ಒಂದು ಆಸೆ ನೂರು ಕನಸು...

Author : ಮಧುಕರ ಬಿ. ಎ

Pages 171

₹ 100.00
Published by: ಅಡವಿಸ್ವಾಮಿ ಪ್ರಕಾಶನ
Address: ಅಡವಿಸ್ವಾಮಿ ನಿಲಯ ಚೌಡೇಶ್ವರಿ ರಸ್ತೆ ಅರಸೀಕೆರೆ.

Synopsys

ಬಿ.ಎ. ಮಧುಕರ ಅವರ ಚೊಚ್ಚಲ ಕಾದಂಬರಿ "ಒಂದು ಆಸೆ ನೂರು ಕನಸು." ಕೌಟುಂಬಿಕ ಆವರಣವುಳ್ಳ ಕೃತಿ. ಅರಸೀಕೆರೆ ಎಂಬ ಅರೆಮಲೆನಾಡ ಪ್ರದೇಶದಲ್ಲಿ ನಡೆಯುವ ಕಥೆ. ಮೂರು ಕುಟುಂಬಗಳ ಒಳಗೊಂಡು ಇದು ಸಾಗುತ್ತದೆ. 

ರಾಜೇಶ್ ಓದುವ ಹುಡುಗ. ಬಡತನದ ಹಿನ್ನೆಲೆಯವನು. ನೌಕರಿಗಾಗಿ ಓದಲೇಬೇಕು. ಇವನ ಮೇಲೆ ಅಪ್ಪನಿಗೆ ಅಪಾರ ಪ್ರೀತಿ. ಶಿಕ್ಷಕರೊಬ್ಬರಿಂದ ಪ್ರಭಾವಿತನಾಗಿ ಉಪಾಧ್ಯಾಯನಾಗಲೇಬೇಕೆಂಬ ಹುಕಿಗೆ ಬಿದ್ದು ಬಿಎಡ್‌ ಶಿಕ್ಷಣದಲ್ಲಿ ಮೊದಲಿಗನಾಗಿ ಉತ್ತೀರ್ಣನಾಗುತ್ತಾನೆ. ಬಳಿಕ ರಾಜೇಶನ ಬದುಕಿಗೆ ಹಲವರು ಪ್ರವೇಶಿಸುತ್ತಾರೆ. ರೋಚಕ ತಿರುವುಗಳು ಎದುರಾಗುತ್ತವೆ. ಇವೆಲ್ಲದರ ನಡುವೆಯೇ ರಾಜೇಶ್‌ ತನ್ನ ಆಸೆಯಂತೆ ಶಿಕ್ಷಕ ವೃತ್ತಿ ಹಿಡಿಯುತ್ತಾನೆಯೇ ಎಂಬುದು ಕುತೂಹಲದ ಸಂಗತಿ. 

Related Books