ಅಜ್ಜನ ಕಮೋಡು

Author : ಹಾಡ್ಲಹಳ್ಳಿ ನಾಗರಾಜ್

Pages 142

₹ 150.00




Year of Publication: 2021
Published by: ಹಾಡ್ಲಹಳ್ಳಿ ಪಬ್ಲಿಕೇಷನ್ಸ್
Address: # 9 ನೇ ಮುಖ್ಯ ರಸ್ತೆ, ಕೆ. ಆರ್. ಪುರಂ, ಹಾಸನ -573201
Phone: 8747043485

Synopsys

’ಅಜ್ಜನ ಕಮೋಡು’ ಹಾಡ್ಲಹಳ್ಳಿ ನಾಗರಾಜ್ ಅವರ ಕಾದಂಬರಿ. ಬೇರು ಮತ್ತು ಚಿಗುರುಗಳ ನಡುವಿನ ಪ್ರಾಪಂಚಿಕ ವ್ಯವಹಾರಗಳ ಕುರಿತ ಸಹಜ ಸಂಭಾಷಣಾ ಶೈಲಿಯಲ್ಲಿರುವ ’ ಅಜ್ಜನ ಕಮೋಡು’ ಮನೆಯಲ್ಲೇ ಎಲ್ಲವೂ ನಡೆಯುತ್ತಿದೆಯೇನೋ ಎಂಬಂತೆ ಕಣ್ಣಿಗಿಳಿಯುವ ಬರವಣಿಗೆಗಳನ್ನು ಒಳಗೊಂಡಿದೆ. ಈ ಕಾದಂಬರಿಯಲ್ಲಿ ವರ್ತಮಾನದ ಗೋಳು ಸಾಂದರ್ಭಿಕವಾಗಿ ಬಂದು ಹೋಗುತ್ತವೆ. ಕರೋನಾ ಸಂಕಷ್ಟಗಳು, ರೈತ ಬೆಳೆದ ಬೆಳಗಳಿಗೆ ಯೋಗ್ಯ ದರ ಇಲ್;ಲದೆ ಇರುವುದು, ರೈತ ಮಾಡುವ ಸಾಲ ತಂದೊಡ್ಡುವ ಬಿಕ್ಕಟ್ಟುಗಳು ಹೀಗೆ ಎಲ್ಲವನ್ನೂ ವಿವರಿಸುತ್ತದೆ. ಜೊತೆಗೆ ಪ್ರಸ್ತುತ ದಿನಗಳಲ್ಲಿ ಕೆಲಸ ಮಾಡಲು ಕೂಲಿಕಾರರೇ ಇಲ್ಲವಾಗಿರುವುದು, ಹಳೆಯ ಕಾಲದ ತರತಮ್ಯವಿಲ್ಲದ ಸಾಮಾಜಿಕ ವ್ಯವಸ್ಥೆ ಈಗ ಮಾಯವಾಘಿರುವುದು ಇಂತಹ ಸಂಗತಿಗಳ ಕಡೆಗೂ ಕಾದಂಬರಿ ಬೆರಳು ಮಾಡುತ್ತದೆ. ಆದರೆ ಕಾದಂಬರಿಯ ಪ್ರಧಾನ ನಡೆ ಇರುವುದು ಮನೋದಿಕತೆಯಲ್ಲಿ. ನಿವೃತ್ತನಾಗಿ ನಿತ್ಯವೂ ಗೆಳೆಯರೊಂದಿಗೆ ಕೂಡಿ ಕಾಲಹರಣ ಮಾಡುತ್ತ ಆಗಾಗ ಗುಂಡು ಪಾರ್ಟಿ ಮಾಡುತ್ತ ಸುಖವಾಗಿದ್ದವರಿಗೆ ಕರೋನಾ ಕಾರಣದಿಂದಾಗಿ ತೋಟದ ಮನೆಯಲ್ಲಿ ಲಾಕ್ ಆಗುವ ಸಂದರ್ಭದಲ್ಲಿ  ಮೊಮ್ಮಕ್ಕಳಿಗೆ ಕತೆ ಹೇಳುತ್ತ ಜೀವನ ದರ್ಶನ ಮಾಡಿಸುವ ಅಜ್ಜ ಇಲ್ಲಿ ಭೂತ ವರ್ತಮಾನವನ್ನು ಕೂಡಿಸುವ ಕೊಂಡಿಯಾಗಿ ಕಾಣುತ್ತಾನೆ.

