ನಾವು ಕಟ್ಟಿದ ಸ್ವರ್ಗ (ಕಾದಂಬರಿ)

Author : ಶಿವರಾಮ ಕಾರಂತ

Pages 283

₹ 130.00




Year of Publication: 2015
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯರಸ್ತೆ, ನ್ಯಾಷನಲ್ ಮಾರುಕಟ್ಟೆ ಹಿಂಭಾಗ, ಗಾಧೀನಗರ, ಬೆಂಗಳೂರು- 560009  
Phone: 080 4011 4455

Synopsys

ನಾವು ಕಟ್ಟಿದ ಸ್ವರ್ಗ-ಡಾ. ಕೆ. ಶಿವರಾಮ ಕಾರಂತರು ಬರೆದ ಕಾದಂಬರಿ. ಭಾರತದ ರಾಜಕೀಯ ಮತ್ತು ಸಾರ್ವಜನಿಕ ರಂಗದಲ್ಲಿ ಬದಲಾವಣೆಗೊಂಡ ಬದುಕಿನ ಮೌಲ್ಯಗಳ ಬಗ್ಗೆ ವಿಶೇಷ ದೃಷ್ಟಿ ಹರಿಸಿದ ಕಥಾನಕವಿದು. ಸ್ವಾರ್ಥಸಾಧನೆಯೇ ಮುಖ್ಯ ಗುರಿಯಾಗಿದ್ದ ರಾಜಕೀಯ ಕುತಂತ್ರಗಳನ್ನು, ಶಕುನಿಗಳಾಗಿದ್ದ ಸ್ಥಳೀಯ ಪುಡಾರಿಗಳು, ದೇಶ ಸೇವೆ, ಜನಸೇವೆಗಳ ನೆಪದಿಂದ ಆಡುತ್ತಿರುವ ನಾಟಕಗಳನ್ನು, ಹೂಡುತ್ತಿರುವ ಕುತಂತ್ರಗಳ ಚಿತ್ರಣವಿದೆ. 

ಚಂಪಲಾಪುರ ಹಳ್ಳಿಯಲ್ಲಿ ಹುಟ್ಟಿದ ರಂಗಣ್ಣ ಮುಂಬಯಿಯಲ್ಲಿ ಪತ್ರಕರ್ತನಾಗಿರುತ್ತಾನೆ. ಚಂಪಲಾಪುರದಲ್ಲಿ ನಡೆಯುವ ಈ ಸಂಗತಿಗಳನ್ನು ಆತ ತಿಳಿಯುತ್ತಾನೆ. ಕಪಟ ರಾಜಕಾರಣಿಗಳ ಸೋಗನ್ನು ಕಂಡ ಬಳಿಕವೂ, ಪ್ರಜೆಗಳು ಅಲ್ವ ಸ್ವಾರ್ಥಕ್ಕಾಗಿ ಅಂಥವರನ್ನೇ ಚುನಾವಣೆಗಳಲ್ಲಿ ಗೆಲ್ಲಿಸಿ, ಅಂಥವರೊಡನೆ ಒಂದಿಲ್ಲೊಂದು ಬಗೆಯಲ್ಲಿ ಶಾಮೀಲಾಗಿ ತಮ್ಮ ಕಾರ್ಯಸಾಧನೆಯನ್ನು ಮಾಡಿಕೊಳ್ಳುವ ಚಿತ್ರವನ್ನೂ ಆತ ಚಂಪಲಾಪುರದಲ್ಲಿ ನೋಡುತ್ತಾನೆ. ಪ್ರತಿಯೊಬ್ಬ ಪ್ರಜೆಯೂ ತನ್ನ ಹಕ್ಕುಗಳಿಗಾಗಿಯೇ ಚಳವಳಿಯನ್ನು ಹೂಡುತ್ತಿರುವ ದೃಶ್ಯವನ್ನು ಅವನು ಕಾಣುತ್ತಾನೆ. ಯಾರೋಬ್ಬರೂ ತಮ್ಮ ಕರ್ತವ್ಯದ ಕಡೆಗೆ, ಇತರರಿಗೆ ತಮ್ಮಿಂದಾಗಬಹುದಾದ ಅನಾನುಕೂಲತೆ, ತೊಂದರೆಗಳ ಬಗ್ಗೆ ಯೋಚನೆಯನ್ನೇ ಮಾಡದ ಸ್ಥಿತಿಗತಿಗಳನ್ನು ಕಣ್ಣಾರೆ ಕಾಣುತ್ತಾನೆ. ಇಂಥವರ ಮಧ್ಯೆ, ದೇವೇಂದ್ರಪ್ಪನಂತಹ ಪ್ರಾಮಾಣಿಕ ರಾಜಕಾರಣಿ ತನ್ನ ಅಭಿಪ್ರಾಯಗಳನ್ನು ನಿರ್ಭೀತಿಯಿಂದ ವ್ಯಕ್ತಪಡಿಸುವುದು ಮತ್ತು ಇಂತಹ ದುಸ್ಥಿತಿಗಾಗಿ ಆತ ಕಣ್ಣೀರು ಸುರಿಸುವುದನ್ನೂ ಅವನು ನೋಡುತ್ತೇನೆ. ಕೊನೆಯ ಪಕ್ಷ ಇಂಥ ಮಾತುಗಳನ್ನು ಹೇಳಲು ಹಕ್ಕುಳ್ಳ ಒಬ್ಬರಾದರೂ ಉಳಿದಿದ್ದಾರೆ ಎಂಬ ಸಂತೋಷಪಟ್ಟುಕೊಳ್ಳುವ ಭಾಗ್ಯ ತನಗೆ ದೊರೆತುದಕ್ಕಾಗಿ ಸಮಾಧಾನ ತಾಳುತ್ತಾನೆ. ಸ್ವಾತಂತ್ಯ್ರಾನಂತರ ಭಾರತದ ಬಗ್ಗೆ ಕಟ್ಟಿರುವ ಕನಸುಗಳು ಹೇಗೆ ಪುಢಾರಿಗಳ ಪಾಲಾಗಿ ಹೋಗುತ್ತಿದೆ ಎಂಬುದರ ಸ್ಪಷ್ಟ ಚಿತ್ರಣ ನೀಡುವ ವಿಡಂಬನಾತ್ಮಕ ಕಾದಂಬರಿ ಇದು. 

ಬೆಂಗಳೂರಿನ ರಾಜಲಕ್ಷ್ಮೀ ಪ್ರಕಾಶನವು 1980ರಲ್ಲಿ (ಪುಟ: 298) ಈ ಕಾದಂಬರಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು. 

 

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books