ಸಂಧ್ಯಾ ದೀಪ

Author : ರಜನಿ ಭಟ್ ಕಲ್ಲಡ್ಕ

₹ 170.00
Year of Publication: 2022
Published by: ನಿಮ್ಮ ಪುಸ್ತಕ ಪಬ್ಲಿಕೇಷನ್ಸ್
Address: #17, ಸನ್ನಿಧಿ, 10ನೆಯ ಮುಖ್ಯ ರಸ್ತೆ, ಮಲ್ಲೇಶ ಪಾಳ್ಯ, ಬೆಂಗಳೂರು- 560075

Synopsys

‘ಸಂಧ್ಯಾ ದೀಪ’ ಕೃತಿಯು ರಜನಿ ಭಟ್ ಕಲ್ಲಡ್ಕ ಅವರ ಕಾದಂಬರಿಯಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿರುವ ಕೆಲವೊಂದು ವಿಚಾರಗಳು ಹೀಗಿವೆ : “ಹಾಗಿದ್ದರೆ.. ಅಲ್ಲಿ ಶಾಲೆಯಲ್ಲಿ ಕಂಡವಳು ಯಾರು? ಹೆಸರು ಕೇಳಿದಾಗ ಸಂಧ್ಯಾ ಅಂತ ಹೇಳಿದವಳು ಅವಳೇ ಇವಳು, ಅದು ಹೇಗೆ ಸಾಧ್ಯ? ನಾನು ಉಪ್ಪರಿಗೆಯಲ್ಲಿ ಕಂಡ ಅದೇ ಬೆಳಕು ಇಲ್ಲೂ ಪ್ರತಿಫಲಿಸುತ್ತಿದೆ. ಎಲ್ಲವೂ ಏನೋ ಒಂದು ಕಥೆ ಹೇಳುತ್ತಿದೆ. ಯಾಕೆ ಹೀಗೆ? ಉಪ್ಪರಿಗೆಯಲ್ಲಿ ಕಂಡ ಆ ಬೆಳಕಿಗೂ ಶಾಲೆಯಲ್ಲಿ ಕಂಡ ಹುಡುಗಿಗೂ ಏನು ಸಂಬಂಧ?” ಶಾಂಭವಿ ಟೀಚರ್ ತನ್ನ ಎದುರು ಕಂಡ ಹುಡುಗಿಯ ಮುಖವನ್ನು ದಿಟ್ಟಿಸಿದಾಗ ಅವರೊಳಗೆ ಏನೋ ಒಂದು ಹೇಳಲಾರದ ಭಾವ, ಮುಂದೆ ಬರುವ ಸನ್ನಿವೇಶವನ್ನು ಅವರು ಮೊದಲೇ ಊಹಿಸಿದಂತೆ. ಹಾಗಾಗದಿರಲಿ ಅಂತ ಶೃಂಗೇರಿಯ ಅಮ್ಮನ ನೆಲದಲ್ಲಿ ಕಾಲಿರಿಸಿದವರು ಮನನೊಂದು ಪ್ರಾರ್ಥಿಸಿದರು ಎಂದು ವಿಶ್ಲೇಷಿತವಾಗಿದೆ.

About the Author

ರಜನಿ ಭಟ್ ಕಲ್ಲಡ್ಕ

ರಜನಿ ಭಟ್ ಕಲ್ಲಡ್ಕ ಅವರು ಮೂಲತಃ ದಕ್ಷಿಣ ಕನ್ನಡದ ಕಲ್ಲಡ್ಕದವರು. ಬರವಣಿಗೆಯ ಅವರ ಆಸಕ್ತಿ ಕ್ಷೇತ್ರವಾಗಿದೆ. ಪ್ರಸ್ತುತ ಅಬುದಬಿಯಲ್ಲಿ ವಾಸವಿದ್ದಾರೆ. ಕೃತಿಗಳು : ಸಂಧ್ಯಾ ದೀಪ ...

READ MORE

Related Books