶೋಷಿತರ ಆಕ್ರೋಶವನ್ನು ಲೇಖಕಿ ಸಮರ್ಥವಾಗಿ ಚಿತ್ರಿಸಿದ್ದಾರೆ.

Related Books