ಕವಿ ಎನ್. ಸಿ. ಪಾಟೀಲರು ಬರೆದ ಕವನ ಸಂಕಲನ-ಅರಳು ಮಲ್ಲಿಗೆ. ನಾಡು,ನುಡಿ, ದೇಶಭಕ್ತಿ ಮತ್ತು ಪರಿಸರ ಕಾಳಜಿಯ ಕವನಗಳಿದ್ದು, ಶೈಲಿ, ಹಾಸ್ಯ, ವ್ಯಂಗ್ಯದ ಮೂಲಕ ಗಮನ ಸೆಳೆಯುತ್ತವೆ.
ನಿಂಗಣ್ಣಗೌಡ ಚೆನ್ನಬಸಣ್ಣಪಾಟೀಲ್ ಮೂಲತಃ ಗದಗ ಜಿಲ್ಲೆಯ ತಾಲೂಕಿನ ಸಾಸರವಾಡ ಗ್ರಾಮದವರು. ಬಿ.ಎ. ಬಿ.ಇಡಿ. ಪದವೀಧರರು. ಗ್ರಾಮದಲ್ಲೇ ಕೃಷಿ ಕೈಗೊಂಡಿದ್ದಾರೆ. ಅರಳು ಮಲ್ಲಿಗೆ, ಕೆಂಪು ಬಾವುಟ-ಈ ಎರಡು ಅವರ ಕವನ ಸಂಕಲನಗಳು. ಶಿರಹಟ್ಟಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನ ಸಂದಿವೆ. ...
READ MORE