1990ರಲ್ಲಿ ರಜತ ಕಮಲ ರಾಷ್ಟ್ರೀಯ ಪ್ರಶಸ್ತಿ ಪಡೆದ ಹಾಗೂ ಕನ್ನಡದ ಚಲನಚಿತ್ರವಾದ ಕೃತಿ-ಕಾಡಿನ ಬೆಂಕಿ. ನಾ. ಡಿಸೋಜ ಅವರು ರಚಿಸಿದ್ದು, ಲೈಂಗಿಕ ಅಗತ್ಯಗಳು, ಅದರ ಒತ್ತಡಗಳು, ಮಡಿವಂತಿಕೆಯ ಸಮಾಜದಲ್ಲಿ ಇಂತಹ ಭಾವನೆಗಳಿಗೆ ಇರದ ಅವಕಾಶಗಳು, ಇದರಿಂದ ವಿಶೇಷವಾಗಿ ಮಹಿಳೆಯರು ಅನುಭವಿಸುವ ಮನೋ ಯಾತನೆ-ಇಂತಹ ವಿಷಯ ವಸ್ತುವನ್ನು ಒಳಗೊಂಡ ಕಾಡಿನ ಬೆಂಕಿ ಕಾದಂಬರಿಯು ಚಲನಚಿತ್ರವಾಗಿ ಹೆಚ್ಚು ಪ್ರಸಿದ್ಧಿಗೆ ಬಂದಿತು. ಮನುಷ್ಯನಿಗೆ ಊಟ,ನಿದ್ರೆ, ನೀರಡಿಕೆಯಂತೆಯೇ ಲೈಂಗಿಕ ಅಗತ್ಯವೂ ಇದೆ ಎಂಬ ಶಿಕ್ಷಣವು ಈ ಕಾದಂಬರಿಯಲ್ಲಿದೆ.
ನಾ ಡಿಸೋಜ ಬರಹಗಾರರು, ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ ಹೊಂದಿದವರು. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ ಅವರು ಹುಟ್ಟಿದ್ದು ಜೂನ್ 6, 1937 ರಲ್ಲಿ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ಅವರು 2025 ಜ. 05 ಭಾನುವಾರದಂದು ನಿಧನರಾದರು. ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ಪ್ರಾರಂಭದ ದಿನಗಳಲ್ಲಿ 'ಪ್ರಪಂಚ' ಪತ್ರಿಕೆಗೆ ...
READ MORE