ಕೃತಿಗೆ ಬೆನ್ನುಡಿ ಬರೆದಿರುವ ದಯಾ ಗಂಗನಘಟ್ಟ ಅವರು, `ಆಧುನಿಕ ಮತ್ತು ಗ್ರಾಮೀಣ ಬದುಕಿನ ವಿವರಣೆಗಳನ್ನು ಅವುಗಳದ್ದೇ ಆದ ಎಸೆನ್ಸ್ ಮೂಲಕ ವಿವರಿಸುತ್ತದೆ. ಎರಡು ಜನರೇಶನ್ ನಡುವಿನ ವಿಭಿನ್ನ ದೃಷ್ಟಿಕೋನ, ಪ್ರಕೃತಿ ಮತ್ತು ಮಾನವನ ಅವಿಷ್ಕಾರಗಳ ತಾಕಲಾಟಗಳನ್ನೆಲ್ಲಾ ಬೀಜ ಒಡೆದು ಬೆಳೆ ಮಾಡಿದಷ್ಟು ಸರಳವಾಗಿ ಓದುಗರಿಗೆ ತಲುಪುವಂತೆ ಲೇಖಕರ ಬರವಣಿಗೆಯಿದೆ. ಹೊಟ್ಟೆ ಹುಣ್ಣಾಗುವಷ್ಟು ನಗು ಹುಟ್ಟಿಸುವ ಜೊತೆಗೆ ಅಷ್ಟೇ ತಣ್ಣನೆ ಚಿಂತನೆಗೆ ಹಚ್ಚುವಂತ ಘಟನೆಗಳಿಂದ ತುಂಬಿದೆ’ ಎಂದು ಪ್ರಶಂಸಿಸಿದ್ದಾರೆ. 

 

About the Author

ಹಾಡ್ಲಹಳ್ಳಿ ನಾಗರಾಜ್

ಹಾಡ್ಲಹಳ್ಳಿ ನಾಗರಾಜು ಅವರು ಮೂಲತಃ ಹಾಸನಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಾಡ್ಲಹಳ್ಳಿ ಗ್ರಾಮದವರು. ತಂದೆ- ಗುರುಶಾಂತೇಗೌಡರು, ತಾಯಿ- ಪುಟ್ಟಮ್ಮ. ಕಡುಬಡತನದ ರೈತಾಪಿ ಕುಟುಂಬದಲ್ಲಿ ಜನಿಸಿದ ಅವರು ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾಪತ್ರಕ್ಕೆ ಪಾತ್ರರಾಗಿದ್ದಾರೆ. ಎನ್.ಸಿ.ಸಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ನಂತರ ಅದೇ ಇಲಾಖೆಯಲ್ಲಿ ಗೆಜೆಟೆಡ್ ಅಧಿಕಾರಿಯಾಗಿ ಸೇವೆಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಹಾಸನ ನಗರ ಸಮೀಪ ಅತ್ತಿಹಳ್ಳಿ ಎಂಬ ಗ್ರಾಮದಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅಪ್ಪಟ ಮಲೆನಾಡಿನ ಪರಿಸರದಲ್ಲಿ ಹುಟ್ಟಿಬೆಳೆದ ನಾಗರಾಜು ಅವರು ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮದೇ ಛಾಪುಮೂಡಿಸಿದ್ದಾರೆ. ...

READ MORE

Related Books